Growers Worried: ಕುಸಿತ ಹಾದಿಯಲ್ಲಿ ರಬ್ಬರ್ ಧಾರಣೆ
ರಬ್ಬರ್ ಆಮದಿನಿಂದ ದೇಶೀಯ ಉತ್ಪಾದಕರ ಧಾರಣೆ ಮೇಲೆ ಪರಿಣಾಮ
Team Udayavani, Oct 24, 2024, 7:50 AM IST
ಸುಳ್ಯ: ಮಳೆಗಾಲ ಆರಂಭದಲ್ಲಿ ಏರಿಕೆಯಾಗಿದ್ದ ರಬ್ಬರ್ ಧಾರಣೆ ಈಗ ಕುಸಿತದ ಹಾದಿಯಲ್ಲಿ ಸಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.
ಹಲವು ವರ್ಷಗಳ ಹಿಂದೆ ರಬ್ಬರ್‌ಗೆ ಉತ್ತಮ ಧಾರಣೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ರಬ್ಬರ್ ಬೆಳೆ ಗಣನೀಯವಾಗಿ ಹೆಚ್ಚಳಗೊಂಡಿತ್ತು.
ಈ ವರ್ಷದ ಜುಲೈ ತಿಂಗಳ ಮೊದಲು ಕೆಜಿ ರಬ್ಬರ್‌ಗೆ(ಗ್ರೇಡ್) 200ಕ್ಕಿಂತ ಕಡಿಮೆ ಧಾರಣೆ ಇತ್ತು. ಬಳಿಕದಲ್ಲಿ ನಿಧಾನ ಗತಿಯಲ್ಲಿ ಹೆಚ್ಚಳ ಕಂಡು ಆಗಸ್ಟ್ ವೇಳೆಗೆ ಗ್ರೇಡ್ ರಬ್ಬರ್ ಕೆಜಿಗೆ 244-255 ರೂ. ವರೆಗೂ ಹೆಚ್ಚಳವಾಗಿತ್ತು. ಅನಂತರ ಇಳಿಕೆ ಕಾಣಲು ಆರಂಭಿಸಿದ್ದು, ಅಕ್ಟೋಬರ್ ಆರಂಭದಲ್ಲಿ 210ಕ್ಕೆ ತಲುಪಿತ್ತು.
ಮಂಗಳವಾರ (ಅ.22) ಗ್ರೇಡ್ ರಬ್ಬರ್ ಕೆಜಿಗೆ 178 ಹಾಗೂ ರಬ್ಬರ್ ಸ್ಕ್ರಾಪ್ ಕೆಜಿಗೆ 112ರಂತೆ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಹಾರ ನಡೆದಿದೆ. ರಬ್ಬರ್ ಧಾರಣೆಯಲ್ಲಿ ಇನ್ನಷ್ಟು ಕುಸಿತ ಮುಂದುವರಿಯುವ ಆತಂಕವನ್ನು ಬೆಳೆಗಾರರು ಹಾಗೂ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ರಬ್ಬರ್ ಆಮದು ಆಗಿರುವ ಕಾರಣದಿಂದ ದೇಶೀಯ ರಬ್ಬರ್ ಉತ್ಪಾದಕರ ಮೇಲೆ ಧಾರಣೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಸರಾಸರಿ 200 ರೂ. ಆಸುಪಾಸಿನಲ್ಲಿ ರಬ್ಬರ್ ಧಾರಣೆ ಸ್ಥಿರವಾದಲ್ಲಿ ಅನುಕೂಲ ಆಗಲಿದೆ ಎಂಬುದು ಬೆಳೆಗಾರರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.