10 ವರ್ಷದಲ್ಲಿ 7 ಬಾರಿ ಪತಿ ವಿರುದ್ಧ ಪತ್ನಿ ದೂರು… ಪ್ರತಿ ಬಾರಿ ಬೇಲ್‌ ಕೊಡಿಸಿದ ಪತ್ನಿ!

ಎರಡು ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಕೋರ್ಟ್‌ ಆದೇಶ ನೀಡಿತ್ತು.

Team Udayavani, Jul 12, 2023, 4:45 PM IST

10 ವರ್ಷದಲ್ಲಿ 7 ಬಾರಿ ಪತಿ ವಿರುದ್ಧ ಪತ್ನಿ ದೂರು… ಪ್ರತಿ ಬಾರಿ ಬೇಲ್‌ ಕೊಡಿಸಿದ ಪತ್ನಿ!

ಅಹಮದಾಬಾದ್:‌ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಆರೋಪದಡಿ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಪತಿ ಏಳು ಬಾರಿ ಬಂಧನಕ್ಕೊಳಗಾಗಿರುವ ವಿಲಕ್ಷಣ ಘಟನೆ ಗುಜರಾತ್‌ ನ ಮೆಹ್ಸಾನಾದಲ್ಲಿ ನಡೆದಿದೆ.

ಇದನ್ನೂ ಓದಿ:Yatnal..,ನಿಮ್ಮನ್ನಂತೂ ವಿಪಕ್ಷ ನಾಯಕ ಮಾಡುವುದಿಲ್ಲ: ಮಾಹಿತಿ ಇದೆ ಎಂದ ಸಿದ್ದರಾಮಯ್ಯ!

ಕುತೂಹಲದ ವಿಷಯವೇನೆಂದರೆ ಪ್ರತಿ ಬಾರಿಯೂ ದೂರು ನೀಡಿ ಪತಿ ಬಂಧನಕ್ಕೊಳಗಾದ ನಂತರ ಆತನನ್ನು ಪತ್ನಿಯೇ ಶ್ಯೂರಿಟಿ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿಸುತ್ತಿದ್ದಳು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಇದು ಗುಜರಾತ್‌ ನ ಮೆಹ್ಸಾನಾ ಜಿಲ್ಲೆಯ ಕಾಡಿ ನಗರದಲ್ಲಿ ವಾಸವಾಗಿರುವ ಪ್ರೇಮ್‌ ಚಂದ್‌ ಮಾಲಿ ಮತ್ತು ಸೋನು ದಂಪತಿಯ ಕಹಾನಿಯಾಗಿದೆ.!

ಜಗಳ…ಬಂಧನ, ವಾಸ..ಬಿಡುಗಡೆ!

2001ರಲ್ಲಿ ಪ್ರೇಮ್‌ ಚಂದ್‌ ಮಾಲಿ ಮತ್ತು ಸೋನು ವಿವಾಹವಾಗಿದ್ದರು. 2014ರ ವೇಳೆ ಇಬ್ಬರ ಸಂಬಂಧದಲ್ಲಿ ವಿರಸ ಮೂಡಲು ಆರಂಭವಾಗಿತ್ತು. ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸೋನು 2015ರಲ್ಲಿ ಮೊದಲ ಬಾರಿಗೆ ಪತಿ ವಿರುದ್ಧ ದೂರು ದಾಖಲಿಸಿದ್ದಳು. ಇದರ ಪರಿಣಾಮ ಪತ್ನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಕೋರ್ಟ್‌ ಆದೇಶ ನೀಡಿತ್ತು.

