ಸಿದ್ದು ಜಾತ್ಯಾತೀತವೋ,ಕೋಮುವಾದಿಯೋ?: ಎಚ್‌ಡಿಕೆ

ಯಾವ ಸಮಾಜ ಯಾರ ಹಿಂದೆ ಇರುತ್ತದೆ ಎಂಬುದು ಮುಖ್ಯವಲ್ಲ

Team Udayavani, Oct 28, 2019, 7:35 PM IST

HD-Kumaraswamy-800-B

ಹಾವೇರಿ:ಜಾತಿಯ ಹೆಸರಿನಲ್ಲಿ ನಾಯಕರ ಹಿಂದೆ ಬೆಂಬಲ ಇದೆಯೋ ಇಲ್ಲವೋ ಎಂದು ಚಿಂತನೆ ಮಾಡುವ ಸಿದ್ದರಾಮಯ್ಯ ಅವರ ಸಣ್ಣತನದಿಂದಲೇ ಜನರು ಅವರು ಜಾತ್ಯಾತೀತ ವ್ಯಕ್ತಿಯೋ, ಕೋಮುವಾದಿಯೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿ ಜತೆ ಸೇರಿದ್ದರು. ಕೋಮುವಾದಿ ಜತೆ ಕೈಜೊಡಿಸುತ್ತಾರೆ ಎಂದೆಲ್ಲ ನನ್ನ ಮೇಲೆ ಆರೋಪಿಸಿದ್ದರು. ಆದರೆ, ಅಂಥವರು ಈಗ ಜಾತಿ ಆಧಾರದಲ್ಲಿ ಬೆಂಬಲ ಸಿಗುತ್ತದೆಯೋ ಸಿಗುವುದಿಲ್ಲವೋ ಎಂದು ಲೆಕ್ಕ ಹಾಕುವ ಮಟ್ಟದ ನಾಯಕರಾಗಿದ್ದಾರೆ. ಇದನ್ನು ಅವರೇ ಯೋಚನೆ ಮಾಡಬೇಕು ಎಂದರು.

ಯಾವ ಸಮಾಜ ಯಾರ ಹಿಂದೆ ಇರುತ್ತದೆ, ಯಾರ ಹಿಂದೆ ಇರುವುದಿಲ್ಲ ಎಂಬುದು ಮುಖ್ಯವಲ್ಲ. ನಮ್ಮ ಹಿಂದೆ ಯಾರು ಇದ್ದಾರೋ ಇಲ್ಲವೋ ನೋಡಬಾರದು. ನಮ್ಮ ಹಿಂದೆ ಇದ್ದವರಿಗಷ್ಟೇ ನಾನು ಜನಪ್ರತಿನಿಧಿ  ಎಂಬ ಭಾವನೆಯೂ ನಾಯಕರಲ್ಲಿ ಇರಬಾರದು. ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಸಿಗೋದು ಬಿಜೆಪಿ ದಾಖಲೆ!:
ಆದಾಯ ತೆರಿಗೆ ಇಲಾಖೆಯವರು ನನ್ನ ಮನೆ ಮೇಲೆ ದಾಳಿ ನಡೆಸಿದರೆ ದಾಖಲೆ ಸಿಗುವುದು ನನ್ನದಲ್ಲ; ಬಿಜೆಪಿಯವರದ್ದು. ನನ್ನ ಮನೆ ಮೇಲೆ ದಾಳಿ ಮಾಡಲು ಯಾರು ಬರುತ್ತಾರೆ? ದಾಳಿ ಮಾಡಲು ನಾನು ಅಂಥದ್ದೇನು ಮಾಡಿದ್ದೇನೆ? ನನ್ನಲ್ಲಿ ಅಂಥದೇನಿದೆ ಆಸ್ತಿ? ನಾನು ಅಧಿ ಕಾರದಲ್ಲಿದ್ದಾಗ ಸಂಪಾದನೆ ಮಾಡಿದ್ದು ಜನರ ಪ್ರೀತಿ-ವಿಶ್ವಾಸ ಮಾತ್ರ. ಅದರ ಮೇಲೆ ಐಟಿ ದಾಳಿ ನಡೆಸುತ್ತಾರಾ? ನಾನೇನಾದರು ಅಕ್ರಮವಾಗಿ ಆಸ್ತಿ ಗಳಿಸಿದ್ದೇನಾ? ರಾಜ್ಯದಲ್ಲಿ ಯಾರ ಮನೆ ಮೇಲೆ ದಾಳಿ ಮಾಡಿದರೂ ನನಗೇನೂ ಭಯವಿಲ್ಲ. ಯಾವ ಫೋನ್‌ ಟ್ಯಾಪಿಂಗ್‌, ವೈಟ್‌- ಬ್ಲಾ Âಕ್‌ ಟ್ಯಾಪಿಂಗ್‌ ಹೀಗೆ ಯಾವುದೇ ಟ್ಯಾಪಿಂಗ್‌ ಇರಲಿ ಯಾವುದೂ ಕುಮಾರಸ್ವಾಮಿಯನ್ನು ಏನೂ ಮಾಡಲು ಆಗಲ್ಲ ಎಂದರು.

