ಒಂದೇ ರ್‍ಯಾಂಕಿಂಗ್‌ನಿಂದ ಪಾರುಲ್‌ಗೆ ಒಲಿಂಪಿಕ್ಸ್ ಮಿಸ್!
Team Udayavani, Jul 5, 2021, 7:00 AM IST
ಹೊಸದಿಲ್ಲಿ: ಭಾರತದ 5,000 ಮೀ. ದೂರದ ಓಟಗಾರ್ತಿ ಪಾರುಲ್ ಚೌಧರಿ ಅವರಿಗೆ ಒಂದೇ ಒಂದು ವಿಶ್ವ ರ್‍ಯಾಂಕಿಂಗ್ ಸ್ಥಾನದ ಕೊರತೆಯಿಂದಾಗಿ ಟೋಕಿಯೊ ಟಿಕೆಟ್ ಮಿಸ್ ಆಗಿದೆ.
ಜೂ. 29ಕ್ಕೆ ಅನ್ವಯವಾಗುವಂತೆ, ಅಗ್ರ 42 ರ್‍ಯಾಂಕಿಂಗ್‌ನ ಓಟಗಾರರಿಗೆ ಟೋಕಿಯೊ ಒಲಿಂಪಿಕ್ಸ್ 5,000 ಮೀ. ಓಟದ ಅರ್ಹತೆ ಲಭಿಸಿದೆ. ದುರದೃಷ್ಟವೆಂದರೆ, ಪಾರುಲ್ ಚೌಧರಿ ರ್‍ಯಾಂಕಿಂಗ್ 43. ಇದರಿಂದ ತನಗೆ ಮೊದಲ ಸಲ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿತು, ಇದೊಂದು ಹೃದಯ ಬಿರಿಯುವ ಅನುಭವ ಎನ್ನುತ್ತಾರೆ 26 ವರ್ಷದ ಪಾರುಲ್.
ಇದಕ್ಕೆ ಮುಖ್ಯ ಕಾರಣ, ಅವರನ್ನು ಕಾಡಿದ ಕೊರೊನಾ ಸೋಂಕು. ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಕೊರೊನಾ ಪಾಸಿಟಿವ್ ದೃಢಪಟ್ಟವರಲ್ಲಿ ಪಾರುಲ್ ಚೌಧರಿ ಕೂಡ ಒಬ್ಬರು. ಕ್ವಾರಂಟೈನ್ ಮುಗಿದ ಬಳಿಕವೂ ಕೆಲವು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದ ಕಾರಣ ಅವರಿಗೆ ಅಭ್ಯಾಸ ಸಾಧ್ಯವಾಗಲಿಲ್ಲ.
ಪಟಿಯಾಲಾದಲ್ಲಿ ಕಳೆದ ತಿಂಗಳು ನಡೆದ ನ್ಯಾಶನಲ್ ಇಂಟರ್ ಸ್ಟೇಟ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರೂ ಇದರಿಂದ ರ್‍ಯಾಂಕಿಂಗ್ ಅಂಕದಲ್ಲಿ ಪ್ರಗತಿ ಕಂಡುಬರಲಿಲ್ಲ. ಪಾರುಲ್ ಚೌಧರಿ ಅವರನ್ನು ದುರದೃಷ್ಟ ಬೆಂಬಿಡಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.