ಹನೂರು ಪಟ್ಟಣ ಪಂಚಾಯತ್ ಚುನಾವಣೆ: ಬದ್ದವೈರಿಗಳ ಸಮಾಗಮಕ್ಕೆ ವೇದಿಕೆಯಾಗಲಿದೆಯೇ?
Team Udayavani, Oct 10, 2020, 7:04 PM IST
ಹನೂರು : 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯಿತಿಗೆ ಕಳೆದ 2019ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಂದಿದ್ದು 3 ಪಕ್ಷಗಳಿಗೂ ಇತರೆ ಪಕ್ಷದೊಂದಿಗೆ ಮೈತ್ರಿಯ ಅನಿವಾರ್ಯತೆ ಎದುರಾಗಿದೆ.
ಹನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ವಾರ್ಡುಗಳಿದ್ದು 13 ಸದಸ್ಯ ಬಲವಿದೆ. ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 7 ಸ್ಥಾನಗಳ ಅವಶ್ಯಕತೆಯಿದೆ. 2019ರ ಮೇನಲ್ಲಿ ಜರುಗಿದ ಚುನಾವಣೆಯಲ್ಲಿ ಮತದಾರರು ಯಾವುದೇ ಪಕ್ಷಕ್ಕೂ ಬಹುಮತ ನೀಡಿಲ್ಲ. ಇಲ್ಲಿ 13 ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಜೆಡಿಎಸ್, 4 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 3 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ಬಿಜೆಪಿ ಪಕ್ಷದ ಸದಸ್ಯರೋರ್ವರು ಕೋವಿಡ್ ಗೆ ತುತ್ತಾದ ಹಿನ್ನೆಲೆ ಹಾಲಿ 12 ಸದಸ್ಯರು ಮಾತ್ರವಿದ್ದು, ಮತ್ತೊಂದು ಸ್ಥಾನಕ್ಕೆ ಉಪಚುನಾವಣೆ ಎದುರಾಗಲಿದೆ.
ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಇದೀಗ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಗೊಳಿಸಿದ್ದು ನೂತನ ಮೀಸಲಾತಿಯ ಅನ್ವಯ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೂ ಮತ್ತು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಬಿಗೂ ಮೀಸಲಾಗಿದೆ.
ಇದನ್ನೂ ಓದಿ:ರಿಲಯನ್ಸ್ ಜತೆಗಿನ 2,500 ಕೋಟಿ ರೂ.ಗಳ ಒಪ್ಪಂದ ರದ್ದುಗೊಳಿಸಿದ ರಕ್ಷಣಾ ಸಚಿವಾಲಯ
ಬದ್ಧವೈರಿಗಳ ಸಮಾಗಮಕ್ಕೆ ವೇದಿಕೆಯಾಗಲಿದೆಯೇ?: ಹನೂರು ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಮಾಜಿ ಸಚಿವ ದ್ವಯರಾದ ದಿವಂಗತ ರಾಜೂಗೌಡ ಮತ್ತು ನಾಗಪ್ಪ ಕುಟುಂಬಗಳ ಮಧ್ಯೆಯೇ ರಾಜಕೀಯ ಜಿದ್ದಾಜಿದ್ದಿ ಏರ್ಪಡುತಿತ್ತು. ಅದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತೃತೀಯ ಶಕ್ತಿಯಾಗಿ ಜೆಡಿಎಸ್ ಪಕ್ಷದಿಂದ ಸ್ಫರ್ಧಿಸಿ ಸುಮಾರು 44ಸಾವಿರಕ್ಕೂ ಅಧಿಕ ಮತ ಪಡೆದಿದ್ದ ಮಂಜುನಾಥ್ ಎಲ್ಲರ ಹುಬ್ಬೇರುವಂತೆ ಮಾಡಿದರು. ತೃತೀಯ ಶಕ್ತಿಯಾಗಿ ಮಂಜುನಾಥ್ ಹೊರಹೊಮ್ಮುವುದು ಹಾಲಿ ಶಾಸಕ ನರೇಂದ್ರ ರಾಜೂಗೌಡ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಇಬ್ಬರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆ ತೃತೀಯ ಶಕ್ತಿಯನ್ನು ಕುಗ್ಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ದಿಸೆಯಲ್ಲಿ ಪಟ್ಟಣ ಪಂಚಾಯಿತಿಯ ವರಿಷ್ಠರ ಆಯ್ಕೆ ಚುನಾವಣೆಯು ರಾಜಕೀಯ ಬದ್ಧವೈರಿಗಳಾಗಿರುವ ಹಾಲಿ ಹ್ಯಾಟ್ರಿಕ್ ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಸಮಾಗಮಕ್ಕೆಪ ವೇದಿಕೆಯಾಗಲಿದೆ ಎಂಬುವ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚಾ ವಿಷಯವಾಗಿದೆ.
