ಹನುಮನುದಿಸಿದ ಕರುನಾಡು


Team Udayavani, Apr 26, 2021, 6:50 AM IST

ಹನುಮನುದಿಸಿದ ಕರುನಾಡು

ವಿಶ್ವದಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದ ಯುದ್ಧದಷ್ಟೇ, ದೇವರು ಮತ್ತು ಧರ್ಮಕ್ಕಾಗಿಯೂ ಅಷ್ಟೇ ತೀವ್ರ ಜಟಾಪಟಿ ನಡೆದಿದೆ. ಸಹಜವಾಗಿ ಪ್ರವಹಿಸುವ ನದಿಯ ನೀರನ್ನು ತಳ ಮಟ್ಟದಲ್ಲಿ ಕಲಕಿದರೆ ಶುದ್ಧ ನೀರು ಹೇಗೆ ಸಿಗದೋ, ಅಂತೆಯೇ ದೇವರ ಕುರಿತ ಜಗಳವೂ ಮನುಷ್ಯನ ಮನಃಸ್ಥಿತಿಯನ್ನೇ ರಾಡಿ ಎಬ್ಬಿಸುತ್ತದೆ. ಇಂಥದ್ದೇ ಪ್ರಸಂಗ “ಹನುಮ ಜನ್ಮಭೂಮಿ’ಯ ಪ್ರಕರಣ! ಇದು ವಿದ್ವಾಂಸರ ಜಗಳವಲ್ಲದೆ, ಮತ್ತೇನೂ ಅಲ್ಲ.

ತಿರುಪತಿಯ ವೆಂಕಟೇಶ್ವರನ ಸುತ್ತ ಇರುವ ಪರ್ವತಗಳಲ್ಲೇ ಟಿಟಿಡಿ “ಹನುಮ ಜನ್ಮಭೂಮಿ’ಯನ್ನು ಸೃಷ್ಟಿಸಿರುವುದು ಈ ಚರ್ಚೆಗೆ ಕಾರಣ. ಟಿಟಿಡಿ ಸಮಿತಿ ಭಾರೀ ಪ್ರಯಾಸಪಟ್ಟು ಸಾಕ್ಷ್ಯಗಳನ್ನು ಒದಗಿಸಿದೆ. ಶಿವ, ಬ್ರಹ್ಮ, ಬ್ರಹ್ಮಾಂಡ, ವರಾಹ, ಭವಿಷ್ಯ ಮತ್ತು ಮತ್ಸ್ಯಪುರಾಣಗಳ ಉಲ್ಲೇಖ ಮಾಡಿ, ಜಗತ್ತನ್ನು ನಂಬಿಸಲು ಹೊರಟಿದ್ದಾರೆ. ಅಂತಿಮವಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿರುವ ಏಳು ಬೆಟ್ಟ ಶ್ರೇಣಿಯ ಬೆಟ್ಟಗಳಲ್ಲಿ ಒಂದಾದ “ಅಂಜನಾದ್ರಿಯೇ ಹನುಮನ ಜನ್ಮಸ್ಥಳ’ ಎಂದು ಘೋಷಿಸಿದ್ದಾರೆ.

