ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು
ಕೊಚ್ಚಿಕೊಂಡು ಹೋಗಿವೆ ಎಮ್ಮೆಗಳು, ಕೊಲ್ಲಾಪುರದಲ್ಲಿ ಅಪಾಯಕಾರಿ ಸ್ಥಿತಿ
Team Udayavani, Jun 18, 2021, 10:36 PM IST
ಮುಂಬೈ: ದೇಶದಲ್ಲೆಲ್ಲ ಮುಂಗಾರುಮಳೆ ಆರಂಭವಾಗಿದ್ದು, ಅದರ ತೀವ್ರ ಪರಿಣಾಮ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಗುರುವಾರ, ಶುಕ್ರವಾರ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಕೊಲ್ಲಾಪುರದ ಪಂಚಗಂಗಾ ನದಿ ತುಂಬಿ ಹರಿಯುತ್ತಿದೆ. ಅಲ್ಲಿನ ರಾಜಾರಾಮ್ ಅಣೆಕಟ್ಟು ನೀರಿನಪ್ರಮಾಣ ತೀವ್ರವಾಗಿದ್ದು, ಅಪಾಯದ ಮಟ್ಟಕ್ಕೆ ಸನಿಹವಾಗಿದೆ. ಥಾಣೆಯಲ್ಲಿ ಮನೆಯೊಂದು ಕುಸಿದಿದೆ, ಮುಲುಂದ್‌ನಲ್ಲಿ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಅದರ ಪರಿಣಾಮ, ಉತ್ತರಕರ್ನಾಟಕದ ಕೆಲವು ನದಿಗಳಲ್ಲಿ ಪ್ರವಾಹ ಭೀತಿ ಆವರಿಸಿದೆ.
ಎಲ್ಲೆಲ್ಲಿ ಏನಾಗಿದೆ?
ಕೊಲ್ಲಾಪುರ: ಕರ್ನಾಟಕದ ಗಡಿಭಾಗಕ್ಕೆ ಸಮೀಪದಲ್ಲಿರುವ ಕೊಲ್ಲಾಪುರದಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ, ಪಂಚಗಂಗಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದೆ. ಗುರುವಾರ ಸಂಜೆಗೇ ರಾಜಾರಾಮ್ ಅಣೆಕಟ್ಟೆಯ ನೀರಿನಮಟ್ಟ 31.1 ಅಡಿಗೆ ಮುಟ್ಟಿದೆ. ಅಪಾಯದಮಟ್ಟ 39 ಅಡಿ. ಮಳೆ ಹೀಗೆಯೇ ಮುಂದುವರಿದರೆ ಅಲ್ಲಿ ವಿಪ್ಲವ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ಕಳೆದ 24 ಗಂಟೆಗಳಲ್ಲಿ ಈ ಜಿಲ್ಲೆಯಲ್ಲಿ 104.3 ಎಂಎಂ ಮಳೆಯಾಗಿದೆ. ಗಂಗನ್‌ಬಾವಾx ತಾಲೂಕಿನಲ್ಲಿ ಗರಿಷ್ಠ 182.7 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯ 58 ಅಣೆಕಟ್ಟುಗಳು ಮುಳುಗಿವೆ.
ಇದನ್ನೂ ಓದಿ :ಗೂಗಲ್ ಪಿಕ್ಸೆಲ್ಸ್ ಇಯರ್ ಬಡ್ಸ್ – ರಿಯಲ್ ಟೈಮ್ ಟ್ರಾನ್ ಸ್ಲೇಶನ್
ಪುಣೆಯಲ್ಲೂ ರಾದ್ಧಾಂತ
ಪುಣೆ ನಗರದ ಖಡಕ್‌ಮಲ್ ಅಲಿ ಪ್ರದೇಶದಲ್ಲಿನ ಹಳೆಯಕಾಲದ (ವಾಡೆ) ಭಾರೀ ಮನೆಯೊಂದರ ಗೋಡೆಗಳು ಗುರುವಾರ ಸಂಜೆ ಕುಸಿದಿವೆ. ಪರಿಣಾಮ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸಾವು ಸಂಭವಿಸಿಲ್ಲ.
ಥಾಣೆ: ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ ಕಟ್ಟಡವೊಂದು ಉರುಳಿಬಿದ್ದಿದೆ. ಇದುವರೆಗಿನ ಮಾಹಿತಿ ಪ್ರಕಾರ ಸಾವುನೋವುಗಳು ವರದಿಯಾಗಿಲ್ಲ. ಇನ್ನು ಮುಲುಂದ್ ಪ್ರದೇಶದಲ್ಲಿ ಗೋಡೆಯೊಂದು ಕುಸಿದು 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪಾಲ^ರ್: ಪಾಲ^ರ್‌ನ ವಿರಾರ್‌ನಲ್ಲಿ ಭಾರೀ ಮಳೆಯಿಂದಾಗಿ ಮೇಯುತ್ತಿದ್ದ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಅಗ್ನಿಶಾಮಕದಳ ಎರಡನ್ನು ಬಚಾವ್ ಮಾಡಿದೆ.
ಅರಬ್ಬಿ ಸಮುದ್ರದ ಚಂಡಮಾರುತವೇ ಕಾರಣ!
ಮುಂಬೈನಲ್ಲಂತೂ ಮಳೆ ಸತತವಾಗಿ ಸುರಿಯುತ್ತಿದೆ. ವಾರಾಂತ್ಯದವರೆಗೂ ಹೀಗೆಯೇ ಮಳೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಬೀಸತೊಡಗಿವೆ. ಅದರ ಪರಿಣಾಮ ದಕ್ಷಿಣ ಕರ್ನಾಟಕದ ಸಮುದ್ರತೀರದಿಂದ ಮಳೆಮಾರುತಗಳು ಉತ್ತರ ಕೇರಳದ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕೊಂಕಣ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಮುಂದಿನೆರಡು ದಿನ ಭಾರೀ ಮಳೆಯಾಗಲಿದೆ. ಈ ರಾಜ್ಯದ ಥಾಣೆ, ಪಾಲ್ಘಾರ್, ರಾಯಗಡಗಳು ಭಾರೀ ಮಳೆಯ ಭೀತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.