ಇದನ್ನೂ ಓದಿ:ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಗೆ ಕೋವಿಡ್ ದೃಢ
ಮೀಸಲಾತಿ ಗೊಂದಲ: ಇದೀಗ ಪ್ರಕಟಗೊಂಡಿರುವ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್‍ನಿಂದ ಯಾವ ಮಹಿಳಾ ಸದಸ್ಯರು ಆಯ್ಕೆಯಾಗಿಲ್ಲ. ಆದುದರಿಂದ ಅಧ್ಯಕ್ಷ ಹುದ್ದೆಯು ಬಿಜೆಪಿ ಅಥವಾ ಜೆಡಿಎಸ್‍ನ ಪಾಲಾಗಲಿದೆ. ಇನ್ನು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಬಿಗೆ ಮೀಸಲಾಗಿದ್ದು ಈ ವರ್ಗಕ್ಕೆ ಸೇರಿರುವ ಯಾವ ಸದಸ್ಯರು ಆಯೆಯಾಗಿಲ್ಲ. ಈ ಹಿನ್ನೆಲೆ ಸಾಮಾನ್ಯ ವರ್ಗದಿಂದ ಗೆಲುವು ಸಾಧಿಸಿರುವ ಯಾವ ಸದಸ್ಯರಿಗೆ ಈ ಸ್ಥಾನ ದೊರಕಲಿದೆ ಎಂಬುವುದು ಚರ್ಚಾ ವಿಷಯವಾಗಿದೆ. ಇನ್ನು ಕೆಲ ಸದಸ್ಯರಂತು ನಮ್ಮ ಸಮುದಾಯ ಯಾವ ವರ್ಗಕ್ಕೆ ಬರಲಿದೆ, ನಮಗೇನಾದರೂ ಅವಕಾಶ ಸಿಗಲಿದೆಯೇ ಎಂಬುವ ಹಂಬಲದಿಂದ ಜಾತಿವಾರು ಪಟ್ಟಿಯ ಹುಡುಕಾಟಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಯಶೋಗಾಥೆ:5 ಸಾವಿರ ರೂ. ಬಂಡವಾಳದಲ್ಲಿ ಕೋಳಿ ಫಾರಂ ಆರಂಭ…ಇಂದು 8,700 ಕೋಟಿ ವಹಿವಾಟು!
ಒಟ್ಟಾರೆ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಸದಸ್ಯರು, ಜೆಡಿಎಸ್‍ನಿಂದ 3 ಸದಸ್ಯರು ಅರ್ಹರಾಗಿದ್ದು ಒಂದೊಮ್ಮೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಏರ್ಪಟ್ಟಲ್ಲಿ 12ನೇ ವಾರ್ಡಿನ ಸದಸ್ಯೆ ಚಂದ್ರಮ್ಮ ಆಯ್ಕೆ ಬಹುತೇಕ ಖಚಿತವಾಗಲಿದೆ. ಉಪಾಧ್ಯಕ್ಷ ಹುದ್ದೆ ಇನ್ನೂ ಗೊಂದಲದ ಗೂಡಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.