ಅಷ್ಟಕ್ಕೂ ಪುರಾಣ ದಾಖಲೆಯೇ ಅಲ್ಲ!
ಪುರಾಣಗಳು ಯಾವುದೇ ಸಂಸ್ಕೃತಿ ಅಥವಾ ಧರ್ಮದಲ್ಲಿ ಸಂಬಂಧಿತ ದಂತಕಥೆಗಳ ಸಮೂಹವಷ್ಟೇ. ಇವುಗಳು ಆಡುಭಾಷೆ ರೂಪದಲ್ಲಿ ಅಥವಾ ಲಿಖೀತ ರೂಪದಲ್ಲಿ ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ಪ್ರವಹಿಸಿವೆ. ಇಷ್ಟಾರ್ಥಗಳನ್ನು ಪೂರೈಸಿದ ಯಾವುದರ ಕುರಿತೂ ಪುರಾಣ ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಕುಮಟಾ ತಾಲೂಕಿನ ಗೋರೆಯಲ್ಲಿ ಶ್ರೀಕೃಷ್ಣ ಜನಿಸಿದ ಎಂದು ಕವಿಯೊಬ್ಬರು “ಗೋರೆ ಪುರಾಣ’ ಬರೆದಿದ್ದರು. ಅಂದಮಾತ್ರಕ್ಕೆ, ಶ್ರೀಕೃಷ್ಣ ಪರಮಾತ್ಮ ಜನಿಸಿದ್ದು ಗೋರೆ ಪರ್ವತದಲ್ಲಿ ಎನ್ನಲಾದೀತೇ? ಇಂದಿನ ಕೊರೊನಾ ಕಾಲಘಟ್ಟ ವೀಕ್ಷಿಸಿದವನೊಬ್ಬ “ಕೊರೊನಾ ಪುರಾಣ’ವೆಂದು ಬರೆದರೆ ತಪ್ಪೆನಿಸದು. ತಿರು ಪತಿಯವರು ಸಾಕ್ಷಿಗಾಗಿ ಪುರಾಣ, ಅಲ್ಲಿಯ ಸ್ಥಳಮಹಿಮೆ ಯಾದ ವೆಂಕಟೇಶ ಪುರಾಣ, ತಮಿಳು ವೆಂಕಟೇಶ್ವರ ಮಹಾತೆ¾ಯನ್ನು ಆಧರಿಸುವರು. ಕೊನೆಯ ಪಕ್ಷ ಶ್ರೀಮದ್‌ ರಾಮಾಯಣದ ಒಂದು ವಾಕ್ಯವನ್ನೂ ಆಧಾರಕ್ಕಾಗಿ ತೆಗೆದುಕೊಳ್ಳಲಿಲ್ಲ. ಹತ್ತು ಅವತಾರಗಳನ್ನು ಬಿಟ್ಟರೆ ಉಳಿದವೆಲ್ಲವೂ ಉಪ ಅವತಾರಗಳು.
ಟಿಟಿಡಿ: ತಿರುಮಲದಲ್ಲಿ ಅಂಜನಾದ್ರಿ ಇದೆ ಎಂಬ ಅಂಶ ಪುಷ್ಟೀಕರಿಸಲು “ವೆಂಕಟಾಚಲ ಮಹಾತ್ಮ್ಯಮ್’ ಮತ್ತು ವರಾಹಮಿಹಿರನ “ಬೃಹತ್‌ ಸಂಹಿತಾ’ದಲ್ಲಿ ಸಾಕ್ಷ್ಯಗಳಿವೆ.

ಪ್ರತಿಕ್ರಿಯೆ: ವರಾಹಮಿಹಿರನ “ಬೃಹತ್‌ ಸಂಹಿತಾ’ ಜ್ಯೋತಿಷ ಶಾಸ್ತ್ರವನ್ನು ವಿವರಿಸುವ ಗ್ರಂಥ. ಅಲ್ಲಿ ನವಗ್ರಹಗಳ ಗತಿವಿಸ್ಮಯ, ದೋಷ ಪರಿಹಾರಗಳಷ್ಟೇ ಉಲ್ಲೇಖಗಳಿವೆ. ಹನುಮಂತನ ಉಲ್ಲೇಖವಿದ್ದರೂ, “ಹನುಮ ಶಕ್ತಿವರ್ಧನೆಗಾಗಿ ಆರಾಧಿಸಲ್ಪಡುವ ದೇವರು’ ಎಂದು ಬಣ್ಣಿಸಲಾಗಿದೆ. ಇನ್ನೊಂದು ಸಾಕ್ಷಿಯಾದ “ವೆಂಕಟಾಚಲ ಮಹಾತ್ಮ್ಯಮ್’ ಕೇವಲ ಪುರಾಣ. ಚಾರಿತ್ರಿಕ ಸಾಕ್ಷ್ಯ ಎನ್ನಲಾಗದು.

