Heavy Rain: ಕರಾವಳಿಯಾದ್ಯಂತ ಉತ್ತಮ ಮಳೆ
Team Udayavani, Jul 24, 2024, 12:51 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಯ ಬಿರುಸು ತುಸು ಕಡಿಮೆಯಾಗಿದ್ದು, ಉಭಯ ಜಿಲ್ಲೆಯಾದ್ಯಂತ ಮಂಗಳವಾರ ಸಾಧಾರಣ ಮಳೆಯಾಗಿದೆ.
ಮಂಗಳೂರು ಸೇರಿದಂತೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಎಣ್ಮೂರು, ಕಲ್ಮಡ್ಕದಲ್ಲಿ ಬೆಳಗ್ಗೆ ಬಿರುಸಿ ನಿಂದ ಕೂಡಿದ ಗಾಳಿ-ಮಳೆಯಾಗಿದ್ದು, ಬಳಿಕ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಉಡುಪಿ ಸಹಿತ ಕುಂದಾಪುರ, ಕಾರ್ಕಳ ದಲ್ಲಿಯೂ ಬೆಳಗ್ಗೆ, ಸಂಜೆ ಗಾಳಿ ಮಳೆಯಾಗಿದೆ. ಕಾಸರ ಗೋಡು, ಅಡ್ಯನಡ್ಕದಲ್ಲಿ ಸುಂಟರಗಾಳಿ ಬೀಸಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಕೆಲ ದಿನ ಮಳೆಯ ಬಿರುಸು ತುಸು ಕಡಿಮೆ ಇರಲಿದೆ. ಜು.24ರ ಬೆಳಗ್ಗೆವರೆಗೆ ಆರೆಂಜ್ ಅಲರ್ಟ್ ಇದೆ.
ಕಾವೂರು: ಮೇಲ್ಛಾವಣಿ ಬಿದ್ದು ಹಾನಿ
ರಾತ್ರಿ 9.30ರ ಸುಮಾರಿಗೆ ಬೀಸಿದ ಭಾರಿ ಸುಂಟರಗಾಳಿಗೆ ಕಾವೂರು ಜಂಕ್ಷನ್‌ನಲ್ಲಿರುವ ಕಟ್ಟಡ ಒಂದರ ತಗಡು-ಶೀಟು ಹಾಕಲಾದ ಮೇಲ್ಛಾವಣಿ ಗಾಳಿಗೆ ಹಾರಿ ಬಿದ್ದಿದ್ದು ಕಾರು, ಆಟೋರಿಕ್ಷಾ ಬೈಕ್ ಸೇರಿದಂತೆ ಹಲವು ವಾಹನಗಳು ಹಾನಿ ಗೊಂಡವು.
ಬಂಟ್ವಾಳ: ಸಂಚಾರಕ್ಕೆ ತೊಂದರೆ
ಬಂಟ್ವಾಳ: ಬಿ.ಸಿ.ರೋಡಿನ ಸರ್ಕಲ್ ಬಳಿ ಮಂಗಳವಾರ ರಾತ್ರಿ ಹೆದ್ದಾರಿಗೆ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದು, ಕೆಲಹೊತ್ತು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ವೇಳೆ ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಯಿತು.
ಕಡಂದಲೆ: ದೈವಸ್ಥಾನ, ಮನೆ ಮೇಲೆ ಮರ ಬಿದ್ದು ಹಾನಿ
ಮೂಡುಬಿದಿರೆ, ಜು. 23: ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಡಂದಲೆ ಗ್ರಾಮ ವ್ಯಾಪ್ತಿಯ ಜೋಡಿಕಟ್ಟೆ ಬಡಗಬೆಟ್ಟುನಲ್ಲಿರುವ ಕೆ. ಬಿ. ಕೃಷ್ಣ ಮೂರ್ತಿ ಭಟ್ ಅವರ ಮನೆಯ ದೈವಸ್ಥಾನದ ಮೇಲೆ ಮರ ಬಿದ್ದು ಹಾನಿ ಆಗಿದೆ. ಎರಡು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿವೆ.
ಜೋಡಿಕಟ್ಟೆ ಮುದಲಗಡಿ ಜೋನ್ ಫೆರ್ನಾಂಡಿಸ್ ಅವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಆಗಿದೆ.
ಘಟನೆ ನಡೆದ ಸ್ಥಳಕ್ಕೆ ಪಿಡಿಒ ರಕ್ಷಿತಾ ಡಿ., ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಸಿಬಂದಿ ರಿತೇಶ್, ಗ್ರಾಮ ಪಂ. ಸದಸ್ಯ ಜಗದೀಶ್ ಕೋಟ್ಯಾನ್, ಮಾಜಿ ಗ್ರಾ. ಪಂ. ಅಧ್ಯಕ್ಷ ಜಗದೀಶ್ ಕಲ್ಲೋಟ್ಟು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.