ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ

ಅಂತರರಾಷ್ಟ್ರೀಯ ರೋಡ್‌ಷೋ ಸಂದರ್ಭದಲ್ಲಿ ಒಪ್ಪಂದಕ್ಕೆ ಅಂಕಿತ

Team Udayavani, Dec 1, 2024, 5:11 PM IST

ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ

ಲಂಡನ್: ಕರ್ನಾಟಕದ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ವಲಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೀರೊ ಫ್ಯೂಚರ್ ಎನರ್ಜೀಸ್‌ ಪ್ರೈವೇಟ್ ಲಿಮಿಟೆಡ್ (ಎಚ್ಎಫ್ಇಪಿಎಲ್) ಇಲ್ಲಿ ಕರ್ನಾಟಕ ಸರ್ಕಾರದ ಜೊತೆಗೆ 11,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆ ಅಂಗವಾಗಿ ಲಂಡನ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ರೋಡ್‌ ಷೋದಲ್ಲಿ ಈ ಒಪ್ಪಂದ ಕಾರ್ಯಗತಗೊಂಡಿದೆ.

ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ₹11,000 ಕೋಟಿ ಬಳಕೆ ಆಗಲಿದೆ. ಎಚ್ಎಫ್ಇಪಿಎಲ್- ನ ಈ ಪ್ರಸ್ತಾವಿತ ಯೋಜನೆಗಳು ರಾಜ್ಯದಲ್ಲಿ 2025-26 ರಿಂದ ಕಾರ್ಯಾರಂಭಗೊಳ್ಳಲಿವೆ. 2 ರಿಂದ 3 ವರ್ಷಗಳಲ್ಲಿ ಈ ಮೊತ್ತದ ಹೂಡಿಕೆ ಆಗಲಿದೆ. ಈ ಒಪ್ಪಂದದ ಫಲವಾಗಿ ಕರ್ನಾಟಕದಲ್ಲಿ ಸುಮಾರು 3,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ʼಪರಿಸರ ಸ್ನೇಹಿ ಇಂಧನ ಪರಿಹಾರ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆ ಸಾಧಿಸಲು ರಾಜ್ಯವು ಮುಂಚೂಣಿಯಲ್ಲಿ ಇರುವುದನ್ನು ಮತ್ತು ಬಂಡವಾಳ ಹೂಡಿಕೆಯ ಆದ್ಯತಾ ತಾಣವಾಗಿರುವುದಕ್ಕೆ ಈ ಒಪ್ಪಂದವು ಇನ್ನೊಂದು ನಿದರ್ಶನವಾಗಿದೆ. ಕಾಲಮಿತಿ ಒಳಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾದ ಉತ್ತೇಜನಾ ಕ್ರಮಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆʼ ಎಂದು ಸಚಿವರು ಹೇಳಿದ್ದಾರೆ.

ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಮತ್ತು ಹೀರೊ ಫ್ಯೂಚರ್ ಎನರ್ಜಿಯ ಮುಖ್ಯ ಹಣಕಾಸು ಅಧಿಕಾರಿ ಬೆಂಜಮಿನ್ ಪೌಲ್ ಫ್ರೇರ್‌ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಹೊಸ ತಲೆಮಾರಿನ ಇಂಧನಗಳಿಗಾಗಿ ಅಸಾಮಾನ್ಯ ಸ್ವರೂಪದ ಹವಾಮಾನ ಸವಾಲುಗಳು ದಿಟ್ಟ ಹಾಗೂ ದೃಢ ನಿರ್ಧಾರದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇರುವುದನ್ನು ಹೀರೊ ಫ್ಯೂಚರ್‌ ಎನರ್ಜೀಸ್‌ ಗುರುತಿಸಿದೆ. 6ಕ್ಕೂ ಹೆಚ್ಚು ಗಿಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದೊಂದಿಗೆ ನಾವು ಮಾಲಿನ್ಯ ತಗ್ಗಿಸುವ ನಮ್ಮ ಪ್ರಯತ್ನಗಳನ್ನು ಸಾರಿಗೆ ಮತ್ತು ಭಾರಿ ಎಂಜಿನಿಯರಿಂಗ್ ತಯಾರಿಕೆಯಂತಹ ಕೈಗಾರಿಕೆಗಳಿಗೆ ವಿಸ್ತರಿಸುತ್ತಿದ್ದೇವೆʼ ಎಂದು ಕಂಪನಿಯ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ತಿಳಿಸಿದ್ದಾರೆ.

ಎಚ್ಎಫ್ಇಪಿಎಲ್ ಅನ್ನು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವ ರಾಹುಲ್ ಮುಂಜಾಲ್ ಅವರು 2012 ರಲ್ಲಿ ಸ್ಥಾಪಿಸಿದ್ದಾರೆ. ಇದು ಹೀರೊ ಗ್ರೂಪ್‌ನ ಭಾಗವಾಗಿದೆ.

ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!

ಟಾಪ್ ನ್ಯೂಸ್

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangala-Cris

Bangladesh Crisis: ದೂತಾವಾಸ ಕಚೇರಿ ಮೇಲೆ ದಾಳಿ: ಭಾರತ ವಿರುದ್ಧ ಬಾಂಗ್ಲಾ ಪ್ರತಿಭಟನೆ

South-korea

Declaration Of Martial Law: ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!

Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!

Illegal Gun Purchase case: ಬೈಡನ್‌ ಬೇಷರತ್‌ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!

Illegal Gun Purchase case: ಬೈಡನ್‌ ಬೇಷರತ್‌ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!

Football: ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ: 100ಕ್ಕೂ ಹೆಚ್ಚು ಫುಟ್ಬಾಲ್ ಅಭಿಮಾನಿಗಳು ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Mangaluru; ಕರ್ತವ್ಯ ಲೋಪ: ಜೈಲು ಅಧೀಕ್ಷಕ ಅಮಾನತು

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.