ಟಿಟಿಡಿ: “ವೆಂಕಟಾಚಲವನ್ನು ಅಂಜನಾದ್ರಿ ಎಂದು ಕರೆಯಲಾಗಿದೆ’.
ಪ್ರತಿಕ್ರಿಯೆ: ಇದು ತುಸು ಹಾಸ್ಯಾಸ್ಪದ. ಏಳು ಬೆಟ್ಟಗಳಲ್ಲಿ ವೆಂಕಟಾಚಲ ಪರ್ವತವನ್ನು ಅಂಜನಾದ್ರಿ ಪರ್ವತವೆಂದು ಯಾರು, ಏಕೆ ಬದಲು ಮಾಡಿದರು? ಇದಕ್ಕೆ ಸ್ಪಷ್ಟತೆ ಇಲ್ಲ.

ಟಿಟಿಡಿ: “ಕಂಬಾ ರಾಮಾಯಣಂ’ ಮತ್ತು ಅನ್ನಮಾಚಾರ್ಯ ಸಂಕೀರ್ತನೆಗಳನ್ನು ಆಧಾರಕ್ಕೆ ಬಳಸಿದ್ದಾರೆ. “ವೆಂಕಟಾಚಲಂನ್ನು ಅಂಜನಾದ್ರಿ ಮತ್ತು ಇತರ 19 ಹೆಸರುಗಳೆಂದು ಕರೆಯಲಾಗುತ್ತದೆ. ತ್ರೇತಾ ಯುಗದಲ್ಲಿ ಅಂಜನಾದ್ರಿಯ ಮೇಲೆ
ಹನುಮಾನ್‌ ಜನಿಸಿದ. ಇದಕ್ಕೆ ಪೂರಕ ಅನೇಕ ಶಾಸನಗಳಿವೆ’ ಎಂದಿದ್ದಾರೆ.

ಪ್ರತಿಕ್ರಿಯೆ: ಮೂಲ ವಾಲ್ಮೀಕಿ ರಾಮಾಯಣವನ್ನು ಬಿಟ್ಟು 12ನೇ ಶತಮಾನದಲ್ಲಿ ರಚಿತವಾದ “ಕಂಬಾ ರಾಮಾಯಣಂ’ ಮತ್ತು ಕೀರ್ತನೆಗಳು ಅದ್ಹೇಗೆ ಸಾಕ್ಷ್ಯಗಳಾದವು? ಅನ್ನಮಾಚಾರ್ಯರು ಕೊಪ್ಪಳದ ಅಂಜನಾದ್ರಿಯನ್ನು ಹೊಗಳಿ¨ªಾರೆ. ಅದು ತಿರುಮಲದ ಹನುಮನ ಕುರಿತು ಎನ್ನುವಂತಿಲ್ಲ! ತಿರುಮಲದ ಟಿ.ಟಿ.ಡಿ.ಯವರು ಹನುಮ ಜನ್ಮದ ಕುರಿತು ಒಂದು ಶಾಸನವನ್ನಾದರೂ ಉಲ್ಲೇಖೀಸಬೇಕಿತ್ತಲ್ಲವೇ? ಹಂಪಿಯ ಕುರಿತು ಆನೆಗೊಂದಿ ಸನಿಹದ ದೇವಘಾಟ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ಗೌರಿಬಿದನೂರುಗಳಲ್ಲಿ ಅನೇಕ ಶಾಸನಗಳಿವೆ.

ಟಿಟಿಡಿ: “ಕರ್ನಾಟಕದ ಹಂಪಿಯು ಹನುಮನ ಜನ್ಮಸ್ಥಳವಲ್ಲ’ ಎಂದಿದ್ದಾರೆ. ಇದನ್ನು ಸಾಬೀತುಪಡಿಸಲು ತಮ್ಮಲ್ಲಿ ಪುರಾವೆಗಳಿವೆ ಎಂದಿದ್ದಾರೆ.

ಪ್ರತಿಕ್ರಿಯೆ: ಅಂಥ ಪುರಾವೆಗಳನ್ನು ಒದಗಿಸಲಿಲ್ಲವೇಕೆ? ಹಂಪಿಯ ಕುರಿತು ಶ್ರೀಮದ್‌ ರಾಮಾಯಣ ಹಾಗೂ ನಮ್ಮಲ್ಲಿರುವ ಪುರಾವೆಗಳನ್ನು ಗಮನಿಸಬಹುದು. “ಹನುಮನುದಿಸಿದ ನಾಡು’ ಎಂದು “ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ನಮ್ಮ ನಾಡಗೀತೆಯಲ್ಲಿ ಹುಯಿಲಗೋಳ ನಾರಾಯಣರಾಯರು ಆಧಾರಗಳಿಲ್ಲದೆ ಬರೆದಿರಲಿಕ್ಕಿಲ್ಲ. ಹನುಮನುದಿಸಿದ ನಾಡು ಕರ್ನಾಟಕ ಎನ್ನುವುದು ಪ್ರಶ್ನಾತೀತ.

