ಬೌಲಿಂಗ್ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್ ಮಾತು
Team Udayavani, May 15, 2021, 1:15 AM IST
ಹೊಸದಿಲ್ಲಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸದೇ ಹೋದರೆ ಕೇವಲ ಟೆಸ್ಟ್ ಮಾತ್ರವಲ್ಲ, ಏಕದಿನ ಹಾಗೂ ಟಿ20 ಪಂದ್ಯಗಳಲ್ಲೂ ಸ್ಥಾನ ಪಡೆಯುವುದು ಕಷ್ಟವಿದೆ ಎಂಬುದಾಗಿ ಆಯ್ಕೆ ಸಮಿತಿಯ ಮಾಜಿ ಸದಸ್ಯ ಶರಣ್‌ದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಶರಣ್‌ದೀಪ್ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಅಲ್ಲ
“ಆಯ್ಕೆಗಾರರು ಟೆಸ್ಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಏಕೆ ಆರಿಸಲಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಬೆನ್ನಿನ ಶಸ್ತ್ರಚಿಕಿತ್ಸೆ ಬಳಿಕ ಅವರು ಬೌಲಿಂಗ್ ನಡೆಸುತ್ತಿಲ್ಲ. ಆದರೆ ತಂಡಕ್ಕೆ ಆಯ್ಕೆಯಾದದ್ದೇ ಆದರೆ ಅವರು ಏಕದಿನದಲ್ಲಿ 10 ಓವರ್, ಟಿ20ಯಲ್ಲಿ 4 ಓವರ್ ಎಸೆಯಬೇಕಾಗುತ್ತದೆ. ಅವರನ್ನು ಕೇವಲ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಂದು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದು’ ಎಂಬುದಾಗಿ ಶರಣ್‌ದೀಪ್ ಹೇಳಿದರು.
ಸಮತೋಲನ ತಪ್ಪುತ್ತದೆ
“ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸದೇ ಹೋದರೆ ತಂಡದ ಸಮತೋಲನ ಸಂಪೂರ್ಣ ತಪ್ಪುತ್ತದೆ. ಆಗ ಹೆಚ್ಚುವರಿ ಬೌಲರ್ ಓರ್ವನನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸೂರ್ಯಕುಮಾರ್ ಯಾದವ್ ಮೊದಲಾದ ಬ್ಯಾಟ್ಸ್ ಮನ್‌ಗಳು ಹೊರಗುಳಿಯಬೇಕಾಗುತ್ತದೆ’ ಎಂದರು.
“ಆದರೆ ತಂಡದಲ್ಲೀಗ ಸಾಕಷ್ಟು ಮಂದಿ ಆಲ್‌ರೌಂಡರ್‌ಗಳನ್ನು ಕಾಣಬಹುದು. ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಇದ್ದಾರೆ. ರವೀಂದ್ರ ಜಡೇಜ ಮರಳಿದ್ದಾರೆ. ಶಾದೂìಲ್ ಠಾಕೂರ್ ಕೂಡ ಸೈ ಎನಿಸಿಕೊಂಡಿದ್ದಾರೆ. ಇದು ಕೂಡ ಹಾರ್ದಿಕ್ ಸೇರ್ಪಡೆಗೆ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದರು ಶರಣ್‌ದೀಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.