ಉತ್ತರಾಖಂಡ್ ನಲ್ಲಿ “ಪ್ರತಿ ಮನೆಯೂ ಬಿಜೆಪಿ, ಮನೆ, ಮನೆಗೆ ಬಿಜೆಪಿ ಅಭಿಯಾನ”
ಪ್ರತಿ ಮನೆಯ ಭೇಟಿ ವೇಳೆಯೂ ಮನೆಯ ಗೋಡೆಗೆ ಬಿಜೆಪಿಯ ಸ್ಟಿಕ್ಕರ್ ಅಂಟಿಸಬೇಕಾಗಿದೆ
Team Udayavani, Nov 22, 2021, 12:28 PM IST
ನವದೆಹಲಿ: ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿರುವ ಉತ್ತರಾಖಂಡ್ ರಾಜ್ಯದಲ್ಲಿ, ಮನೆ,ಮನೆಗೆ ಬಿಜೆಪಿ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕಾಗಿದೆ.
“ಪ್ರತಿ ಮನೆಯೂ ಬಿಜೆಪಿ, ಮನೆ, ಮನೆಗೆ ಬಿಜೆಪಿ ಎಂಬ ಕಾರ್ಯಕ್ರಮದಡಿ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿರುವ 11,000 ಚುನಾವಣಾ ಮತಗಟ್ಟೆಯ ವ್ಯಾಪ್ತಿಯಲ್ಲಿರುವ ಪ್ರತಿ ಮನೆ ಬಾಗಿಲ ಕದತಟ್ಟಬೇಕಾಗಿದೆ” ಎಂದು ವರದಿ ತಿಳಿಸಿದೆ.
ಪಕ್ಷದ ಹಿರಿಯ ಮುಖಂಡರೊಬ್ಬರ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತದಾರರಿಗೆ ಮಾಹಿತಿ ನೀಡಬೇಕಾಗಿದೆ. ಪ್ರತಿ ಮನೆಯ ಭೇಟಿ ವೇಳೆಯೂ ಮನೆಯ ಗೋಡೆಗೆ ಬಿಜೆಪಿಯ ಸ್ಟಿಕ್ಕರ್ ಅಂಟಿಸಬೇಕಾಗಿದೆ ಎಂದು ವರದಿ ಹೇಳಿದೆ.
ಮನೆಯ ಮಾಲೀಕರ ಅನುಮತಿ ಮೇರೆಗೆ ಬಿಜೆಪಿ ಪಕ್ಷದ ಬಾವುಟವನ್ನು ಹಾರಿಸಲಾಗುವುದು. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಗೋಡೆ ಬರಹಗಳ ಅಭಿಯಾನ ಕೂಡಾ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.