ಆದರೆ ಪ್ರೇಮ್‌ ಚಂದ್‌ ದಿನಗೂಲಿಯಾಗಿದ್ದರಿಂದ ಪತ್ನಿಗೆ ಜೀವನಾಂಶ ಕೊಡಲು ವಿಫಲನಾಗಿದ್ದರಿಂದ ಬಂಧನಕ್ಕೊಳಗಾಗಿದ್ದ. ಪ್ರೇಮ್‌ ಚಂದ್ ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿ ಕಾಲಕಳೆದಿದ್ದ. ಆಗ ಅಚ್ಚರಿ ಎಂಬಂತೆ ಪತ್ನಿ ಸೋನು ಪತಿಗೆ ಜಾಮೀನು ಕೊಡಿಸಿದ್ದಳು. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸತೊಡಗಿದ್ದರು. ಸ್ವಲ್ಪ ಸಮಯದ ನಂತರ ಪತಿ ಪ್ರತ್ಯೇಕವಾಗಿ ವಾಸವಾಗಿದ್ದಿದ್ದಕ್ಕೆ ರಂಪಾಟ ನಡೆಸಿ ಪತ್ನಿ ಮೇಲೆ ಹಲ್ಲೆ ನಡೆಸಿಬಿಟ್ಟಿದ್ದ. ಕೊನೆಗೆ ಇಬ್ಬರ ಹೊಡೆದಾಟ ತೀವ್ರ ಸ್ವರೂಪಕ್ಕೆ ತೆರಳಿದಾಗ ಪತ್ನಿ ಮತ್ತೆ ದೂರು ನೀಡಿದ್ದಳು.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಪತ್ನಿ ಸೋನು ದೂರಿನ ಆಧಾರದ ಮೇಲೆ 2016ರಿಂದ 2018ರವರೆಗೆ ಪ್ರೇಮ್‌ ಚಂದ್‌ ಪ್ರತಿ ವರ್ಷ ಬಂಧನಕ್ಕೊಳಗಾಗಿದ್ದ. ಅದೇ ರೀತಿ ಪ್ರತಿ ಬಾರಿ ಪತ್ನಿಯೇ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುತ್ತಿದ್ದಳು!

2019 ಮತ್ತು 2020ರಲ್ಲಿಯೂ ಪ್ರೇಮ್‌ ಚಂದ್‌ ಪತ್ನಿಗೆ ಜೀವನಾಂಶ ಕೊಡಲು ವಿಫಲನಾಗಿದ್ದರಿಂದ ಬಂಧನಕ್ಕೊಳಗಾಗಿದ್ದು, ಆ ಸಂದರ್ಭದಲ್ಲಿಯೂ ಆತನ ರಕ್ಷಣೆಗ ಬಂದಿದ್ದು ಪತ್ನಿ ಸೋನು. 2023ರಲ್ಲಿಯೂ ಜೀವನಾಂಶ ಕೊಡಲು ಸಾಧ್ಯವಾಗದೇ ಪ್ರೇಮ್‌ ಚಂದ್‌ ಬಂಧನಕ್ಕೊಳಗಾಗಿದ್ದು, ಜುಲೈ 4ರಂದು ಪತ್ನಿ ಸೋನು ಪತಿಗೆ ಜಾಮೀನು ಕೊಡಿಸಿದ್ದಳು ಎಂದು ವರದಿ ತಿಳಿಸಿದೆ.

ಈ ಬಾರಿ ಮನೆಯಲ್ಲಿ ತನ್ನ ಪರ್ಸ್‌ ಮತ್ತು ಸೆಲ್‌ ಫೋನ್‌ ನಾಪತ್ತೆಯಾಗಿರುವುದು ಪ್ರೇಮ್‌ ಚಂದ್‌ ಗಮನಕ್ಕೆ ಬಂದಿತ್ತು. ಪತ್ನಿ ಬಳಿ ವಿಚಾರಿಸಿದಾಗ ಆಕೆ ಅದರ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಮಾರಾಮಾರಿ ನಡೆದಿತ್ತು. ಕೊನೆಗೂ ಈ ರಂಪಾಟದಿಂದ ರೋಸಿಹೋದ ಪ್ರೇಮ್‌ ಚಂದ್‌ ಮನೆ ಬಿಟ್ಟು, ಪಠಾಣ್‌ ನಲ್ಲಿರುವ ತಾಯಿ ಜತೆ ವಾಸವಾಗಿದ್ದು, ಪತ್ನಿ ಮತ್ತು ಮಗನ ವಿರುದ್ಧ ಪ್ರೇಮ್‌ ಚಂದ್‌ ದೂರು ನೀಡಿರುವುದಾಗಿ ವರದಿ ವಿವರಿಸಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

IAS officer stuns for Sarpanch woman’s English speech in barmar

Jaipur: ಸರಪಂಚ್‌ ಮಹಿಳೆಯ ಇಂಗ್ಲೀಷ್‌ ಭಾಷಣಕ್ಕೆ ಐಐಎಸ್‌ ಅಧಿಕಾರಿ ಫಿದಾ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.