ಅರಿವೇ ಗುರು: ಅಸಿಡಿಟಿ ನಿವಾರಣೆಗಾಗಿ ಇಲ್ಲಿದೆ ಕೆಲವು ಸಲಹೆ
ಅಜೀರ್ಣ, ಹೊಟ್ಟೆಯಲ್ಲಿರುವ ಆಹಾರಾಂಶಗಳ ಹಿಮ್ಮುಖ ಹರಿವು ಬಾಯಿಯ ಮೂಲಕ ಹೊರಬರುವುದು,
Team Udayavani, Sep 16, 2020, 6:52 PM IST
Representative Image
ಆಸಿಡಿಟಿ ಉಪಶಮನಗೊಳಿಸಲು ಆಹಾರಕ್ರಮ ಹೊಟ್ಟೆಯಲ್ಲಿನ ಗ್ರಂಥಿಗಳಲ್ಲಿ ಅಧಿಕ ಆಮ್ಲ ಉತ್ಪತ್ತಿಯಾಗುವಾಗ ಅಸಿಡಿಟಿ ಉಂಟಾಗುತ್ತದೆ. ಜಠರಾಮ್ಲದ ಸ್ರಾವವು ಮಾಮೂಲಿಗಿಂತಲೂ ಹೆಚ್ಚಾಗಿದ್ದಾಗ ನಾವು ಸಾಮಾನ್ಯವಾಗಿ ಎದೆ ಉರಿಯುವುದು ಎಂದು ಏನು ಹೇಳುತ್ತೇವೋ ಆ ಲಕ್ಷಣ ಕಾಣಿಸಿಕೊಳ್ಳುತ್ತದೆ ಇದೇ ಅಸಿಡಿಟಿ. ಆಹಾರ ಸೇವನೆಯ ಅಭ್ಯಾಸ ಸರಿಯಾಗಿಲ್ಲದ ವ್ಯಕ್ತಿಯಲ್ಲಿ ಈ ಸಮಸ್ಯೆ ತೀವ್ರ ರೂಪದಲ್ಲಿ ಇರಬಹುದು.
ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವು ಹೆಚ್ಚುವುದರಿಂದ ಹೊಟ್ಟೆಯಲ್ಲಿ ಅಸಹನೀಯವಾಗಿ ಉರಿಯುವ ಸಂವೇದನೆ ಉಂಟಾಗಬಹುದು. ಈ ಕಾರಣದಿಂದಾಗಿ
ಎದೆ ಉರಿ, ಹೊಟ್ಟೆ ಉಬ್ಬರಿಸುವುದು, ಅಜೀರ್ಣ, ಹೊಟ್ಟೆಯಲ್ಲಿರುವ ಆಹಾರಾಂಶಗಳ ಹಿಮ್ಮುಖ ಹರಿವು ಬಾಯಿಯ ಮೂಲಕ ಹೊರಬರುವುದು, ವಾಕರಿಕೆ ಮತ್ತು
ಬಾಯಿ ಹುಳಿ-ಹುಳಿಯಾವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆನುವಂಶಿಕತೆ, ಆಹಾರಕ್ರಮ, ಅಧಿಕ ಮದ್ಯಪಾನ ಮತ್ತು ಅಸಹಜವಾಗಿ ಅಧಿಕ ಆಮ್ಲ
ಉತ್ಪತ್ತಿಯಾಗುವುದು ಇತ್ಯಾದಿ ಅನೇಕ ಕಾರಣಗಳಿಂದಾಗಿ ಹೊಟ್ಟೆಯಲ್ಲಿ ಅಧಿಕ ಆಮ್ಲವು ಸಂಗ್ರಹಣೆ ಆಗಬಹುದು.
ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ
ಈ ರೋಗ ಲಕ್ಷಣಕ್ಕೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಹೊಟ್ಟೆಯಲ್ಲಿನ ಆಮ್ಲದ ಹೆಚ್ಚಳದಿಂದ ಅಲ್ಸರ್ ಆಗಬಹುದು. ಹೊಟ್ಟೆಯ ಹುಣ್ಣು ಅಥವಾ ಅಲ್ಸರ್ ಸಾಮಾನ್ಯವಾಗಿ ಅನಾರೋಗ್ಯಕರ ಆಹಾರ ಅಭ್ಯಾಸದ ಕಾರಣದಿಂದ ಉಂಟಾಗುತ್ತದೆ. ಹೆಚ್ಚಿನ ಜನರಿಗೆ ಭರ್ಜರಿ ಊಟ ಮಾಡಿದ ನಂತರ ಅಥವಾ ಮಸಾಲೆಭರಿತ ಆಹಾರ ಸೇವಿಸಿದ ನಂತರ ಬಾಯಿಯ ಮೂಲಕ ಆಮ್ಲವು ಹೊರಬರುವ ಅಥವಾ ಹೊಟ್ಟೆಯಲ್ಲಿ ಜಠರಾಮ್ಲವು ಹೆಚ್ಚಾಗುವ ಲಕ್ಷಣವು
ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಆಮ್ಲವನ್ನು ನಿಯಂತ್ರಣಕ್ಕೆ ತರುವಲ್ಲಿ ಆಹಾರವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಕೆಲವು ಆಹಾರಗಳ ಸೇವನೆಯು ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಬಹುಮಟ್ಟಿಗೆ ಸಹಾಯ ಮಾಡುತ್ತವೆ. ಎದೆ ಉರಿ ಅಥವಾ ಹುಳಿತೇಗು ಬರುವ ತೊಂದರೆಯು ಧೂಮಪಾನ ಮಾಡುವವರಲ್ಲಿ, ಗರ್ಭಿಣಿ ಮಹಿಳೆಯರಲ್ಲಿ, ಅತಿಯಾಗಿ ಮದ್ಯಪಾನ ಮಾಡುವವರಲ್ಲಿ, ಬೊಜ್ಜು ದೇಹಿಗಳಲ್ಲಿ ಮತ್ತು 34ರಿಂದ 64 ರ ನಡುವಿನ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ.
