ಎಚ್‌4 ವೀಸಾದವಳ ಹಾಡು ಪಾಡು : ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ!


Team Udayavani, Aug 3, 2024, 4:04 PM IST

ಎಚ್‌4 ವೀಸಾದವಳ ಹಾಡು ಪಾಡು : ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ!

ದೂರದ ಬೆಟ್ಟ ನುಣ್ಣಗೆ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು. ಅದು ಯಾಕೆ ನಮ್ಮ ಜನ ದೂರದ ಅಮೆರಿಕ ಅಥವಾ ಇತರೆ ದೇಶಗಳ ಬಗ್ಗೆ ಹುಬ್ಬೇರಿಸುವಂತ ಭಾವನೆಗಳನ್ನು ಇಟ್ಟುಕೊಂಡಿದ್ದಾರೋ? ದೇವರಿಗೆ ಗೊತ್ತು. ಇರುವುದನ್ನೆಲ್ಲ ಬಿಟ್ಟು ಇರದಿರದ ಕಡೆಗೆ ಮನಸ್ಸು ಹರಿಯಬಿಡುವುದೇ ಜೀವನವಾ? ಡಿಪೆಂಡೆಂಟ್‌ ವೀಸಾದಲ್ಲಿ ಪ್ರವಾಸ ಮಾಡುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಷಯವೇ.? ಅದು ಭಾರತದಲ್ಲಿದ್ದುಕೊಂಡು ವಿದೇಶಕ್ಕೆ ಹಾರುವ ಭಾವನೆಯ ಖುಷಿ ಇಲ್ಲಿಗೆ ಬಂದ ಮೇಲೆ ಖಂಡಿತ ಇರಲಾರದೆಂದು ಅನಿಸುತ್ತದೆ.

ಇದು ನಿಜವಾಗಿಯೂ ಒಂಟಿ ಬಾಳ ನೌಕೆಯೇ ಸರಿ. ಗಂಡ ಎಂಬ ಪ್ರಾಣಿ ಕೆಲಸ ಕೆಲಸ ಎಂದು ಬರೀ 18ಕ್ಕೂ ಹೆಚ್ಚು ಗಂಟೆಗಳು ಕೆಲಸದಲ್ಲಿ ಮುಳುಗೇಳುವಂತಹ ಪ್ರಾಜೆಕ್ಟ್ ಸಿಕ್ಕಿದರೇ.. ಹೆಂಡತಿ ನೀ ನನಗೆ ಬೆಂಡು ಎತ್ತುತೀ ..ಎಂದೇ ಹೇಳುತ್ತಾರೆ ಇಲ್ಲಿಯ ಗಂಡುಗಳು.ಸತ್ಯವಾಗಿ ಮನಸ್ಸುಗಳು ಪರಸ್ಪರ ಪ್ರೀತಿಯಿಂದ ಆರಾಮಾಗಿ ಮಾತನಾಡುವ ಅವಕಾಶವೇ ಇಲ್ಲಿ ಇಲ್ಲವೆಂದು ಅನಿಸುತ್ತದೆ. ಇಲ್ಲಿ ಎಲ್ಲಾ ಇದೆ. ಕಾರು ಇದೆ, ದೊಡ್ಡ ಮನೆಯಿದೆ, ಬಹು ಬೇಗ ಆಫೀಸ್‌ಗೆ ಹೋಗುತ್ತಾರೆ. ಸಂಜೆಯ ಟ್ರಾಫಿಕ್‌ ಜಂಜಾಟವಿಲ್ಲದೇ ಬೇಗ ಮನಗೆ ಬರುತ್ತಾರೆ ಎಂದು ಖುಷಿಪಡುವ ಪಾಡು ನಮಗಿಲ್ಲ. ಪುನಃ ಸರಿ ರಾತ್ರಿಯವರೆಗೂ ಆಪಶೂರ್‌ ಮೀಟಿಂಗ್‌. ಅದು ಇದು ಎಂದು ಲ್ಯಾಪ್‌ಟಾಪ್‌ನಲ್ಲಿ ತಲ್ಲಿನ ಮೂರ್ತಿಗಳಾಗುತ್ತಾರೆ ನಮ್ಮವರು.

