Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ

ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಮಳೆ

Team Udayavani, Nov 1, 2024, 2:16 AM IST

Coastal-Rain

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಹಗಲು ವೇಳೆ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಲೇ ಗ್ರಾಮೀಣ ಭಾಗದಲ್ಲಿ ದಟ್ಟ ಮೋಡ ಕವಿದು ಮಳೆಯಾಗಿದೆ.ಬೆಳ್ತಂಗಡಿಯಲ್ಲಿ ಸಂಜೆ ಬಳಿಕ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲೂ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಪುತ್ತೂರಿನಲ್ಲೂ ರಾತ್ರಿ ವೇಳೆ ಮಳೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಹಲವೆಡೆ ಸಂಜೆ 5 ಗಂಟೆ ಬಳಿಕ ಗುಡುಗು, ಮಿಂಚು ಸಹಿತ ಅರ್ಧ ತಾಸು ಭಾರೀ ಮಳೆಯಾಗಿದೆ. ರಸ್ತೆಯಲ್ಲಿ ಬಹಳಷ್ಟು ನೀರು ಹರಿದು ಬಂದಿದ್ದು, ಕೆಸರುಮಯವಾಗಿತ್ತು. ಕೆಲವೆಡೆ ರಾತ್ರಿ ಮಳೆಯಾಗಿದೆ. ಕರಾವಳಿಗೆ ಶುಕ್ರವಾರ ಮತ್ತು ಶನಿವಾರವೂ ಎಲ್ಲೋ ಅಲರ್ಟ್‌ ನೀಡಲಾಗಿದೆ. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.8 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉಡುಪಿಯಲ್ಲಿ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ನಗರದಲ್ಲಿ ಸುರಿದ ಮಳೆಯಿಂದ ಸಂಜೆ ವೇಳೆ ಮನೆಯಿಂದ ಹೊರಗಡೆ ಹೊದವರು, ಹಬ್ಬದ ಖರೀದಿಗೆ ಬಂದವರಿಗೆ ಕೊಂಚ ಸಮಸ್ಯೆಯಾಗಿದೆ. ಮಳೆಗೆ ಪಟಾಕಿ ಮಳಿಗೆಯವರು, ಹೂವಿನ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಇತರ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿತ್ತು.

ಹೊರ ಜಿಲ್ಲೆಯಿಂದ ಬಂದು ಹಬ್ಬದ ನಿಮಿತ್ತ ಹೂವಿನ ವ್ಯಾಪಾರ ಮಾಡುತ್ತಿದ್ದವರಿಗೂ ಮಳೆ ತೊಂದರೆ ನೀಡಿದೆ. ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕಾಪು ಸಹಿತ ಹಲವೆಡೆಗಳಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ. ಮಳೆ ಜತೆಗೆ ಗುಡುಗು, ಮಿಂಚು ಕಂಡುಬಂದಿದೆ. ಹೆಬ್ರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ದೀಪಾವಳಿಯ ಖುಷಿಯಲ್ಲಿದ್ದ ಜನರು ಗದ್ದೆಗಳಿಗೆ ದೀಪ ಇಡಲೂ ಪರದಾಡುವಂತಾಯಿತು.

ಕಕ್ಕಿಂಜೆ: ಮಳೆಗೆ ಹಾನಿ
ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಕ‌ಕ್ಕಿಂಜೆಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಕಕ್ಕಿಂಜೆ ಗಾಂಧೀನಗರ ನಿವಾಸಿ ಸಾರಮ್ಮ ಅವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಸಂಭವನೀಯ ಅಪಾಯ ತಪ್ಪಿದೆ.

ಟಾಪ್ ನ್ಯೂಸ್

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Pro-KABADDI

Pro Kabaddi: ದಬಾಂಗ್‌ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್‌

Rohith

India Vs Newzeland Test: ವಾಂಖೇಡೆ: ರೋಹಿತ್‌ ಶರ್ಮಾ ಪಡೆಗೆ ಅಗ್ನಿಪರೀಕ್ಷೆ

KrishnaMata–baleendra

Deepavali: ಕರಾವಳಿಯಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ

Myyar-Kambala

Kambala: ಹಲವು ವರ್ಷಗಳ ಬಳಿಕ ಪುನರಾರಂಭ; ಮಿಯ್ಯಾರಿನಲ್ಲಿ ಕಂಬಳ ಕೋಣಗಳಿಗೆ ತರಬೇತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Puttur: ಅಮ್ಚಿನಡ್ಕದಲ್ಲಿ ಮತ್ತೆ ಕಾಡಾನೆ ಹಾವಳಿ

accident2

Belthangady: ಟ್ಯಾಂಕರ್‌ ಪಲ್ಟಿ; ಪ್ರಾಣಾಪಾಯದಿಂದ ಪಾರು

1(1)

Puttur: ಎಲ್ಲೆಡೆ ಬೆಳಕಿನ ಹಬ್ಬದ ಝಗಮಗ

POLICE-5

Vitla ಪೊಲೀಸರಿಂದ ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ

SDM-Ayu-Udupi

A Grade: ದೇಶದ ಶ್ರೇಷ್ಠ 10 ಆಯುರ್ವೇದ ಕಾಲೇಜು ಪಟ್ಟಿಯಲ್ಲಿ ಧರ್ಮಸ್ಥಳದ 3 ಸಂಸ್ಥೆ

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Pro-KABADDI

Pro Kabaddi: ದಬಾಂಗ್‌ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್‌

Rohith

India Vs Newzeland Test: ವಾಂಖೇಡೆ: ರೋಹಿತ್‌ ಶರ್ಮಾ ಪಡೆಗೆ ಅಗ್ನಿಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.