Haryana Election Result: ಹರಿಯಾಣದಲ್ಲಿ ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ಪ್ರಧಾನಿ ಮೋದಿ
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 3ನೇ ಅವಧಿಗೆ ಒಂದೇ ಪಕ್ಷ ಅಧಿಕಾರಕ್ಕೇರಿದೆ, ಬಿಜೆಪಿ ಕೇಂದ್ರ ಕಚೇರಿ ಬಳಿ ಸಂಭ್ರಮಾಚರಣೆ
Team Udayavani, Oct 9, 2024, 8:00 AM IST
ಹೊಸದಿಲ್ಲಿ: ನವರಾತ್ರಿಯ 6ನೇ ದಿನ ದೇವಿ ಕಾತ್ಯಾಯಿನಿಯ ಕೈಯಲ್ಲಿರುವ ಕಮಲ ಅರಳಿದೆ! ಹರ್ಯಾಣದ ಗೆಲುವಿನ ರೂಪದಲ್ಲಿ ದೇವಿಯ ಆಶೀರ್ವಾದ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹರ್ಷವ್ಯಕ್ತಪಡಿಸಿದ್ದಾರೆ.
ಸತತ ಮೂರನೇ ಬಾರಿಗೆ ರಾಜ್ಯದಲ್ಲಿ ಸರಕಾರ ಸ್ಥಾಪಿಸಲು ನೆರವಾಗಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿರುವ ಮೋದಿ, ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ ಹರ್ಯಾಣ ಫಲಿತಾಂಶ ಹೊರಬೀಳುತ್ತಿದ್ದಂತೆ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿ ಬಳಿ ಜನರನ್ನುದ್ದೇಶಿಸಿ ಪ್ರಧಾನಿ ವಿಜಯದ ಭಾಷಣ ಮಾಡಿದ್ದಾರೆ.
ಹರ್ಯಾಣದಲ್ಲಿ ಅಭಿವೃದ್ಧಿಯ ಗ್ಯಾರಂಟಿಗಳು ಸುಳ್ಳಿನ ಕಂತೆಯನ್ನು ನೆಲಕಚ್ಚಿಸಿವೆ. ಇದು ಪ್ರಜಾಪ್ರಭುತಕ್ಕೆ ಸಂದ ಜಯ. ಹರ್ಯಾಣ ರಚನೆಯಾದಾಗಿನಿಂದಲೂ ಜನರು ಸರಕಾರಗಳನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 3ನೇ ಅವಧಿಗೆ ಒಂದೇ ಪಕ್ಷ ಅಧಿಕಾರಕ್ಕೇರಿದೆ. ಇದು ಜನರು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕವಾಗಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದು ಸಮಾಜವನ್ನು ವಿಭಜಿಸಿ ಆರಾಜಕತೆ ತರಲು ಕಾಂಗ್ರೆಸ್ ಪ್ರಯತ್ನಗಳನ್ನು ಮಾಡಿದೆ. ರೈತರನ್ನು ಕೆರಳಿಸಿ, ಪ್ರಚೋದಿಸಿ ಬೆಂಕಿ ಹೊತ್ತಿಸಲು ಹೇಗೆಲ್ಲಾ ಪ್ರಯತ್ನಿಸಲಾಯಿತು ಎಂಬುದನ್ನು ಇಡೀ ದೇಶ ನೋಡಿದೆ. ರೈತರನ್ನು ಎತ್ತಿಕಟ್ಟಲು ನೋಡಿದ, ಪಿತೂರಿಗಳನ್ನು ಮಾಡಿದ ಕಾಂಗ್ರೆಸ್‌ಗೆ ಹರ್ಯಾಣ ರೈತರು ತಕ್ಕ ತಿರುಗೇಟು ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕಾಶ್ಮೀರದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಭೂತಪೂರ್ವ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ.
देश के ज्यादातर राज्यों के लोगों ने कांग्रेस के लिए No Entry का बोर्ड लगा दिया है।
प्रधानमंत्री श्री @narendramodi ने आज हरियाणा विधानसभा चुनाव में भाजपा की अभूतपूर्व विजय और जम्मू-कश्मीर में मिले अपार जनसमर्थन के उपरांत नई दिल्ली स्थित पार्टी मुख्यालय में उपस्थित जनसमूह को… pic.twitter.com/20xX7GO3Uy
— BJP (@BJP4India) October 8, 2024
ಡೋಲು, ನೃತ್ಯದೊಂದಿಗೆ ಲಡ್ಡು ಹಂಚಿಕೆ
ಹರ್ಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್ ಸಾಧಿಸುತ್ತಿದ್ದಂತೆ ದೇಶಾದ್ಯಂತ ಕೇಸರಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಹರ್ಯಾಣದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಜಮ್ಮು-ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವನ್ನು ದೇಶಾದ್ಯಂತ ಬಿಜೆಪಿ ನಾಯಕರು ಸಿಹಿ ಹಂಚುವ ಮೂಲಕ ಆಚರಿಸಿದ್ದಾರೆ.
ದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು ಪ್ರಧಾನಿ ಮೋದಿಯೂ ಇಲ್ಲಿ ಭಾಗಿಯಾಗಿದ್ದಾರೆ. ಇನ್ನು ಕರ್ನಾಟಕ, ಪಂಜಾಬ್ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸಿಹಿ ಹಂಚಿದ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದ್ದಾರೆ. ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಡೋಲು, ಸಂಗೀತ-ನೃತ್ಯದೊಂದಿಗೆ ಲಡ್ಡು ಹಂಚಿ ಸಂಭ್ರಮಿಸಲಾಗಿದೆ. ಬಹುತೇಕ ರಾಜ್ಯಗಳ ಪ್ರಧಾನ ಕಚೇರಿಗಳಲ್ಲಿ ಪಕ್ಷದ ಪ್ರಮುಖ ನಾಯಕರೆಲ್ಲ ಸೇರಿ ಗೆಲುವನ್ನು ಆಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.