ಸಿದ್ದರಾಮಯ್ಯ-ಕುಮಾರಸ್ವಾಮಿ ಈಗಲ್‌ಟನ್ ಸಮರ
Team Udayavani, Mar 11, 2022, 7:00 AM IST
ಬೆಂಗಳೂರು: ಈಗಲ್‌ಟನ್ ರೆಸಾರ್ಟ್ ಗೆ 998 ಕೋಟಿ ರೂ. ದಂಡ ವಿಧಿಸಿರುವ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ವೈಯಕ್ತಿಕ ಹಂತಕ್ಕೂ ತಲುಪಿ, ನಾನಾ-ನೀನಾ ಎಂಬ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇವರಿಬ್ಬರ ಜಗಳದ ನಡುವೆ ಬಿಜೆಪಿ ಜಾಣಮೌನಕ್ಕೆ ಜಾರಿತ್ತು!
ಸಿದ್ದರಾಮಯ್ಯ: ಸದನದಲ್ಲಿ ನೀವು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ರಾಜಕೀಯ ಮಾಡಿದರೆ ವಿ ಡೋಂಟ್ ಕೇರ್, ಇದಕ್ಕೆಲ್ಲ ಹೆದರುವುದಿಲ್ಲ.
ಕುಮಾರಸ್ವಾಮಿ: ಬೇರೇನು ಹೇಳಲು ಸಾಧ್ಯ. ಇದೇ ಹೇಳಿಕೊಂಡಿರಿ.
ಸಿದ್ದರಾಮಯ್ಯ: ನೀವೇ ಮುಖ್ಯಮಂತ್ರಿಯಾಗಿದ್ದಿರಿ, ವಿಪಕ್ಷದಲ್ಲೂ ಇದ್ದಿರಿ. ಆಗ ಯಾಕೆ ಇತ್ಯರ್ಥ ಮಾಡಲಿಲ್ಲ.
ಕುಮಾರಸ್ವಾಮಿ: ನನ್ನ ಗಮನಕ್ಕೆ ಬಂದಿದ್ದು ಈಗ. ಹಾಗಾಗಿ ಮಾತನಾಡುತ್ತಿದ್ದೇನೆ. ಯಾವಾಗ ಏನು ಮಾತನಾಡಬೇಕೆಂದು ನಿಮ್ಮಿಂದ ಕಲಿಯಬೇಕಿಲ್ಲ.
ಸಿದ್ದರಾಮಯ್ಯ: ಬಜೆಟ್‌ಗೂ ಈ ವಿಚಾರಕ್ಕೂ ಏನ್ರಿ ಸಂಬಂಧ? ಇದಕ್ಕೆ ನಾವು ಉತ್ತರಿಸಲು ಆಗುತ್ತದಾ?
ಕುಮಾರಸ್ವಾಮಿ: ಸಂಬಂಧ ಇದೆ, ಇದೂ ಬಜೆಟ್ ವಿಚಾರವೇ, ಸರಕಾರ ಉತ್ತರಿಸಲಿ.
ಸಿದ್ದರಾಮಯ್ಯ: ಈಗಲ್‌ಟನ್ ಪರ ನೀವು ಯಾಕೆ ವಕಾಲತ್ತು ವಹಿಸಿಕೊಳ್ಳುತ್ತಿದ್ದೀರಿ?
ಕುಮಾರಸ್ವಾಮಿ: ನಾನು ಮಾನವೀಯತೆ ಪರ.
ಸಿದ್ದರಾಮಯ್ಯ: ಮುಖ್ಯಮಂತ್ರಿಯವರೇ ತನಿಖೆಗೆ ವಹಿಸಿ, ಯಾರು ಯಾರ ಪರ, ಯಾರಿಗೆಷ್ಟು ಪರ್ಸೆಂಟೇಜ್ ಎಲ್ಲವೂ ಬಯಲಾಗಲಿ.
ಕುಮಾರಸ್ವಾಮಿ: ಅದನ್ನೇ ನಾನು ಆಗ್ರಹಿಸುತ್ತಿದ್ದೇನೆ.
ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಈ ಹಂತದಲ್ಲಿ ತನಿಖೆಗೆ ವಹಿಸಲು ಸಾಧ್ಯವೋ ಇಲ್ಲವೋ ಪರಿಶೀಲಿಸಬೇಕಾಗಿದೆ. ನನ್ನ ಬಳಿ ದಾಖಲೆಗಳೂ ಇಲ್ಲ. ಎಲ್ಲವನ್ನೂ ತರಿಸಿಕೊಂಡು ಕಾನೂನು ಸಚಿವರ ಜತೆ ಚರ್ಚಿಸಿ ಏನು ಮಾಡಬಹುದು ಎಂಬ ಬಗ್ಗೆ ಆಲೋಚಿಸಿ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.