ಕೆಲಸದಲ್ಲಿ ತೋರುವ ಪ್ರೀತಿಯನ್ನು ಮನೆಯಲ್ಲಿರುವ ನೆಚ್ಚಿನ ಜೀವಂತ ಜೀವಗಳಿಗೆ ವಿಕ್‌ ಡೇಸ್‌ಗಳಲ್ಲಿ ಎಂದಿಗೂ ಪ್ರೀತಿ, ಸಮಯ ತೋರಲಾರರು. ನಮ್ಮ ಊರಲ್ಲಾದರೋ ಗೆಳೆತಿಯರು, ಅಕ್ಕ ಪಕ್ಕದವರು ಮಾತನಾಡಲು, ನೋಡಲು ಸಿಗುತ್ತಾರೆ.

ಇಲ್ಲಿಯೋ ಮನೆಯಲ್ಲಿರುವ ಎರಡು ಜೀವಗಳೇ ಪರಸ್ಪರ ಆಸರೆ. ಬಾಯಿ ತುಂಬ ಎರಡು ಮಾತನಾಡಲು ಸಾಧ್ಯವಾಗದ ಬ್ಯುಸಿ ಲೈಫ್ ಇದು. ಹೊರಗಡೆ ಹೋದರೂ ನಮ್ಮ ನಗರದಲ್ಲಿ ಬಂದ್‌ ಅಥವಾ ಕರ್ಫ್ಯೂ ಸಮಯದಲ್ಲಿ ಕಾಣುವಂತ ಬೀಕೋ ಎನ್ನುವ ವಾತವರಣ. ಜನಗಳನ್ನು ನೋಡಬೇಕು ಎಂದರೇ ಪುನಃ ಶಾಪಿಂಗ್‌ ಮಾಲ್‌ಗ‌ಳು ಇರುವ ಏರಿಯಾಕ್ಕೇ ಹೋಗಬೇಕು. ಕಾಲು ನಡಿಗೆಯಲ್ಲಿ ಹೋಗಲಾರದಷ್ಟು ದೂರ ಈ ಜಾಗಗಳು. ಇಲ್ಲಿ ಜನಗಳಿಲ್ಲ, ಜಾಗ ಮಾತ್ರ ಜಾಸ್ತಿ ಇದೆ. ಅದೇ ನಮ್ಮೂರಲ್ಲಿ ಹೆಜ್ಜೆಹೆಜ್ಜೆಗೂ ಪರಿಚಿತ ಮುಖಗಳ ದರ್ಶನ. ಆ ಸುಖ ಇಲ್ಲಿ ಇಲ್ಲ ಬಿಡಿ!

ಹೆಂಡತಿಯರಾಗಿ ಬಂದಿರುವ ನಮ್ಮಂತವರ ಮನಸ್ಸಿನ ತಳಮಳ ಕೇಳುವ ಮನಸ್ಸುಗಳು ಇಲ್ಲ! ಇಲ್ಲಿ ಎಲ್ಲಾ ಇದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಇತ್ಯಾದಿಗಳೇ ನಿತ್ಯ ನಿರಂತರ ಸಂಗಾತಿಗಳು. ಇಲ್ಲಿ ನೆಟ್‌ ಯಾವಾಗಲು ಇರುತ್ತದೆ. ನಮ್ಮೂರಲ್ಲಿ ಇವುಗಳ ಬಳಕೆಯನ್ನು ಮಾಡುವುದೇ ಖುಷಿಯಾಗುತ್ತಿರುತ್ತಿತ್ತು. ಆದರೇ ಇಲ್ಲಿ ಇದು ಸಹ ಮಹಾಬೋರು. ಒಂದೇ ಒಂದು ಖುಷಿಯ ವಿಚಾರ ಎಂದರೇ ಇಲ್ಲಿಗೆ ಬರುವುದಕ್ಕೂ ಮೊದಲು ಅಡುಗೆ ಮನೆಯ ದಿಕ್ಕು ಕಾಣದ ನನ್ನ ಕೈಗಳು ಈಗ ಎಲ್ಲದರಲ್ಲೂ ನಿಪುಣತೆಯನ್ನು ಕಂಡಿವೆ. ಇದರಲ್ಲಾದರೂ ಸ್ವಲ್ಪ ನನ್ನನ್ನು ನಾನು ಮರೆತು ತರಾವೇರಿ ಖಾದ್ಯಗಳನ್ನು ತಯಾರು ಮಾಡುವುದನ್ನು ಕಲಿಯಲು ಅನುಕೂಲವಾಗಿದೆ. ಇದಕ್ಕೆ ನಾನು ಮತ್ತೇ ಇಂಟರ್‌ನೆಟ್‌ಗೆ ಥ್ಯಾಂಕ್ಸ್‌ ಹೇಳಬೇಕು.