ನಮ್ಮ ಅಂಜನಾದ್ರಿ ಬೆಟ್ಟದ ಹನುಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮನ ದೇಗುಲ ತಲುಪಲು ಪ್ರವಾಸಿಗರು 570 ಮೆಟ್ಟಿಲುಗಳನ್ನು ಹತ್ತಬೇಕು. ದೇವಸ್ಥಾನಕ್ಕೆ ಹೋಗುವಾಗ, ಬೆಟ್ಟ ಹತ್ತುವಾಗ ಹಲವಾರು ಕೋತಿಗಳು ಎದುರಾಗುತ್ತವೆ. ಅತಿ ವಯಸ್ಸಾದ ವಾನರ ಇಲ್ಲಿ ಸಿಕ್ಕೇ ಸಿಗುವುದು. ಈ ಬೆಟ್ಟದಲ್ಲಿ ಸನ್ಯಾಸಿಗಳ ವಾಸವನ್ನೂ ಕಾಣಬಹುದು.

ಟಿಟಿಡಿ ವಾದಕ್ಕೆ ಆಂಧ್ರದಲ್ಲೇ ಒಮ್ಮತವಿಲ್ಲ!
ಟಿಟಿಡಿಯ “ಹನುಮ ವಾದ’ದ ಬಗ್ಗೆ ರಾಷ್ಟ್ರೀಯ ಹಸ್ತಪ್ರತಿ ಇಲಾಖೆಯ ಮಾಜಿ ನಿರ್ದೇಶಕ ವೆಂಕಟರಮಣ ರೆಡ್ಡಿ ಅತೃಪ್ತಿ ಸೂಚಿಸಿದ್ದಾರೆ. ಅಲ್ಲದೆ, ಪುರಾತಣ್ತೀ ಇಲಾಖೆ, ವಿಶ್ವ ಹಿಂದೂ ಪರಿಷತ್‌ ಕೂಡ ಈ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿವೆ.

ಹನುಮನ ಬೀಡಿನ ಕುರುಹುಗಳು ಎಷ್ಟು ಬೇಕು?
– ಹನುಮ ಜನಿಸಿದ ಅಂಜನಾದ್ರಿಯ ಸುತ್ತಮುತ್ತ ಈಗಲೂ ಸುಗ್ರೀವ ಗುಹೆ, ವಾಲಿ ಗುಹೆ, ವಾಲಿಯ ಸಂಪತ್ತಿನ ಭಂಡಾರ, ವಾಲಿ ಕಾಷ್ಟ, ಮತಂಗ ಋಷಿಗಳ ಪರ್ವತ, ಶಬರಿ ಗುಹೆ, ಮಾಲ್ಯವಂತನ ಗುಹೆ… ಹೀಗೆ ನಾನಾ ವಾನರರ ಗುಹೆಗಳಿವೆ. ಋಷಿಗಹ್ವರವಿದೆ.

– ಸೀತೆಯ ಸೆರಗಿನ ಕುರುಹು ಕೂಡ ಶಿಲೆಯಲ್ಲಿ ಅಚ್ಚಾಗಿದೆ ಎನ್ನುವ ನಂಬಿಕೆಯಿದೆ.
– ತಾಯಿ ಅಂಜನಾದೇವಿ ಬಾಣಂತಿ ಆಗಿದ್ದಾಗ ಸ್ನಾನಕ್ಕೆ ನೀರಿರಲಿಲ್ಲ. ಆ ಸಂದರ್ಭದಲ್ಲಿ ಹನುಮ ತುಂಗಭದ್ರೆ ಯನ್ನೇ ಎರಡು ಭಾಗವಾಗಿಸಿ, ಒಂದು ಭಾಗವನ್ನು ತಾಯಿಯ ಬಳಿಗೆ ಬರುವಂತೆ ಮಾಡಿದ ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕ ಸ್ಥಳನೋಟಗಳನ್ನೂ ಇಲ್ಲಿ ಕಾಣಬಹುದು.

