ಪರೀಕ್ಷೆ , ಬಲಿದಾನಗಳ ಪ್ರತೀಕ: ಹಜ್‌, ಬಕ್ರೀದ್‌

Team Udayavani, Jul 21, 2021, 6:50 AM IST

ಪರೀಕ್ಷೆ , ಬಲಿದಾನಗಳ ಪ್ರತೀಕ: ಹಜ್‌, ಬಕ್ರೀದ್‌

ಹಜ್‌ ಮತ್ತು ಬಕ್ರೀದ್‌ ಇವೆರಡರಲ್ಲೂ ಪ್ರವಾದಿ ಇಬ್ರಾಹಿಮರ ಜೀವನ ಮತ್ತು ಸಂದೇಶವಿದೆ. ಕುರಾನ್‌ನಲ್ಲಿ ಹಲವೆಡೆ ಇವರ ವೃತ್ತಾಂತವಿದೆ. ಆದಿಮಾನವ ಮತ್ತು ಪ್ರವಾದಿಯೂ ಆಗಿದ್ದ ಆದಮರ ಅಅನಂತರ ನೋಹ ಮತ್ತು ಇಬ್ರಾಹಿಮರಂತಹ ಲಕ್ಷಾಂತರ ದೇವ ಸಂದೇಶವಾಹಕರು ಅಖಂಡ ಬ್ರಹ್ಮಾಂಡ ಮತ್ತು ಸೃಷ್ಟಿಕರ್ತನಿಂದ ನೀಡಲ್ಪಟ್ಟ ಯಶಸ್ವೀ ಜೀವನ ಪದ್ಧತಿಯನ್ನು ಅನುಸರಿಸುವಂತೆ ಕರೆ ನೀಡುತ್ತಿದ್ದರು. ಆ ಮಾರ್ಗದಲ್ಲಿ ಅನಿವಾರ್ಯವಾಗಿ ಬರುವ ಸಂಕಷ್ಟಗಳನ್ನು ಸಹಿಸುತ್ತಲೇ ಮತ್ತು ಪರೀಕ್ಷೆಗಳನ್ನು ಎದುರಿಸುತ್ತಲೇ ತ್ಯಾಗಗಳನ್ನು ನಡೆಸಿ ಕರ್ತವ್ಯ ನಿರತರಾಗಿ ನಿರ್ಗಮಿಸಿದ ಮಹಾ ನಾಯಕರಲ್ಲಿ ಒಬ್ಬರು ಇಬ್ರಾಹಿಮರು.

ತಾವೇ ಅತೀ ದೊಡ್ಡ ದೇವರೆಂಬಂತೆ ವರ್ತಿಸುತ್ತಿದ್ದ ತಮ್ಮ ತಮ್ಮ ಕಾಲದ ಧರ್ಮಗುರುಗಳು ಮತ್ತು ಸರ್ವಾ ಧಿಕಾರಿಗಳ ಶೋಷಣೆಯ ಮುಷ್ಠಿಗಳಿಂದ ಮರ್ದಿತ ಜನಸಾಮಾನ್ಯರನ್ನು ವಿಮೋಚಿಸಿ ನೈಜ ಸೃಷ್ಟಿಕರ್ತ ನೀಡಿರುವ ಜೀವನಕ್ರಮದ ಅಧೀನಕ್ಕೆ ತರುವುದು ಸಾಮಾನ್ಯವಾಗಿ ಪ್ರವಾದಿಗಳ ದೌತ್ಯವಾಗಿತ್ತು.

ಬ್ರಹ್ಮಾಂಡವನ್ನು ಸೃಷ್ಟಿಸಿ, ಮಾನವರಿಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವ ಒಡೆಯನೊಂದಿಗೆ ದೇವೇತರರನ್ನು ಭಾಗಿಗೊಳಿಸುವುದು ಅಕ್ಷಮ್ಯ ಅಪ ರಾಧವೆಂಬ ಘೋಷಣೆ ಆ ಏಕೈಕ ದೇವನದ್ದಾಗಿದೆ. ಈ ಕರೆಯನ್ನು ಘಂಟಾಘೋಷವಾಗಿ, ಹೆಚ್ಚಿನ ಬಲದೊಂದಿಗೆ ಘೋಷಿಸುವುದೇ ಇಬ್ರಾಹಿಮರ ವೈಶಿಷ್ಟéವಾಗಿತ್ತು.

