ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು
Team Udayavani, Aug 3, 2021, 10:30 PM IST
ನವ ದೆಹಲಿ: ಉತ್ತರದಲ್ಲಿ ವರುಣ ಅಬ್ಬರಿಸುತ್ತಿದ್ದು, ಪ.ಬಂಗಾಳ ಹಾಗೂ ರಾಜಸ್ಥಾನಗಳಲ್ಲಿ 17 ಮಂದಿ ಮಳೆ ಸಂಬಂಧಿ ಘಟನೆಗಳಿಂದ ಸಾವಿಗೀಡಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಗೋಡೆ ಕುಸಿತ ಮತ್ತು ವಿದ್ಯುತ್ ಆಘಾತ ಪ್ರಕರಣಗಳಿಂದ 14 ಮಂದಿ ಅಸುನೀಗಿದ್ದಾರೆ. ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಷನ್ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದ್ದು, ಪರಿಣಾಮ 6 ಜಿಲ್ಲೆಗಳ ಎರಡೂವರೆ ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ. ಇವರಿಗೆ ರಾಜ್ಯ ಸರ್ಕಾರವು ಆಶ್ರಯ ಒದಗಿಸಿದ್ದು, ಪರಿಹಾರ ಕಾರ್ಯಾಚರಣೆಯೂ ಚುರುಕುಗೊಂಡಿದೆ. ಹಲವು ಜಿಲ್ಲೆಗಳು ಜಲಾವೃತಗೊಂಡು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
3 ಮಕ್ಕಳು ಸಾವು:
ರಾಜಸ್ಥಾನದ ಸವಾಯಿ ಮಾಧೋಪುರ್ ಮತ್ತು ಟೋಂಕ್ ನಲ್ಲಿ ಧಾರಾಕಾರ ಮಳೆಯಿಂದಾಗಿ ಕಾರೊಂದು ಕೊಚ್ಚಿಹೋದ ಪರಿಣಾಮ, ಅದರಲ್ಲಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ. ಟೋಂಕ್ ನಲ್ಲಿ ಮಹಿಳೆಯೊಬ್ಬರ ಮೃತದೇಹವನ್ನು ಒಯ್ಯುತ್ತಿದ್ದ ಆ್ಯಂಬುಲೆನ್ಸ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಮಹಿಳೆಯ 12 ವರ್ಷದ ಮಗ ಸಾವಿಗೀಡಾಗಿದ್ದಾನೆ. ಮಹಿಳೆಯ ಪತಿಯೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ :ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು
ಮಧ್ಯಪ್ರದೇಶದಲ್ಲಿ ಮಳೆ-ಪ್ರವಾಹದಿಂದಾಗಿ 1,171 ಗ್ರಾಮಗಳು ಸಂಕಷ್ಟಕ್ಕೀಡಾಗಿವೆ. ಪ್ರವಾಹದಿಂದ ರಕ್ಷಿಸಿಕೊಳ್ಳಲು 24 ಗಂಟೆಗಳ ಕಾಲ ಮರದ ಮೇಲೆ ಕುಳಿತಿದ್ದ ಮೂವರನ್ನು ಮತ್ತು ಇತರೆ ಐವರನ್ನು ಮಂಗಳವಾರ ಸೇನೆ ರಕ್ಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.