ಒಂದೇ ಕಾರ್ಯಕ್ರಮದಲ್ಲಿ ಹಲವರ ಆಕ್ರೋಶಕ್ಕೆ ಗುರಿಯಾದ ನಾದಬ್ರಹ್ಮ!
ಸಂಗೀತ ಹಿಡಿಸಿತು, ಮಾತು ಕೆಡಿಸಿತು!
Team Udayavani, Nov 15, 2021, 12:08 PM IST
ಬೆಂಗಳೂರು : ನೂರಾರು ಜನಪ್ರಿಯ ಗೀತೆಗಳ ಮೂಲಕ ಕನ್ನಡಿಗರ ಮನ ತಣಿಸಿದ್ದ ‘ನಾದಬ್ರಹ್ಮ’ ಬಿರುದಾಂಕಿತ ಮೇರು ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾರ್ಯಕ್ರವೊಂದರಲ್ಲಿ ಉದ್ವೇಗದ ಭರದಲ್ಲಿ ಆಡಿದ ಮಾತುಗಳು ಹಲವರ ಕೆಂಗಣ್ಣಿಗೆ ಗುರಿಯಾಗಿದೆ, ಆಕ್ರೋಶವನ್ನು ಎದುರಿಸಬೇಕಾಗಿ ಬಂದಿದೆ.
ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ದಲಿತರು, ಅಸ್ಪೃಶ್ಯತೆ ವಿಚಾರಕ್ಕೆ ಸಂಬಂಧಿಸಿ ಮಾತಿಗಿಳಿದ ಹಂಸಲೇಖ ಅವರು, ಹಲವು ವಿಚಾರಗಳನ್ನು ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ಅವರ ಮಾತಿಗೆ ಹಲವರು ಬೆಂಬಲವನ್ನೂ ಸೂಚಿಸಿದ್ದು, ವ್ಯಾಪಕ ಆಕ್ರೋಶ ಎನ್ನುವುದು ಅವರನ್ನು ಕ್ಷಮೆ ಯಾಚಿಸುವಂತೆ ಮಾಡಿದೆ.
ಪೇಜಾವರ ಶ್ರೀಗಳ ಟೀಕೆ
ಭಾಷಣದ ವೇಳೆ ಪೇಜಾವರ ಶ್ರೀಗಳ ದಲಿತರ ಕೇರಿ ಭೇಟಿಯನ್ನು ಪ್ರಸ್ತಾವಿಸಿ, ಶ್ರೀಗಳು ಅಲ್ಲಿ ಹೋಗಿ ಕುಳಿತುಕೊಳ್ಳಬಹುದಷ್ಟೆ, ಕೋಳಿ, ಕುರಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ, ದಲಿತರ ಮನೆಗೆ ಬಲಿತರು ಹೋಗುವುದು
ಏನು ದೊಡ್ಡ ವಿಷಯ ಎಂದು ಪ್ರಶ್ನಿಸಿದ್ದರು.
ಹಂಸಲೇಖ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಶ್ರೀಗಳ ಅಪಾರ ಭಕ್ತರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹಂಸಲೇಖ ಅವರು ಇಂತಹ ಹೇಳಿಕೆ ನೀಡುವುದು ಭೂಷಣವಲ್ಲ ಎಂದಿದ್ದರು. ಈಗಿನ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಪಾದರು ಹೇಳಿಕೆಯನ್ನು ಖಂಡಿಸಿದ್ದರು.
ರಾಜಕಾರಣಿಗಳ ಟೀಕೆ
ಜನಪ್ರಿಯ ಕಾರ್ಯಕ್ರಮವಾದ ಗ್ರಾಮ ವಾಸ್ತವ್ಯವನ್ನೂ ಟೀಕಿಸಿದ್ದ ಹಂಸಲೇಖ ಅವರು, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದರು. ಈಗ ನಗರದಲ್ಲಿರುವ ಆರ್. ಅಶೋಕ್ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ್ ಅವರೂ ಮಾಡುತ್ತಿದ್ದಾರೆ ಎಲ್ಲರೂ ಮಾಡುತ್ತಿದ್ದಾರೆ ಎಂದಿದ್ದರು. ಇದು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಪೇಜಾವರ ಶ್ರೀ ಮಾಂಸ ತಿನ್ನುತ್ತಿದ್ದರೇ ? :ತೀವ್ರ ಆಕ್ರೋಶ, ಕ್ಷಮೆ ಯಾಚಿಸಿದ ಹಂಸಲೇಖ
ಬಿಳಿಗಿರಿ ರಂಗನ ಕಥೆ
ಬಿಳಿಗಿರಿ ರಂಗಯ್ಯ ಸೋಲಿಗ ಜನಾಂಗದ ಹೆಣ್ಣಿನೊಂದಿಗೆ ರಮಿಸಿದರೆ ಅದು ದೊಡ್ಡ ವಿಷಯವೇ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತಾಗುತ್ತಿತ್ತು.. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣಿನೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ ಎಂದು ಹಂಸಲೇಖ ಪೌರಾಣಿಕ ನಂಬಿಕೆಯನ್ನು ಪ್ರಶ್ನಿಸಿದ್ದರು, ಇದು ಹಲವು ಭಕ್ತರ ವಿರೋಧದ ಪ್ರತಿಕ್ರಿಯೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.