ಹಾಸನ ಫ‌ಸ್ಟ್‌, ಯಾದಗಿರಿ ಲಾಸ್ಟ್‌

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ

Team Udayavani, May 1, 2019, 3:10 AM IST

hassan

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಒಟ್ಟಾರೆ ಶೇ.73.70ರಷ್ಟು ಫ‌ಲಿತಾಂಶ ದಾಖಲಾಗಿದೆ. ಹಾಸನ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಹಾಗೂ ಉಡುಪಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿದ್ದರೆ, ಯಾದಗಿರಿ, ರಾಯಚೂರು ಹಾಗೂ ಬೆಂಗಳೂರು ದಕ್ಷಿಣ ಕ್ರಮವಾಗಿ ಕೊನೆಯ ಮೂರು ಸ್ಥಾನಗಳಲ್ಲಿವೆ.

ಈ ಮಧ್ಯೆ, ಇದೇ ಮೊದಲ ಬಾರಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ಜಿಲ್ಲಾವಾರು ಸ್ಥಾನದ ಮಾನದಂಡದಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಸರಾಸರಿ ಆಧಾರದಲ್ಲಿ ಒಂದು ಪಟ್ಟಿ ನೀಡಿದ್ದು, ಅದರ ಜತೆಗೆ ಶೈಕ್ಷಣಿಕ ಗುಣಮಟ್ಟದ ಆಧಾರದಲ್ಲಿ ಹೊಸದಾಗಿ ವರ್ಗೀಕರಣ ಮಾಡಿ ಈ ವರ್ಷದಿಂದ ಎರಡನೇ ಪಟ್ಟಿ ನೀಡಲಾಗಿದೆ.

ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳು, ಶೇ.60 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶೈಕ್ಷಣಿಕ ಗುಣಮಟ್ಟದ ಜಿಲ್ಲೆಗಳ ಪಟ್ಟಿ ನೀಡಲಾಗಿದೆ. ಹಾಸನ (ಶೇ.81.88) ಮೊದಲ ಸ್ಥಾನದಲ್ಲಿದ್ದರೆ, ಶೇ.79.21 ಅಂಕ ಪಡೆದಿರುವ ಉಡುಪಿ ಎರಡನೇ ಸ್ಥಾನದಲ್ಲಿದೆ. ಉತ್ತೀರ್ಣದ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ರಾಮನಗರ, ಗುಣಮಟ್ಟದಲ್ಲಿ 9ನೇ ಸ್ಥಾನದಲ್ಲಿದೆ.

ಎರಡೂ ವಿಭಾಗದಲ್ಲಿ ಹಾಸನ ಮೊದಲ ಸ್ಥಾನದಲ್ಲಿದ್ದು, ಗುಣಮಟ್ಟದ ಜಿಲ್ಲೆಯಲ್ಲಿ ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಜಿಲ್ಲಾವಾರು ಫ‌ಲಿತಾಂಶದಲ್ಲಿ ಕಳೆದ ಬಾರಿ 7 ಮತ್ತು 17ನೇ ಸ್ಥಾನದಲ್ಲಿದ್ದ ಹಾಸನ ಮತ್ತು ರಾಮನಗರ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಪಡೆದಿವೆ. ಕಳೆದ ಬಾರಿ ಪ್ರಥಮ ಸ್ಥಾನದಲ್ಲಿದ್ದ ಉಡುಪಿ, 5ನೇ ಸ್ಥಾನ ಹಾಗೂ ದ್ವಿತೀಯ ಸ್ಥಾನದಲ್ಲಿದ್ದ ಉತ್ತರ ಕನ್ನಡ, 4ನೇ ಸ್ಥಾನಕ್ಕೆ ಕುಸಿದಿವೆ.

ಒಟ್ಟಾರೆ ಫ‌ಲಿತಾಂಶ
ವರ್ಷ ಹಾಜರಾತಿ ಉತ್ತೀರ್ಣ ಫಲಿತಾಂಶ
2018-19 825468 608336 73.70
2017-18 838088 602802 71.93

ವಿದ್ಯಾರ್ಥಿಗಳ ಫ‌ಲಿತಾಂಶ
ಶಾಲೆ ಶಾಲೆಗಳ ಸಂಖ್ಯೆ ಹಾಜರಾದವರು ತೇರ್ಗಡೆ ಫಲಿತಾಂಶ
ಸರ್ಕಾರಿ 5202 278544 216844 77.84
ಅನುದಾನಿತ 3243 200888 155111 77.21
ಅ.ರಹಿತ 6002 259137 214360 82.72
ಒಟ್ಟು 14447 738569 586315 79.38

