ಹುಣಸೂರು : ಆಲಿಕಲ್ಲು, ಬಿರುಗಾಳಿ ಮಳೆಗೆ 35 ತೆಂಗಿನ ಮರ, ವಿದ್ಯುತ್ ಕಂಬ ಧರೆಗೆ, ಅಪಾರ ಹಾನಿ

ತಂಬಾಕು ಸಸಿಮಡಿ, ಮಾವು, ಬಾಳೆ ಬೆಳೆಗೂ ಹಾನಿ

Team Udayavani, Apr 3, 2022, 8:15 PM IST

ಹುಣಸೂರು : ಆಲಿಕಲ್ಲು, ಬಿರುಗಾಳಿ ಮಳೆಗೆ 35 ತೆಂಗಿನ ಮರ, ವಿದ್ಯುತ್ ಕಂಬ ಧರೆಗೆ, ಅಪಾರ ಹಾನಿ

ಹುಣಸೂರು : ತಾಲೂಕಿನಲ್ಲಿ ವಾರದಿಂದ ದಿನಬಿಟ್ಟು ದಿನ ಬೀಳುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಹಲವೆಡೆ ಸಾಕಷ್ಟು ಹಾನಿಯುಂಟುಮಾಡಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ, ಹರವೆಕಲ್ಲಹಳ್ಳಿ, ರಾಮೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬಾರೀ ಗಾತ್ರದ ಆಲಿಕಲ್ಲು ಮಳೆ ಸುರಿದು ಮನೆಗಳ ಮೇಲ್ಚಾವಣಿಯ ಹೆಂಚು, ಕಲ್ನಾರ್ ಶೀಟ್ ಹಾನಿಗೊಳಗಾಗಿದ್ದರೆ, ತಂಬಾಕು ಸಸಿಮಡಿ, ಮಾವಿನ ಫಸಲಿಗೆ ಅಪಾರ ನಷ್ಟ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಹಲವೆಡೆ ಬಾಳೆಬೆಳೆ ಹಾನಿ: ಉಯಿಗೊಂಡನಹಳ್ಳಿ, ಕುಟವಾಡಿ,ಕಾಡುವಡ್ಡರಗುಡಿ, ಉದ್ದೂರು, ಚಿಕ್ಕ ಹುಣಸೂರು, ಮಾಜಿ ಗುರುಪುರ ಸೇರಿದಂತೆ ಹಲವೆಡೆ ಬಿರುಗಾಳಿಯ ಬಿರುಸಿಗೆ ಫಲಕ್ಕೆ ಬಂದಿದ್ದ ನೂರಾರು ಎಕರೆ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಧರೆಗುರುಳಿದ ತೆಂಗಿನ ಮರಗಳು: ಕಟ್ಟೆಮಳಲವಾಡಿಯಲ್ಲಿ ಶಂಕರಯ್ಯರಿಗೆ ಸೇರಿದ ಫಸಲಿಗೆ ಬಂದಿದ್ದ 35 ತೆಂಗಿನ ಗಿಡಗಳು ಹಾಗೂ ನಾಗರಾಜ್‌ರಿಗೆ ಸೇರಿದ ಹತ್ತು ತೆಂಗಿನ ಮರಗಳು ನೆಲಕ್ಕಿದೆ. ಗ್ರಾಮದೊಳಗೆ ಮರವೊಂದು ಮನೆಮೇಲೆ ವಿದ್ಯುತ್ ತಂತಿ ಸಮೇತ ಬಿದ್ದು ಮೇಲ್ಚಾವಣಿ ಹಾನಿಯಾಗಿದ್ದರೆ, ಹೊಸವಾರಂಚಿ ಗ್ರಾಮದ ರಿಯಾನಾಬಾನು ಸೇರಿದಂತೆ ಕಟ್ಟೆಮಳಲವಾಡಿಯಲ್ಲಿ ಮೂರು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಟ್ಟೆಮಳಲವಾಡಿಯಲ್ಲಿ ಬಿರುಗಾಳಿಗೆ ಧರೆಗುರುಳಿರುವ ತೆಂಗಿನ ಮರದ ಹಾನಿಯನ್ನು ಪರಿಶೀಲಿಸಿದರು.

ಇದನ್ನೂ ಓದಿ :1800 ವರ್ಷ ಇತಿಹಾಸವಿರುವ ನಾಗ ದೇವರಿಗೆ ಕೋಳಿ ಬಲಿಕೊಟ್ಟು ಪೂಜಿಸುತ್ತಾರಂತೆ ಗ್ರಾಮಸ್ಥರು…

ತಂತಿ ಮೇಲೆ ಬಿದ್ದ ತೆಂಗಿನ ಮರ: ಗುರುಪುರ ಬಳಿಯ ಸರ್ವೆ.ನಂ. 25ರಲ್ಲಿ ರಾಜಶೆಟ್ಟರಿಗೆ ಸೇರಿದ ತೆಂಗಿನಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು, ಮೂರು ವಿದ್ಯುತ್ ಕಂಬಳಿಗೆ ಹಾನಿಯಾಗಿದೆ, ಇನ್ನು ಕಟ್ಟೆಮಳಲವಾಡಿ, ಉದ್ದೂರಿನಲ್ಲಿ ಗ್ರಾಮದೊಳಗಿನ ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದಿದ್ದು, ಮಳೆ ಇದ್ದಿದ್ದರಿಂದ ರಸ್ತೆಯಲ್ಲಿ ಓಡಾಟವಿಲ್ಲದೆ ಪ್ರಾಣ ಹಾನಿ ಸಂಭವಿಸಿಲ್ಲ. ಆಲಿಕಲ್ಲು ಮಳೆಯಿಂದಾಗಿ ತಂಬಾಕು ಸಸಿ ಮಡಿಗೆ ಬಾರೀ ಹಾನಿಯಾಗಿದ್ದು, ಕೊಳೆಯುವ ಭೀತಿ ಎದುರಾಗಿದೆ.

20 ಕಂಬಗಳಿಗೆ ಹಾನಿ : ತಾಲೂಕಿನಾದ್ಯಂತ ಬಿರುಗಾಳಿ ಮಳೆಗೆ 20 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಬ್ಬದ ಹಿನ್ನೆಲೆಯಲ್ಲಿ ಹಲವೆಡೆ ಈಗಾಗಲೆ ಹೊಸ ಕಂಬಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಕೆಲವೆಡೆ ತಂತಿ ಮೇಲೆ ಮರಗಳು ಬಿದ್ದು ಬಾಗಿದ್ದು, ಸೋಮವಾರ ಸರಿಪಡಿಸಲಾಗುವುದೆಂದು ಎಇಇ ಸಿದ್ದಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

BJP-BRS

Party Donation: ಬಿಜೆಪಿಗೆ 2,244 ಕೋ.ರೂ. ದೇಣಿಗೆ ಕಳೆದ ಬಾರಿಗಿಂತ ಶೇ. 212 ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

BYV

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.