ಎಚ್3ಎನ್2 ವೈರಸ್ ಹಾವಳಿ: ಮುಂಜಾಗರೂಕತೆ ಅಗತ್ಯ: ಆರೋಗ್ಯ ಇಲಾಖೆ
Team Udayavani, Mar 6, 2023, 7:00 AM IST
ಮಂಗಳೂರು: ಎಲ್ಲೆಡೆ ಶೀತ, ಕೆಮ್ಮು, ಜ್ವರದ ಸಮಸ್ಯೆ ಹೆಚ್ಚಾಗಿ ವರದಿಯಾಗುತ್ತಿರುವುದರೊಂದಿಗೆ ಎಚ್3ಎನ್2 ವೈರಸ್ ಹಾವಳಿ ತೀವ್ರಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಮುಂಜಾಗರೂಕತೆ ವಹಿಸಿಕೊಳ್ಳುವ ಅಗತ್ಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಇದರೊಂದು ಮಾರಣಾಂತಿಕ ಕಾಯಿಲೆ ಅಲ್ಲ. ವೈರಸ್‌ನಿಂದಾಗಿ ಒಬ್ಬರಿಂದ ಒಬ್ಬರಿಗೆ ಗಾಳಿಯಲ್ಲಿ ಹರಡುವ ಜ್ವರವಾಗಿದ್ದು, ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಇದು ರೂಪಾಂತರಗೊಂಡು ಹೊಸ ತಳಿ ಸೃಷ್ಟಿಯಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವಿಶ್ರಾಂತಿ ಪಡೆಯುವುದು ಮುಖ್ಯ. ಎರಡು -ಮೂರು ದಿನಗಳಲ್ಲಿ ಜ್ವರ-ಮೈ ಕೈ ನೋವು ಕಡಿಮೆಯಾಗುತ್ತದೆ. ಕೆಮ್ಮು- ಕಫ ಎರಡು ವಾರಗಳ ವರೆಗೆ ಇರುವ ಸಾಧ್ಯತೆಯಿದೆ.
ಈ ಸಂಬಂಧ ರಾಜ್ಯ ಮಟ್ಟದಲ್ಲಿ ಈ ವರೆಗೆ ಯಾವುದೇ ಸಭೆ ನಡೆದಿಲ್ಲ, ಈ ವಾರ ನಡೆಯುವ ಆಯೋಜನೆಗೊಳ್ಳುವ ಸಾಧ್ಯತೆಯಿದೆ. ಬಳಿಕ ಜಿಲ್ಲೆಗಳಿಗೆ ಈ ಸಂಬಂಧ ನಿರ್ದೇಶನ ನೀಡುವ ಸಾಧ್ಯತೆಯಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಎಚ್3ಎನ್2 ವೈರಲ್ ಜ್ವರವಾಗಿದ್ದು, ಜಿಲ್ಲೆಯಲ್ಲಿ ಇದೇ ಜ್ವರಕ್ಕೆ ಸಂಬಂಧಿಸಿ ಸದ್ಯ ಟೆಸ್ಟಿಂಗ್ ಆರಂಭಿಸಿಲ್ಲ. ದೇಶದ ವಿವಿಧೆಡೆ ವೈರಾಲಜಿ ಲ್ಯಾಬ್‌ಗಳಲ್ಲಿ ಟೆಸ್ಟ್ ಮಾಡುವಾಗ ಎಚ್3ಎನ್2 ಎಂದು ವರದಿ ಬಂದಿದೆ. ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.