Health Tips: ಮಳೆಗಾಲದ ಕೆಮ್ಮು, ಶೀತಕ್ಕೆ ಇದು ತುಂಬಾ ಉತ್ತಮ ಔಷಧ
ಹಿಂದೆ ಇಂತಹ ಸಾಮಾನ್ಯ ಕಾಯಿಲೆಗಳಿಗೆ ಯಾರೂ ಕೂಡ ವೈದ್ಯರ ಬಳಿ ಓಡುತ್ತಿರಲಿಲ್ಲ.
Team Udayavani, Jul 3, 2023, 2:43 PM IST
ಮಳೆಗಾಲ ಬಂದಾಗ ಮನಸ್ಸುಗಳು ಚೈತನ್ಯದಿಂದ ನಲಿಯುತ್ತವೆ. ಮಳೆಗಾಲ ಬಂದರೆ ಆರೋಗ್ಯ ಸಮಸ್ಯೆಗಳೂ ಅದರೊಂದಿಗೆ ಆಗಮನಿಸುತ್ತವೆ. ಸ್ವಲ್ಪ ಹೊತ್ತು ಮಳೆಯಲ್ಲಿದ್ದರೆ ಸಾಕು ಥಂಡಿ ಆವರಿಸಿ ಶೀತವಾಗಿ ಬಿಡುತ್ತದೆ. ಶೀತವನ್ನು ಕೆಮ್ಮು, ಜ್ವರ ಹಿಂಬಾಲಿಸುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗಳು ಜನರ ಜೀವಹಿಂಡಿ ಬಿಡುತ್ತವೆ. ಇದರೊಂದಿಗೆ ವೈರಲ್ ಹಾಗೂ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಬಹುಬೇಗನೇ ಕಡಿಮೆಗೊಂಡು ಶೀತ, ಜ್ವರದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಮಳೆಗಾಲ ಬಂದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದರೆ ಶೀತದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಬಹುದು. ಅದರಲ್ಲೂ ನೈಸರ್ಗಿಕ ದೊರಕುವ ಮನೆ ಮದ್ದುಗಳನ್ನು ಸಿದ್ದಪಡಿಸಿಕೊಂಡ ಸೇವಿಸಿದ್ದೇ ಆದಲ್ಲಿ ಈ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಇಂದಿನ ಮನೆಗಳಲ್ಲಿ ಹಿರಿಯರಿಲ್ಲದ ಕಾರಣ ಶೀತದಂತಹ ಸಮಸ್ಯೆಗಳಿಗೆ ಯಾವ ಮನೆ ಮದ್ದುಗಳು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಕಷ್ಟವಾಗಬಹುದು.
ಹಿಂದೆ ಇಂತಹ ಸಾಮಾನ್ಯ ಕಾಯಿಲೆಗಳಿಗೆ ಯಾರೂ ಕೂಡ ವೈದ್ಯರ ಬಳಿ ಓಡುತ್ತಿರಲಿಲ್ಲ. ಬದಲಾಗಿ ಮನೆಯ ಅಡುಗೆ ಮನೆಯಲ್ಲೇ ಇರುವ, ಔಷಧೀಯ ಗುಣಗಳನ್ನು ಹೊಂದಿರುವ ವಸ್ತುಗಳನ್ನೇ ಉಪಯೋಗಿಸುತ್ತಿದ್ದರು. ಆದರೆ ಇಂದು ಎಲ್ಲದ್ದಕ್ಕೂ ವೈದ್ಯರ ಸಲಹೆಗಳೇ ಬೇಕು. ಈ ಔಷಧಗಳು ಕಾಯಿಲೆಗಳನ್ನು ಗುಣಪಡಿಸಬಹುದು. ಆದರೆ ಇನ್ನೊಂದು ರೀತಿಯಲ್ಲಿ ದೇಹಕ್ಕೆ ಮಾರಕವಾಗಬಹುದು. ಶೀತ, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗೆ ಮನೆಯಲ್ಲಿ ರಾಮಬಾಣವಿದೆ. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ದಾರಿ.
ಈರುಳ್ಳಿ ನೀರು!
ಪ್ರತಿಯೊಂದು ಆಹಾರಕ್ಕೂ ನಾವು ಈರುಳ್ಳಿಯನ್ನು ಸಾಮಾನ್ಯವಾಗಿ ಬಳಸುತ್ತವೆ. ನೀರಿನಲ್ಲಿ ಮೊದಲೇ ನೆನೆಸಿದ ಈರುಳ್ಳಿಯಿಂದ ತಯಾರಿಸಿದ ಮಿಶ್ರಣವು ನಿಮ್ಮ ದೇಹವನ್ನು ರೀಜಾರ್ಜ್ ಮಾಡಲು ಹಾಗೂ ಮಳೆಗಾಲದಲ್ಲಿ ವೈರಲ್ ಕಾಯಿಲೆಗಳಿಂದ ಸುರಕ್ಷಿತವಾಗಿರಿಸಲು ಅದ್ಭುತವಾದ ಮಾರ್ಗ. ಶೀತ, ಕೆಮ್ಮು ಅಥವಾ ಇಂತಹ ಪ್ರಮುಖ ಸೋಂಕುಗಳನ್ನು ನಿವಾರಿಸಲು ಇದು ಉತ್ತಮ
ತಯಾರಿ ಹೇಗೆ?
ಒಂದು ಈರುಳ್ಳಿಯನ್ನು ತೆಗೆದುಕೊಂಡು ಸಣ್ಣಕ್ಕೆ ತುಂಡರಿಸಿಕೊಳ್ಳಿ. ಅನಂತರ ಅದನ್ನು ಒಂದು ಪಾತ್ರಕ್ಕೆ ನೀರು ಹಾಕಿ ತುಂಡರಿಸಿದ ಈರುಳ್ಳಿನ್ನು ಅದಕ್ಕೆ ಹಾಕಿ 6-8 ಗಂಟೆಗಳ ಕಾಲ ನೆನೆಯಲು ಬಿಡಿ. ಅಷ್ಟು ಸಮಯ ನೆನೆದ ಬಳಿಕ ದಿನಕ್ಕೆನ ಎರಡು ಬಾರಿ 2-3 ಚಮಚ ಈ ನೀರನ್ನು ಕುಡಿಯಿರಿ. ಈ ಪಾನೀಯವನ್ನು ಮಕ್ಕಳಿಗೂ ನೀಡಬಹುದು.ಆದರೆ ಡೋಸೇಜ್ ಕಡಿಮೆ ಮಾಡಬೇಕು. ರುಚಿಗಾಗಿ ಜೇನು ತುಪ್ಪ ಸೇರಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.