ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ, ತಿಮ್ಮನಾಯಕನಹಳ್ಳಿಯಲ್ಲಿ ಭಾರಿ ಮಳೆ :ಜನಜೀವನ ಅಸ್ತವ್ಯಸ್ತ
Team Udayavani, May 13, 2021, 8:22 PM IST
ಶಿಡ್ಲಘಟ್ಟ : ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯಲ್ಲಿ ಮತ್ತೊಮ್ಮೆ ಮಳೆಯ ಆರ್ಭಟ ಹೆಚ್ಚಾಗಿದ್ದು ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಸಂಜೆ ಬಿದ್ದ ಭಾರಿ ಮಳೆಯಿಂದಾಗಿ ಸಣ್ಣಪುಟ್ಟ ಕಾಲುವೆಗಳು ಮತ್ತು ಚೆಕ್‍ಡ್ಯಾಂ ಜಲಾವೃತರಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊರೋನಾ ಸೋಂಕಿನ ಪ್ರಭಾವದಿಂದ ಈಗಾಗಲೇ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಗ್ರಾಮಸ್ಥರು ಸಂಜೆ ಸುರಿದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಮಳೆಯ ಆರ್ಭಟಕ್ಕೆ ಕೆಲವೊಂದು ಕಾಲುವೆಗಳು ತುಂಬಿ ಹರಿಯುತ್ತಿದ್ದು ಸುಮಾರು ತಿಂಗಳ ನಂತರ ಹರಿಯುತ್ತಿರುವ ನೀರನ್ನು ಕಂಡು ಗ್ರಾಮಸ್ಥರು ಕಣ್ತುಂಬಿಸಿಕೊಂಡಿದ್ದಾರೆ ಜೊತೆಗೆ ಮಳೆಯಿಂದ ಬೆಳೆಗಳು ಸಹ ನಾಶವಾಗಿದೆಯೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ಮಳೆಯ ಆರ್ಭಟಕ್ಕೆ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಕಲಹಳ್ಳಿ ಗ್ರಾಮದಲ್ಲಿ ರಾಮಕ್ಕ ಎಂಬವರ ಕುಟುಂಬ ಬೀದಿಗೆ ಬಿದ್ದಿದೆ ಮಳೆ ಹಾಗೂ ಗಾಳಿಯ ಆರ್ಭಟಕ್ಕೆ ಮನೆಯ ಮೇಲ್ಚಾವಣಿ ಕುಸಿದು ಮನೆಯಲ್ಲಿದ್ದ ಆಹಾರ ಸಾಮಾಗ್ರಿಗಳು ಮತ್ತು ಬೆಲೆಬಾಳುವ ವಸ್ತುಗಳು ನೀರುಪಾಲಾಗಿದೆ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರನ್ನು ಸಮೀಪದ ಗ್ರಾಮ ಪಂಚಾಯಿತಿಯ ಉಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ :ಕೋವಿಡ್ ಸೋಂಕಿನಿಂದ ಹೆತ್ತವರನ್ನು ಕಳದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ : ಮಧ್ಯಪ್ರದೇಶ ಸಿಎಂ
ಮಳೆ ಮತ್ತು ಗಾಳಿಯ ಪ್ರಭಾವದಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿರುವ ರಾಮಕ್ಕ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡಲು ತಾಲೂಕು ಆಡಳಿತ ಗಮನಹರಿಸಬೇಕೆಂದು ನಿರಾಶ್ರಿತರು ಮನವಿ ಮಾಡಿದ್ದಾರೆ.
ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯಲ್ಲಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿದೆ ಎಂಬ ದೂರುಗಳು ಕೇಳಿ ಬಂದಿದೆ ತಿಮ್ಮನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಚೆಕ್‍ಡ್ಯಾಂಗಳು ತುಂಬಿ ಹರಿದಿದೆ ಮಳೆಯಿಂದ ಆಗಿರುವ ಹಾನಿಯಾಗಿರುವ ಕುರಿತು ಸರ್ವೇ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ.
– ಬಿ.ಎಸ್.ರಾಜೀವ್ ತಹಶೀಲ್ದಾರ್ ಶಿಡ್ಲಘಟ್ಟ ತಾಲೂಕು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೆ ಮಳೆಯಾಗಿದೆ ಕಾಲುವೆ ಮತ್ತು ಚೆಕ್‍ಡ್ಯಾಂ ತುಂಬಿ ಹರಿಯುತ್ತಿದೆ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ತಾಲೂಕು ಆಡಳಿತ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
– ಕೃಷ್ಣಪ್ಪ ಅಧ್ಯಕ್ಷ ತಿಮ್ಮನಾಯಕನಹಳ್ಳಿ ಗ್ರಾಪಂ ಶಿಡ್ಲಘಟ್ಟ ತಾಲೂಕು.
ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಸುತ್ತಮುತ್ತ ಸಂಜೆ ಮಳೆಯಾಗಿದೆ ಕೆಲವೊಂದು ಪ್ರದೇಶಗಳಲ್ಲಿ ಮನೆ ಛಾವಣಿಗಳು ಹಾನಿಯಾಗಿರುವ ದೂರು ಕೇಳಿ ಬರುತ್ತಿದೆ ಬೆಳಿಗ್ಗೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ.
– ನಾಗರಾಜ್ ಪಿಡಿಓ ತಿಮ್ಮನಾಯಕನಹಳ್ಳಿ ಗ್ರಾಪಂ ಶಿಡ್ಲಘಟ್ಟ ತಾಲೂಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.