ತಂತ್ರಜ್ಞಾನ ಪ್ರೇರಿತ ಆಧುನಿಕ ಶಿಕ್ಷಣ ಪದ್ಧತಿ ಗುರುವಿನ ಮೌಲ್ಯವನ್ನು ಕಡಿಮೆಯಾಗಿಸಿದೆಯೇ ?
Team Udayavani, Sep 6, 2019, 4:25 PM IST
ಮಣಿಪಾಲ: ಶಿಕ್ಷಕರ ದಿನಾಚರಣೆಯ ಅಂಗವಾಗಿ, ʼ ತಂತ್ರಜ್ಞಾನ ಪ್ರೇರಿತ ಆಧುನಿಕ ಶಿಕ್ಷಣ ಪದ್ಧತಿ ಗುರುವಿನ ಮೌಲ್ಯವನ್ನು ಕಡಿಮೆಯಾಗಿಸಿದೆʼ ಎಂಬ ವಾದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಉದುಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.
ಗಂಗಾಧರ್ ಎಂಎಸ್ ಕೆ ಗಂಗಾಧರ್: ಸಾಧ್ಯವಿಲ್ಲ. ಆಧುನಿಕ ತಂತ್ರಾಜ್ಞಾನವನ್ನು ಕಲಿಯಲು ಕೂಡಾ ಗುರುವಿನ ಅಗತ್ಯವಿದೆ. ಏನೇ ಆಗಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧಕ್ಕೆ ಬದಲಿಯಾಗಲು ಯಾವುದಕ್ಕೂ ಸಾಧ್ಯವಿಲ್ಲ.
ಉಮೇಶ್ ಹಿರೇಮಠ್; ವೈಜ್ಞಾನಿಕ ಬೋಧನಾ ವಿಧಾನ ಮತ್ತು ವಿದ್ಯಾರ್ಥಿಗಳೊಂದಿಗೆ ನಿಕಟ ಸೌಹಾರ್ದಯುತ ಸಂಬಂಧ ಬೆಳಸಿಕೊಂಡರೆ ಈಗಲೂ ಗುರುವಿನ ಮೌಲ್ಯ ಹೆಚ್ಚುತ್ತದೆ.
ವಿನೋದ್ ಕುಮಾರ್ ಸಿ ಎಂ: ಹೌದು. ಗುರುವಿನ ಮೌಲ್ಯ ಕಡಿಮೆಯಾಗಲು ಈಗಿನ ಗುರುಗಳಿಗೆ ತಿಳುವಳಿಕೆ ಕೂಡ ತುಂಬಾ ಕಡಿಮೆಯಾಗಿರುತ್ತದೆ.
ಹರಿ ಯಕ್ಷ: ಗುರುವಿನ ಮೌಲ್ಯ ಒಂದೇ ಅಲ್ಲ… ಎಲ್ಲವೂ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ.
ಮಧು ಎಂ ಎಚ್: ಹೌದು. ತ್ರಂತ್ರಜ್ಞಾನ ಪ್ರಯುಕ್ತ ಆಧುನಿಕ ಶಿಕ್ಷಣ ಪದ್ಧತಿ ಗುರುವಿನ ಮೌಲ್ಯ ಕಡಿಮೆಯಾಗಿದೆ. ಕಾರಣ ಎಲ್ಲವೂ ಅಂತರ್ಜಾಲದಲ್ಲಿ ಸಿಗುತ್ತದೆ ಎಂಬ ಟೀಚರ್ ಹೇಳುವ ಪದೇಪದೇ ಮಾತುಗಳು. ಮಕ್ಕಳಿಗೆ ಗುರುಗಳು ತಾವು ಓದಿ ತಿಳಿದುಕೊಂಡು ಅದನ್ನು ಅರ್ಥೈಸುವಲ್ಲಿ ಎಡವುತ್ತಿದ್ದಾರೆ. ತಮ್ಮಲ್ಲಿರುವ ಭಾರವನ್ನು ಕಡಿಮೆ ಮಾಡಿಕೊಳ್ಳಲು, ಮಕ್ಕಳಿಗೆ ಅಂತರ್ಜಾಲದ ಹುಚ್ಚನ್ನು ಹೆಚ್ಚಿಸುತ್ತಿದ್ದಾರೆ. ಸರಿಯಾದ ಗುರುವಿನ ಕರ್ತವ್ಯವನ್ನು ಗುರು ಪೂರೈಸಿದರೆ ಇಲ್ಲಿ ಯಾವುದೇ ರೀತಿ ಅಂತರ್ಜಾಲದ ಮತ್ತು ತಂತ್ರಜ್ಞಾನ ಪ್ರಯುಕ್ತ ಅದುನಿಕ ಶಿಕ್ಷಣಪದ್ಧತಿ ಮುಂದೆ ಗುರುವಿನ ಮೌಲ್ಯವೂ ಕಳೆದುಕೊಳ್ಳುವುದಿಲ್ಲ