ಲಿಂಗವಾರು ಫ‌ಲಿತಾಂಶ
ವಿಭಾಗ ಹಾಜರಾತಿ ಉತ್ತೀರ್ಣ ಫಲಿತಾಂಶ
ಬಾಲಕರು 437557 299587 68.46
ಬಾಲಕಿಯರು 387911 308749 79.59

ನಗರ ಮತ್ತು ಗ್ರಾಮಾಂತರ ಫ‌ಲಿತಾಂಶ
ಪ್ರದೇಶ ಹಾಜರಾತಿ ತೇರ್ಗಡೆ ಫಲಿತಾಂಶ
ನಗರ 371045 259927 70.05
ಗ್ರಾಮಾಂತರ454423 348409 76.67

ಮಾಧ್ಯಮವಾರು ಸಾಧನೆ
ಮಾಧ್ಯಮ ಹಾಜರಾತಿ ಉತ್ತೀರ್ಣ ಫಲಿತಾಂಶ
ಕನ್ನಡ 493100 346103 70.19
ಇಂಗ್ಲಿಷ್‌ 294836 238471 80.88
ಉರ್ದು 24983 14958 79.87
ಮರಾಠಿ 11956 8473 70.87
ತೆಲುಗು 303 185 61.06
ತಮಿಳು 122 64 52.46
ಹಿಂದಿ 168 82 48.81

10 ವರ್ಷಗಳ ಶೇಕಡಾವಾರು ಫ‌ಲಿತಾಂಶ
ವರ್ಷ ಶೇ.ಫಲಿತಾಂಶ
2009 70.22
2010 66.81
2011 73.90
2012 76.13
2013 77.47
2014 81.20
2015 81.82
2016 75.11
2017 67.87
2018 71.93
2019 73.70

ಶೇ.100 ಮತ್ತು ಶೂನ್ಯ ಫಲಿತಾಂಶದ ಶಾಲೆಗಳು
ಶಾಲೆ ಶೇ.100 ಶೂನ್ಯ
ಸರ್ಕಾರಿ 593 0
ಅನುದಾನಿತ 130 09
ಅ.ರಹಿತ 903 37
ಒಟ್ಟು 1626 46

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಅಂಕ ವಿದ್ಯಾರ್ಥಿಗಳ ಸಂಖ್ಯೆ
625 2
624 11
623 19
622 39
621 43
620 56

ಜಿಲ್ಲಾವಾರು ಫಲಿತಾಂಶ
ಜಿಲ್ಲೆ ಶೇ. ಫ‌ಲಿತಾಂಶ
ಹಾಸನ 89.33
ರಾಮನಗರ 88.49
ಬೆಂ.ಗ್ರಾಮಾಂತರ 88.34
ಉತ್ತರ ಕನ್ನಡ 88.12
ಉಡುಪಿ 87.97
ಚಿತ್ರದುರ್ಗ 87.46
ಮಂಗಳೂರು 86.73
ಕೋಲಾರ 86.71
ದಾವಣಗೆರೆ 85.94
ಮಂಡ್ಯ 85.65
ಮಧುಗಿರಿ 84.81
ಶಿರಸಿ 84.67
ಚಿಕ್ಕೋಡಿ 84.09
ಚಿಕ್ಕಮಗಳೂರು 82.76
ಚಾಮರಾಜನಗರ 80.58
ಕೊಪ್ಪಳ 80.45
ಮೈಸೂರು 80.32
ತುಮಕೂರು 79.92
ಹಾವೇರಿ 79.75
ಚಿಕ್ಕಬಳ್ಳಾಪುರ 79.69
ಶಿವಮೊಗ್ಗ 79.13
ಕೊಡಗು 78.81
ಬಳ್ಳಾರಿ 77.98
ಬೆಳಗಾವಿ 77.43
ವಿಜಯಪುರ 77.36
ಬೆಂ.ಉತ್ತರ 76.21
ಬಾಗಲಕೋಟೆ 75.28
ಧಾರವಾಡ 75.04
ಬೀದರ್‌ 74.96
ಕಲಬುರಗಿ 74.65
ಗದಗ 74.05
ಬೆಂ.ದಕ್ಷಿಣ 68.83
ರಾಯಚೂರು 65.33
ಯಾದಗಿರಿ 53.95

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.