ಅಲ್ಲಿಯಾಗಿದ್ದರೆ, ಅಕ್ಕ ಪಕ್ಕದ ಮನೆಯವರು, ಅಮ್ಮಂದಿರಿಂದ ಕಲಿಯಬೇಕಾಗಿತ್ತು. ಇಲ್ಲಿ ಗೂಗಲ್‌, ಯುಟ್ಯೂಬ್‌ಗಳೇ ಅಕ್ಕರೆಯ ಅಮ್ಮ – ಆಂಟಿಯರು. ಇದರಲ್ಲಿಯೇ ನಮ್ಮ ಮನ ಅರಳುವ ವಿಷಯಗಳನ್ನು ಕೇಳಬೇಕು ಮತ್ತು ನೋಡಬೇಕು. ಕಾರು ಚಲಾಯಿಸಲು ಕಲಿಯದಿದ್ದರೇ ಗಂಡನ ಪಾದವೇ ಗತಿ. ಅವರು ಫ್ರೀ ಆದ ವಿಕೇಂಡ್‌ಗೆ ಕಾದಿದ್ದು. ಹತ್ತು ಬಾರಿ ಗೊಗೆರದು ಅಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಬೇಕು. ಇಲ್ಲ ಎಂದರೇ ಆರಮಾಗಿ ಮನೆಯಲ್ಲಿಯೇ ತಿಂದುಂಡು ಸುಸ್ತಾಗಿ ಮಲಗಿಬಿಡುತ್ತಾರೆ.

ಪಾಪ!!! ಏನು ಮಾಡುವುದು ಇರೋ 2 ದಿನವಾದರೂ ವಿಶ್ರಾಂತಿ ಬೇಡವೇ ಬ್ಯುಸಿಯ ಮನಸ್ಸುಗಳಿಗೆ? ಬೇಕೆಂದಾಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗಲು ಆಗುವುದಿಲ್ಲ. ಅದೇ ನಮ್ಮೂರಲ್ಲಿ ಈ ಗಂಡು ಜೀವಗಳಿಗೆ ಗೊತ್ತಿಲ್ಲದಂತೆ ಎಷ್ಟು ಬಾರಿ ಹೋಗುತ್ತಿದ್ದೇವೋ. ಹೀಗೆ ಆದರೇ ನಮ್ಮ ಕಾಂತಿಯುಕ್ತ ಮುಖಗಳ ಪಾಡು ದೇವರಿಗೆ ಪ್ರೀತಿ!‌

ನೋಡುತ್ತಿನಲ್ಲಾ, ಇಲ್ಲಿರುವ ವಿದೇಶಿ (ಭಾರತೀಯ) ಮಹಿಳೆಯರ ಒಂದು ಮುಖ್ಯ ಕೆಲಸ ಎಂದರೇ! ಮುದ್ದು ಮಕ್ಕಳ ಜೋಪಾನ. ಅವುಗಳ ಹಿಂದೆ ಯಾವಾಗಲೂ ಓಡುವುದು. ಯಾಕೆಂದರೇ ಇರುವವರು ನಾವಿಬ್ಬರೇ ಅಜ್ಜ-ಅಜ್ಜಿ, ಅಕ್ಕ -ಪಕ್ಕದವರು ಯಾರು ಇಲ್ಲ. ಹಾಗಾಗಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿಯೇ ನನ್ನ ಜೀವನ ಮೋಕ್ಷ ಕಾಣುವಂತಾಗಿದೆ.
ಎಷ್ಟೇ ಓದಿದ್ದರೂ ಸೌಟು ಹಿಡಿಯುವುದು ತಪ್ಪುವುದಿಲ್ಲ ಎಂಬಂತೆ, ಯಾವುದೇ ಕೆಲಸ ಮಾಡುತ್ತಿದ್ದರೂ ಎಚ್‌4 ಮೇಲೆ ಬಂದರೇ ಮಕ್ಕಳನ್ನು ಸಂಭಾಳಿಸುವುದು ತಪ್ಪುವುದಿಲ್ಲ! ಇವುಗಳ ಕಾರ್ಯ ಮಾಡುವುದರಲ್ಲಿಯೇ ಅರ್ಧ ಆಂಟಿಗಳಾಗಿದ್ದೇವೆ ಅನಿಸುತ್ತದೆ.