ಮಗನ ಬಲಿಯ ಪರೀಕ್ಷೆ: ಆಗ ಇದ್ದ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಿ ನೈಜ ಏಕ ದೇವಾರಾಧ ನೆಯನ್ನು ಜಾರಿಗೆ ತರುವಲ್ಲಿ ಇಬ್ರಾಹಿಮರು ಹಲವು ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಎಲ್ಲ ಪರೀಕ್ಷೆಗಳಲ್ಲಿ ಅವರು ಉಜ್ವಲ ವಜ್ರದಂತೆ ಗೆದ್ದು ಬಂದರು. ಆದರೂ ಪರೀಕ್ಷೆ ಮುಗಿಯಲಿಲ್ಲ. ಬೆಳೆದ ಮಗ ಇಸ್ಮಾಯಿಲರನ್ನು ಬಲಿ ಕೊಡಬೇಕೆಂದು ಆಜ್ಞೆ ಯಾದಾಗ ಹಿಂಜರಿಯದ ಇಬ್ರಾಹಿಮರು ವಿಷಯ ವನ್ನು ಕೂಡಲೇ ಮಗನಿಗೆ ತಿಳಿಸಿದರು. ಉಕ್ಕಿನಂತಹ ಇಬ್ರಾಹಿಮರ ತರಬೇತಿಯಲ್ಲಿ ಪಳಗಿದ ತಂದೆಗೆ ತಕ್ಕ ಮಗ, ದೇವಾಜ್ಞೆಯಾಗಿದ್ದರೆ ಸದಾ ಸಿದ್ಧನೆಂದರು.

ಮಗನನ್ನು ಬಲಿಪೀಠದಲ್ಲಿ ಮಲಗಿಸಿ ಪುತ್ರವಾತ್ಸಲ್ಯ ತಡೆಯಾಗದಿರಲಿ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹರಿತವಾದ ಕತ್ತಿಯನ್ನು ಎತ್ತಿದಾಗ ಅದ್ಭುತ ನಡೆಯಿತು. ಮಗನ ಬದಲಿಗೆ ಕತ್ತು ಕೊಯ್ಯಲ್ಪಟ್ಟ ಟಗರು ಬಿದ್ದು ಕೊಂಡಿತ್ತು. ಇಸ್ಮಾಯಿಲರು ಮುಗುಳ್ನಗುತ್ತಾ ನಿಂತಿದ್ದರು. ಈ ಪರೀಕ್ಷೆಯಲ್ಲಿ ಇಬ್ರಾಹೀಮ ಮತ್ತು ಇಸ್ಮಾಯಿಲ್‌ ಇಬ್ಬರೂ ವಿಜಯಿಗಳು.

ಹಜ್‌: ಹಜ್‌ನ ಸಕಲ ವಿಧಿಗಳು ಇಬ್ರಾಹೀಮರ ಈ ಚರಿತ್ರೆಯನ್ನು ನೆನಪಿಸುವವುಗಳೇ ಆಗಿವೆ. ಸಂಪತ್ತು, ಆರೋಗ್ಯ ಮತ್ತು ಎಲ್ಲದರಲ್ಲೂ ಅರ್ಹನಾಗಿರುವ ವಯಸ್ಕ ಮುಸಲ್ಮಾನ ಜೀವನದಲ್ಲೊಮ್ಮೆ ಹಜ್‌ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋ ಪಲಕ್ಷ ಮುಸ್ಲಿ ಮರು ವರ್ಷಕ್ಕೊಮ್ಮೆ ಮಕ್ಕಾ ನಗರ ದಲ್ಲಿ ಒಟ್ಟುಗೂಡುತ್ತಾರೆ. ಆಡಳಿತಗಾರನಾಗಲಿ, ಸೇವಕನಾಗಲಿ; ಎಲ್ಲರೂ ಒಂದೇ ರೀತಿಯ ವಿಧಿಗಳನ್ನು ಅಲ್ಲಿ ನೆರವೇರಿಸಬೇಕು. ಸಮಾನತೆಗೆ ಇಸ್ಲಾಮ್‌ ಕೊಡುವ ಪ್ರಾಮುಖ್ಯ ಇಲ್ಲಿ ಎದ್ದು ಕಾಣುತ್ತದೆ.