ಅಸಿಡಿಟಿ ನಿವಾರಣೆಗಾಗಿ ಕೆಲವು ಸಲಹೆಗಳು
ತಂಪು ಪಾನೀಯ ಮತು ಕೆಫೀನ್‌ಯುಕ್ತ ಪಾನೀಯಗಳನ್ನು ಸೇವಿಸಬೇಡಿ.
ಪ್ರತಿದಿನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಪ್ರತಿದಿನ 10-12 ಗ್ಲಾಸ್‌ನಷ್ಟು ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ
ವಾಯು ಮತ್ತು ಆಸಿಡಿಟಿಯಂತಹ ರೋಗ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.
ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಎಳನೀರು ಕುಡಿಯಿರಿ ಅದು ಅಸಿಡಿಟಿಯನ್ನು ಶಮನಗೊಳಿಸಿ, ಜೀರ್ಣಾಂಗವ್ಯೂಹವನ್ನು ಶಾಂತಗೊಳಿಸುತ್ತದೆ.
ರಾತ್ರಿಯ ಊಟವನ್ನು ನೀವು ನಿದ್ದೆ ಹೋಗುವುದಕ್ಕೆ 2 ರಿಂದ 3 ಗಂಟೆ ಮೊದಲು ಮುಗಿಸಿಬಿಡಿ.
ಎರಡು ಊಟಗಳ ನಡುವೆ ದೀರ್ಘ ಅಂತರವಿರುವುದು ಅಸಿಡಿಟಿ ಕಾಣಿಸಿಕೊಳ್ಳಲು ಇರುವ ಮತ್ತೂಂದು ಕಾರಣ. ಮಧ್ಯೆ ಮಧ್ಯೆ ಸಣ್ಣ ಸಣ್ಣ ಪ್ರಮಾಣದಲ್ಲಿ ನಿಯುತವಾಗಿ ಊಟ ಸೇವಿಸಿ.
ಖಿನ್ನತೆಯಿಂದ ದೂರವಾಗಲು ಗಿಡಮೂಲಿಕೆ ಔಷಧ
ಉಪ್ಪಿನಕಾಯಿ, ಮಸಾಲೆ ಚಟ್ನಿ, ವಿನೇಗರ್ ಇತ್ಯಾದಿಗಳನ್ನು ಸೇವಿಸಬೇಡಿ
ಯೋಗ ಅಥವಾ ಇತರ ಒತ್ತಡ- ನಿವಾರಕ ಚಟುವಟಿಕೆಗಳು ಅಸಿಡಿಟಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬಹಳ ಸಹಕಾರಿ ಆಗಬಹುದು.
ಕರಿದ ಪದಾರ್ಥ, ಕೊಬ್ಬುಯುಕ್ತ ಆಹಾರ, ಹಾಳುಮೂಳು ಆಹಾರ ಮತ್ತು ಚಾಕೊಲೇಟ್ ಗಳನ್ನು ಸೇವಿಸಬಾರದು.
ಕಾಬೋìಹೈಡ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ – ಉದಾ: ಅನ್ನ -ಇಂತಹ ಆಹಾರಗಳಲ್ಲಿ ಆಮ್ಲವು ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತದೆ.
ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮತ್ತು ಹೊರಗಡೆ ಆಹಾರ ಸೇವಿಸುವುದನ್ನು ತಪ್ಪಿಸಿಕೊಳ್ಳಿ.
ಸಿಗರೇಟು, ಆಲ್ಕೋಹಾಲ್ ಮತ್ತು ಗ್ಯಾಸ್ ತುಂಬಿಸಿರುವ ಪಾನೀಯಗಳನ್ನು ದೂರ ಇಡಿ.
ದಕ್ಷ ಕುಮಾರಿ
ಆಹಾರತಜ್ಞರು, ಪಥ್ಯಾಹಾರ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.