ಮಕ್ಕಳಿಗಾದರೂ ಯಾರಿದ್ದಾರೇ ನಾನೇ ಅಜ್ಜಿ/ಅಮ್ಮ ಎಲ್ಲ ತಾನೇ. ಆದರೂ ಮಕ್ಕಳಿರುವುದು ಶೇ.80ರಷ್ಟು ಮನಸ್ಸಿಗೆ ಖುಷಿ ಕೊಟ್ಟಿದೆ. ಇದರ ಮೂಲಕವಾದರೂ ನಮ್ಮ ಮನಸ್ಸುಗಳು ಸ್ವಲ್ಪ ಬ್ಯುಸಿಯಾಗಿವೆ. ಇಲ್ಲದಿದ್ದರೇ ಸೋಮಾರಿಗಳಾಗುತ್ತಿದ್ದವು. ನಾನೇಷ್ಟು ಖುಷಿ ಪಟ್ಟಿದ್ದೆ , ವಿದೇಶಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವಾಗ. ಪಾಸ್‌ಪೋರ್ಟ್‌ ಮಾಡಿಸುವುದರಿಂದ ಹಿಡಿದು, ಏರ್‌ ಟಿಕೆಟ್‌ ಬುಕ್‌ ಮಾಡುವವರೆಗೂ. ನಾ ವಿದೇಶಕ್ಕೆ ಹೋಗುವೆನು ಎಂದು ತಿಳಿದು ಅಕ್ಕಪಕ್ಕದ ಮನೆಯವರು, ಬಂಧು ಬಳಗದವರು ನನ್ನಡೆಗೆ ನೋಡುವ ನೋಟವೇ ಬದಲಾಗಿದ್ದು. ಅದನ್ನು ಕಂಡು ಮನದಲ್ಲಿಯೇ ನಕ್ಕಿದ್ದು. ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು 3 ಬಾರಿ ಸೂಟ್‌ಕೇಸ್‌ ತುಂಬುವಷ್ಟು ಶಾಪಿಂಗ್‌ ಮಾಡಿದ್ದು. ನೆನಸಿಕೊಂಡರೇ ಈಗ ಅಯ್ಯೋ ಅನಿಸುತ್ತಿದೆ. ಆ ಸಂಭ್ರಮ ಇದ್ದಿದ್ದು ನಾಲ್ಕು ದಿನ ಮಾತ್ರ. ಆ ಒಂದು ವಾರ ನಿತ್ಯ ನೋಡುವ ಪ್ರತೀ ನೋಟವನ್ನು ಕೆಮರಾದಲ್ಲಿ ಸೆರೆ ಹಿಡಿದು ಫೇಸ್‌ಬುಕ್‌ಗೆ ತುರಕಿ ಲೈಕ್‌ ಗಳಿಗೆ ಕಾಯುತ್ತಿದ್ದುದ್ದೇ ಬಂತು.

ನಮ್ಮ ದೇಶದ ಮಂದಿ ಶೂಟಿಂಗ್‌ಗೆ ಅದಕ್ಕಾಗಿಯೇ ವಿದೇಶದ ಜಾಗಗಳಿಗೆ ಬರುವುದು. ಯಾವ ದಿಕ್ಕು ನೋಡಿದರೂ ಕ್ಯಾನವಾಸ್‌ ಮೇಲೆ ಬರೆದ ಚಿತ್ರದಂತೆ. ಈ ರೀತಿಯ ನೋಟ ನಮ್ಮ ಆ ಊರಲ್ಲಿ ಎಲ್ಲಿ ಕಾಣಲಿ? ನಾನಿರುವ ಈ ಚಿಕ್ಕ ಹಳ್ಳಿಯೇ ಹೀಗಿದ್ದರೇ.. ನ್ಯೂಯಾರ್ಕ್‌ ಹೇಗಿರಬಹುದು ಓ ದೇವರೇ ಎಂದು ಎರಡು ದಿನ ಕಣ್ಣು ಮುಚ್ಚಿರಲಿಲ್ಲ.ಆದರೇ ಇದು ಎಲ್ಲ ಬರೀ ಒಂದು ತಿಂಗಳವರೆಗೆ ಮಾತ್ರ ತುಂಬ ಚೆನ್ನಾ ಎಂದು ಮತ್ತೆ ಅನಿಸಿದ್ದು. ಅದು ನಿಜ ಕಣ್ರಿ. ನಮ್ಮ ಊರು, ನಮ್ಮ ಅಮ್ಮ ಎಂದಿಗೂ ನಿತ್ಯ ಸುಂದರ. ಇಲ್ಲಿ ಯಾಕೋ ಎಲ್ಲ ಇದ್ದು ಏನೋ ಇಲ್ಲ ಎಂದೆನಿಸುತ್ತದೆ. ಭಾವನೆಗಳನ್ನು ಅವಿಟ್ಟುಕೊಂಡಿದ್ದೇವೆ ಅನಿಸುತ್ತದೆ. ಅದೇ ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿ ಬಂಧಿ ಎಂದೆನಿಸುತ್ತದೆ.