ಕಾಬಾ ಬಳಿಯಲ್ಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್‌ನ ಬಾವಿ. ಅತ್ಯದ್ಭುತ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿ ರಾರು ನೀರಿಗಾಗಿ ಓಡಾಡಿದ ಸಫಾ ಮರ್ವ ಬೆಟ್ಟಗಳಿಗೆ ಏರುವ ಎಲ್ಲ ವಿಧಿಗಳೂ ಹಜ್‌ನ ಭಾಗಗಳಾಗಿವೆ.

ಮುಹಮ್ಮದ್‌ ಪೈಗಂಬರರು ನಿರ್ವಹಿಸಿದ ಹಜ್‌ ಕ್ರಮಂತೆ ಬಕ್ರೀದ್‌ನ ಮುನ್ನಾ ದಿನ ಅರಫ ಎಂಬ ವಿಶಾಲ ಮೈದಾನದಲ್ಲಿ ಹಾಜಿಗಳೆಲ್ಲರೂ ಸೇರುವುದು ಪ್ರಮುಖ ಮತ್ತು ಕಡ್ಡಾಯ ವಿಧಿಗಳ ಲ್ಲೊಂದು. ಅರಫಾದಲ್ಲಿ ಎರಡು ಹೊತ್ತಿನ ಕಡ್ಡಾಯ ನಮಾಝ್ಗಳನ್ನು ಸಾಮೂಹಿಕವಾಗಿ ನಿರ್ವಹಿಸಿದ ಬಳಿಕ ಜನಸ್ತೋಮಕ್ಕೆ ಉದೊ½àದೆ ನಡೆಸಲಾಗುತ್ತದೆ. ಅಅನಂತರ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿ ಪ್ರಾರ್ಥಿಸಿದರೆ ದೇವನು ಪ್ರಾರ್ಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು ಪ್ರವಾದಿಯವರು ನುಡಿದಿದ್ದಾರೆ. ವಿವಿಧ ವಿಧಿಗಳ ಮೂಲಕ ತಮ್ಮನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.

ಬಕ್ರೀದ್‌: ಹಜ್‌ನ ಪ್ರಮುಖ ವಿಧಿಯಾಗಿ ಅಲ್ಲಿ ಒಂದೇ ಹೊತ್ತು ಎಲ್ಲ ಹಜ್‌ ಯಾತ್ರಿಗಳೂ ಅರಫಾ ಮೈದಾನದಲ್ಲಿ ಸೇರುವ ದಿನ ಹಾಜಿಗಳ ಜತೆಗೆ ಸಾಮರಸ್ಯ ತೋರುವ ಸಲುವಾಗಿ ಲೋಕದೆಲ್ಲೆಡೆ ಇತರ ಮುಸ್ಲಿಮರು ಆ ಒಂದು ದಿನ ಉಪವಾಸ ಆಚರಿಸುತ್ತಾರೆ. ಮರುದಿನ ಬಕ್ರೀದ್‌ನಂದು ನಡೆ ಯುವ ವಿಶೇಷ ನಮಾಝ್ ಅನಂತರದ ಉದೊ½à ದೆಯಲ್ಲಿ ಇಬ್ರಾಹೀಮರ ದೇವಾರ್ಪಣೆಯ ಮಾದರಿ ಯನ್ನು ನೆನಪಿಸಲಾಗುತ್ತದೆ. ಅಂದಿನಿಂದ ಮೂರು ದಿನಗಳಲ್ಲಿ ಲೋಕದೆಲ್ಲೆಡೆಯ ಮುಸ್ಲಿಮರು ಆಹಾರದ ಪ್ರಾಣಿಗಳ ಬಲಿ ಕೊಡುವುದು ಈ ಅವಿಸ್ಮರಣೀಯ ಪರೀಕ್ಷೆ, ತ್ಯಾಗದ ಸ್ಮರಣಾರ್ಥ ಮತ್ತು ಅನುಕರಣೀಯ ದೈವ ಸಮರ್ಪಣ ಭಾವವಾಗಿದೆ.

– ಅಬ್ದುಲ್‌ ಅಜೀಜ್‌, ಉದ್ಯಾವರ, ಧಾರ್ಮಿಕ ಚಿಂತಕರು

ಟಾಪ್ ನ್ಯೂಸ್

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.