ಭೀಕರ ಗಾಳಿ ಮಳೆ ತೆಕ್ಕಟ್ಟೆ – ಉಳ್ತೂರು ಪರಿಸರದಲ್ಲಿ ಬಾರಿ ಹಾನಿ
Team Udayavani, Jun 12, 2020, 2:53 PM IST
ತೆಕ್ಕಟ್ಟೆ ; ಭೀಕರ ಗಾಳಿ ಮಳೆಗೆ ಉಳ್ತೂರು ಪರಿಸರದ ಹಲವಾರು ಮನೆಗಳಿಗೆ , ಶಾಲೆಗಳಿಗೆ ಹಾನಿ ಸಂಭವಿಸಿದ ಘಟನೆ ಶುಕ್ರವಾರ ಸಂಭವಿಸಿದೆ.
ಭೀಕರ ಗಾಳಿಯ ತೀವ್ರತೆಗೆ ಉಳ್ತೂರಿನ ಪಡುಮನೆ ಸೀತಾ ದೇವಾಡಿಗ ಎಂಬವರ ಮನೆ ಸಂಪೂರ್ಣ ಹಾನಿಯಾಗಿದ್ದು ವಿದ್ಯುತ್ ಉಪಕರಣ, ಮೇಲ್ಛಾವಣಿ ಶೀಟ್ ಗಳು ಹಾರಿ ಹೋಗಿದ್ದು, ಮನೆಯ ಗೋಡೆಗಳಿಗೆ ಸಂಪೂರ್ಣ ಹಾನಿಯಾಗಿದೆ, ಗಾಳಿಯ ತೀವ್ರತೆಗೆ ಮನೆಯ ಪಕಾಸಿ ಹಾಗೂ ಫ್ಯಾನ್ ಸಹಿತ ನೂರು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ ಎರಡು ವರ್ಷದ ಮಗು ಸಹಿತ ಸೀತಾ ದೇವಾಡಿಗರ ಪುತ್ರಿಯರಾದ ಮಾಲತಿ ಹಾಗೂ ಲಕ್ಷ್ಮಿ ಮನೆಯಲ್ಲಿ ವಾಸವಾಗಿದ್ದರು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ ಇದರಿಂದ ಸೀತಾ ದೇವಾಡಿಗ ಅವರಿಗೆ ಸುಮಾರು ರೂ.3 ಲಕ್ಷ ಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಉಳ್ತೂರಿನ ಮೂಡುಬೆಟ್ಟು ಗಂಗಾಧರ ಆಚಾರ್ಯ ಅವರ ಶ್ರೀದುರ್ಗಾ ಫರ್ನಿಚರ್ ಮೇಲ್ಛಾವಣಿ ಶೀಟ್ ಗಳು ಹಾರಿಹೋಗಿದ್ದು ಅವರಿಗೂ ಸುಮಾರು ರೂ. 50 ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಬೀಸಿದ ಬಾರಿ ಗಾಳಿಗೆ ಉಳ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ದ ಮೇಲ್ಚಾವಣಿ ಹೆಂಚು ಹಾರಿಹೋಗಿದ್ದು ಕಚೇರಿಯ ಕಂಪ್ಯೂಟರ್ ಗೆ ಹಾನಿಯಾಗಿದೆ.
ಜೊತೆಗೆ ಉಳ್ತೂರಿನ ಅಂಗನವಾಡಿ ಕೇಂದ್ರ ಮೇಲೆ ಮರವೊಂದು ಬುಡ ಸಹಿತ ಕಟ್ಟಡದ ಮೇಲೆ ಎರಗಿ ಹಾನಿ ಸಂಭವಿಸಿದೆ. ಅದೇ ಸಂದರ್ಭದಲ್ಲಿ ಪ್ರಮುಖ ರಸ್ತೆ ಮೇಲೆ ಬುಡ ಸಹಿತ ಬಿದ್ದ ಮರವನ್ನು ಕೆದೂರು ಗ್ರಾ.ಪಂ.ಸದಸ್ಯ ಪ್ರಶಾಂತ್ ಶೆಟ್ಟಿ ಉಳ್ತೂರು ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಸಹಕಾರ ದೊಂದಿಗೆ ತೆರವುಗೊಳಿಸಲಾಯಿತು.
ಉಳ್ತೂರಿನ ಮೂಡುಬೆಟ್ಟು ಗಿರಿಜಾ ಶೆಡ್ತಿ ಅವರ ಮನೆ ಹಾಗೂ ಅಂಗಡಿಯ ಮೇಲೆ ಮರ ಬಿದ್ದು ರೂ.೩೦ ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಉಳ್ತೂರಿನ ರಥಬೀದಿಯ ಸಮೀಪದ ಹೋಟೆಲ್ ಹರಿಪ್ರಸಾದ್ ಹಾಗೂ ಫರ್ನಿಚರ್ ಅಂಗಡಿಯ ಮೇಲ್ಚಾವಣಿಯ ಶೀಟ್ ಗಳು ಗಾಳಿಯ ಹೊಡೆತಕ್ಕೆ ಹಾರಿ ಹೋಗಿದೆ.
ಉಳ್ತೂರಿನ ಪ್ರತಾಪ್ ಶೆಟ್ಟಿ ಹೊೈಗೆ ಸಾಲುಮನೆ ಅವರ ಕೃಷಿ ಬಳಕೆಯ ಪಂಪ್ ಶೆಡ್ ನ ಮೇಲ್ಚಾವಣಿ ಹಾರಿ ಹೋಗಿದ್ದು ಉಳ್ತೂರಿನ ತೆಂಕಬೆಟ್ಟಿನಲ್ಲಿರುವ ನಾಗ ಬನಕ್ಕೆ ಹಾಕಲಾದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದೆ.
ಚಿತ್ರ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.