ಯಾರ ಬಳಿ ಬಿಚ್ಚು ಮನಸ್ಸಿನ ಮಾತನ್ನಾಡಲಿ? ಇದು ಎಲ್ಲ ಬೇಕಿತ್ತಾ ? ಯಾವುದೋ ದೂರದ ಆಸೆಗಳಿಗಾಗಿ ನಮ್ಮ ಹೆತ್ತವರನ್ನು, ಬಂಧು-ಬಳಗವನ್ನು ಬಿಟ್ಟು ಇಲ್ಲಿ ಯಾಕಿದ್ದೇವೆ. ಯಾಕಿಷ್ಟು ಜನ ಇಲ್ಲಿಯ ಜಿ.ಸಿಗಳಿಗಾಗಿ ಬಕಾ ಪಕ್ಷಿ ಥರಾ ಕಾಯುತ್ತಿದ್ದಾರೆ, ಪ್ರಾರ್ಥಿಸುತ್ತಿದ್ದಾರೆ. ಜಿ.ಸಿ ಮುಂದೆ ನಮ್ಮ ಆಧಾರ್‌ ಕಾರ್ಡ್‌ ಸಹ ಡಲ್‌ ಎಂದು ನಮ್ಮ ಜನಗಳಿಗೆ ಯಾಕೆ ಅನಿಸುತ್ತಿದೆ ?
ನಮ್ಮ

ದೇಶದಲ್ಲಿರುವ ಅತ್ಯುತ್ತಮ ಸ್ಥಳಗಳ ಪರಿಚಯ ಮಾಡಿರದಿದ್ದರೂ ವಿದೇಶ ಸ್ಥಳಗಳನ್ನು ನೋಡಬೇಕು ತಿರುಗಾಡಬೇಕು ಎಂಬ ಹಪಿಹಪಿತನ ಎಲ್ಲಿಂದ ಬರುತ್ತದೆ? ಏನು ಮಾಡುವುದು ಅದೇ ಒಂದು ರೀತಿಯ ಬೋರು ಮನಸ್ಸಿಗೆ ಕನಿಷ್ಠ ಬದಲಾವಣೆಯಾಗಿದೆ ಇಲ್ಲಿ!!

ಬದಲಾಗುತ್ತಿರುವುದು ನಾವುಗಳ ಅಥವಾ ನಮ್ಮ ವ್ಯವಸ್ಥೆಯಾ? ಹುಟ್ಟಿ ಬೆಳೆದು, ಓದಿದ ದೇಶದಲ್ಲಿಯೆ ಇದ್ದು ಏನಾದರೂ ಮಾಡುವ ಬದಲು, ಇಲ್ಲಿಗೆ ಹೀಗೆ ಬಂದು ಯಾಕೆ ಹೊಸ ರೀತಿಯ ಬದುಕಿಗಾಗಿ ಕಷ್ಟಪಡುವುದು ಯಾವ ಸುಖ? ಗೊತ್ತಾಗುತ್ತಿಲ್ಲ!
ಇರುವ ಒಂದು ಎರಡು ಮಕ್ಕಳನ್ನು ಕಟ್ಟಿಕೊಂಡು ಇಬ್ಬರು ದುಡಿಯಲು ತೊಡಗಿದರೇ ಅದು ಹೇಗೆ ಸ್ವಾಸ್ಥ್ಯ ಕುಟುಂಬವೆಂದೆನಿಸುತ್ತದೆ?

ಆದರೂ ದಿನ ಕಳೆದರೇ ಎಂಥವರೂ ಎಂಥ ಸನ್ನಿವೇಶಕ್ಕಾದರೂ ಒಗ್ಗಿ ಕೊಳ್ಳುತ್ತಾರೇ ಅನ್ನುವಂತೆ ಇಲ್ಲಿರುವುದೇ ಮೇಲು ಅನಿಸುತ್ತದಲ್ಲ ಯಾಕೆ? ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ ಯಾಕೇ?
ಇದೇ ಕಾಲ ನಿಯಮವಾ?

*ಎಚ್‌. ಈ . ತಿಪ್ಪೇರುದ್ರಪ್ಪ , ಮಿಯಾಮಿಸ್ಬರ್ಗ್‌

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.