ಶ್ರೀಧರ್ ಉಡುಪ: ತಂತ್ರಜ್ಞಾನ ಪ್ರೇರಿತ ಆಧುನಿಕ ಶಿಕ್ಷಣ ಪದ್ಧತಿಯಿಂದ ಗುರು ಸ್ಥಾನದ ಮೌಲ್ಯಕ್ಕೆ ಯಾವುದೇ ಚ್ಯುತಿಯಿಲ್ಲ. ಉದಾಹರಣೆಗೆ ಯೋಗ ಯಾ ನೃತ್ಯವನ್ನು ಯೋಗ್ಯ ಗುರುಗಳ ಸಮಕ್ಷಮದಲ್ಲಿ ಕಲಿಯುವುದಕ್ಕೂ ಹಾಗೆಯೇ ವಿಡಿಯೋ ಅಥವಾ ಆನ್ಲೈನ್ ಮೂಲಕ ಕಲಿಯುವುದಕ್ಕೂ ತುಂಬಾ ವ್ಯತ್ಯಾಸವಿದೆಯಲ್ಲವೆ? ಅಲ್ಲದೆ ಗುರುವಿನ ವಿಷಯ ಜ್ಞಾನ, ಕಲಿಕಾ ವಿಧಾನ, ವೈಯಕ್ತಿಕ ನಡವಳಿಕೆ ಮುಂತಾದ ಅಂಶಗಳ ಮೇಲೆ ಗುರು ಮೌಲ್ಯವು ಹೆಚ್ಚು ನಿರ್ಧಾರಿತವಾಗಿರುತ್ತದೆ.
ಶ್ರೀಶೈಲ್ ಉಪ್ಪಾರ್: ಸಾಧ್ಯವೇ ಇಲ್ಲ. ಗುರು ಸಾನಿಧ್ಯದಿಂದಲೇ ಸಂಸ್ಕಾರ ಸಾಧ್ಯ
ಸಂತೋಷ್ ನಾಯಕ್: ಆಧುನಿಕ ತಂತ್ರಜ್ಞಾನ ವಿದ್ಯಾಭ್ಯಾಸಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. Interactive board ನಂತಹ ತಂತ್ರಜ್ಞಾನಗಳು ದೃಶ್ಯ ಮಾಧ್ಯಮದ ಮೂಲಕ ಜ್ಞಾನ ಗ್ರಹಿಕೆಗೆ ಸಹಕಾರಿಯಾಗುತ್ತದೆ ಮತ್ತು ಇದರಿಂದ ಮಾಹಿತಿಗಳು ಬೇಗ ಮನವರಿಕೆಯಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ. ಬೆಂಗಳೂರಿನ ಅದಾವುದೋ ಶಾಲೆಯಲ್ಲಿ ರೋಬೋಟ್ಗಳು ಪಾಠ ಹೇಳಿ ಕೊಡುತ್ತವಂತೆ. ಇದೇ ರೀತಿ ಮುಂದುವರೆದರೆ ಗುರು ಎಂಬ ಸ್ಥಾನದ ಘನತೆ ಗೌರವಗಳು ಇಲ್ಲವಾಗುತ್ತದೆ.
ಶಂಕರ್ ಸಾಲ್ಯಾನ್: ಗುರು ಮುಖೇನ ಕಲಿತ ವಿದ್ಯೆಗೂ ತಂತ್ರಾಜ್ಞಾನದ ಮುಖೇನ ಕಲಿತ ವಿದ್ಯೆಗೂ ಇರುವ ವ್ಯತ್ಯಾಸ ಅನೇಕ. ಒಂದು ನೈಸರ್ಗಿಕ ಅನುಭಂಧವಾದರೆ, ಇನ್ನೊಂದು ಯಾಂತ್ರಿಕ ಸಂಬಂಧವಷ್ಟೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.