ರಾಮಾಯಣದಲ್ಲಿನ ಆಧಾರಗಳು
ಕೊಪ್ಪಳ ಜಿಲ್ಲೆಯಲ್ಲಿ ತುಂಗಾಭದ್ರಾ ನದಿಯ ದಕ್ಷಿಣಕ್ಕೆ ಬರುವ ಪಂಪಾ ಸರೋವರ ಬಗ್ಗೆ ರಾಮಾಯಣದಲ್ಲಿ ಹಲವು ಶ್ಲೋಕ ಉಲ್ಲೇಖಗಳನ್ನು ಕಾಣಬಹುದು.
– “ಸ ತಾಂ ದೃಷ್ಟಾ$Ì ತತಃ ಪಮಾ³ಂ’ (ಅರಣ್ಯಕಾಂಡ: 79-22ನೇ ಶ್ಲೋಕ) ರಾಮ- ಲಕ್ಷ್ಮಣರು ಪಂಪಾ ಸರೋವರ ನೋಡಿದ ಸಂದರ್ಭ.
– “ಋಷ್ಯಮೂಕೇ ಗಿರಿವರೇ ಪಮಾ³ಪರ್ಯಸ್ತು ಶೋಭಿತೇ’ (72-13) “ಪಂಪಾ ಸರೋವರದ ಪರಿಸರದಿಂದ ಶೋಭಾಯಮಾನವಾಗಿ ಕಾಣುತ್ತಿರುವ ಋಷ್ಯಮೂಕ ಗಿರಿವರ’.
– ಪಂಪಾ ಸರೋವರದ ವರ್ಣನೆ (73): ಸೀತೆಯನ್ನು ಕಳೆದುಕೊಂಡ ಶ್ರೀರಾಮನ ಪರಿತಾಪಕ್ಕೆ ಪಂಪಾ ಸರೋವರವೇ ಉಪಮೆಯನ್ನಾಗಿ ವರ್ಣಿಸಲಾಗುತ್ತದೆ.
– ಶ್ರೀರಾಮನಿಗೆ ಹಿಂದೆ ಸಿಕ್ಕಿದ ಕಬಂಧನೆಂಬ ಶಾಪಗ್ರಸ್ತ ಗಂಧರ್ವ, “ಸುಗ್ರೀವನ ಸಖ್ಯವನ್ನು ಮಾಡಿಕೊ’, “ಸಖ್ಯಂ ಕುರುಷÌ’ (73-44) ಎನ್ನುವನು.
– ಸೌಮಿತ್ರೇ ಶೋಭತೇ ಪಂಮಾ³ ವೈಡೂರ್ಯವಿಮಲೋದಕಾ (1-4) “ವೈಡೂರ್ಯ ಮಣಿಯಂತೆ ಸ್ವತ್ಛವಾಗುವ ಪವಿತ್ರವಾದ ಪಂಪಾ ಸರೋವರವನ್ನು ನೋಡು’.
– ಸೌಮಿತ್ರೇ ಪಶ್ಯ ಪಮಾ³ಯಾಃ ಕಾನನಂ ಶುಭದರ್ಶನಮ್‌ (1-5 , 73 74, 93, 94, 99, 103, 104) “ಶುಭಪ್ರದೇಶವಾದ ಪಂಪಾ ಅರಣ್ಯವನ್ನು ನೋಡು ಲಕ್ಷ¾ಣ’.
– “ಮಂದಾನ್ಯಾಸ್ತು’ (94): “ಮಂದಾಕಿನೀ ನದಿಯ ಮನೋರಮ್ಯತೆಯನ್ನು ಪಂಪಾ ಸರೋವರ ಹೊಂದಿದೆ’ ಎಂಬ ವರ್ಣನೆ ಕಾಣಬಹುದು.

– ಅನಂತವೈದ್ಯ ಯಲ್ಲಾಪುರ, ಹಿರಿಯ ವಿದ್ವಾಂಸರು

ಟಾಪ್ ನ್ಯೂಸ್

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.