ಬಿಜೆಪಿ ಪರ ಒಲವು ತೋರಿಲ್ಲ:
ನಾನು ಬಿಜೆಪಿ ಪರ ಒಲವು ತೋರಿಲ್ಲ. ನಾನು ಯಾವ ದೃಷ್ಟಿಕೋನದಲ್ಲಿ ಯಾವ ಹೇಳಿಕೆ ನೀಡಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಪ್ರಸ್ತುತ ಸಾರ್ವತ್ರಿಕ ಚುನಾವಣೆಗೆ ಹೋಗುವ ಹಂಬಲವಿದೆ. ಆದರೆ, ಈಗ ಚುನಾವಣೆಗೆ ಹೋಗುವುದು ಸೂಕ್ತ ಸಂದರ್ಭವಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ನೆರೆಯಿಂದ ದೊಡ್ಡ ಮಟ್ಟದ ಅನಾಹುತವಾಗಿದೆ. ಚುನಾವಣೆಗೆ ಹೋಗುವ ಮುನ್ನ ಬದುಕು ಕಟ್ಟಿ ಕೊಡುವ ಕೆಲಸ ಮಾಡಬೇಕಾಗಿದೆ. ಸರ್ಕಾರ ಅಸ್ಥಿರಗೊಳಿಸಿ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ ಎಂದರು.

ಬಿಜೆಪಿಗೆ ಕಷ್ಟ:
ಬಿಜೆಪಿ ನಡವಳಿಕೆ ನೋಡಿದಾಗ ಉಪಚುನಾವಣೆಯಲ್ಲಿ ಬಿಜೆಪಿಗೆ ಎಲ್ಲ 15 ಕ್ಷೇತ್ರಗಳಲ್ಲಿ ಕಷ್ಟವಿದೆ. ಜನ ಬಿಜೆಪಿ ನಡವಳಿಕೆ ನೋಡಿ ಬೇಸತ್ತಿದ್ದಾರೆ. ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪಧಿ ìಸಲಿದ್ದು ಜೆಡಿಎಸ್‌ ಈ ಹಿಂದೆ ಗೆದ್ದಿದ್ದ ಮೂರು ಕ್ಷೇತ್ರ ಸೇರಿದಂತೆ ಕನಿಷ್ಟ 7-8 ಕಡೆ ಗೆಲವು ಸಾ ಧಿಸಲಿದೆ. ನಮ್ಮ ರಾಜ್ಯದ ಖಜಾನೆ ಖಾಲಿ ಆಗಲ್ಲ. ಖಾಲಿ ಆಗುವ ಪರಿಸ್ಥಿತಿಗೂ ಜನ ತರಲ್ಲ. ಖಜಾನೆ ಸ್ಥಿತಿ ಚೆನ್ನಾಗಿಯೇ ಇದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಷ್ಟೆ. ನನ್ನ ಹೇಳಿಕೆ ಬಗ್ಗೆ ಜಗದೀಶ ಶೆಟ್ಟರ್‌ ಗೊಂದಲ ಮಾಡಿಕೊಳ್ಳುವುದು ಬೇಡ. ಡಿ.5ರ ನಂತರ ಅರ್ಥ ಮಾಡಿಸುತ್ತೇನೆ ಎಂದರು.
ವಿಪ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಇದ್ದರು.

ಚುನಾವಣಾ ಆಯೋಗ ಎಡವಿದೆ
ಕೇಂದ್ರ ಚುನಾವಣಾ ಆಯೋಗ ತನ್ನ ಜವಾಬ್ದಾರಿ ನಿರ್ವಹಣೆ ಮಾಡುವಲ್ಲಿ ಎಡವಿದೆ. ಆಯೋಗವು ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಗೆ ಸಂಬಂ ಧಿಸಿ ತೆಗೆದುಕೊಂಡ ನಿಲುವು ಗಮನಿಸಿದಾಗ ಅದು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಯಾರು ಬೇಕಾದರೂ ಊಹೆ ಮಾಡುತ್ತಾರೆ. ಆಯೋಗದ ಸ್ವಾಯತ್ತ ಹಕ್ಕು ಮೊಟಕುಗೊಳಿಸಲಾಗಿದೆ. ಆಯೋಗದ ಕಾರ್ಯವೈಖರಿಯು ಕಾಣದ ಶಕ್ತಿಗಳ ಸೂಚನೆ ಮೇರೆಗೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.