Highway Department: ಚಾರ್ಮಾಡಿ ಘಾಟಿ: ತಡೆಗೋಡೆ ದುರಸ್ತಿಗೆ ಕ್ರಮ
ತಡೆಗೋಡೆ ಬಿರುಕು ಬಿಟ್ಟಿರುವ ಕುರಿತು ಜು.28ರಂದು ಉದಯವಾಣಿ ಸಚಿತ್ರ ವರದಿ
Team Udayavani, Sep 12, 2024, 12:56 AM IST
ಬೆಳ್ತಂಗಡಿ: ಮಂಗಳೂರು-ಚಿಕ್ಕಮಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಹಾನಿಗೀಡಾಗಿರುವ ತಡೆಗೋಡೆಯ ದುರಸ್ತಿಗೆ ಹೆದ್ದಾರಿ ಇಲಾಖೆ ಮುಂದಾಗಿದೆ.
2019ರ ಆ. 8ರಂದು ಸಂಭವಿಸಿದ ಭೂ ಕುಸಿತದಿಂದ ಹಾನಿಗೀಡಾಗಿರುವ ಸ್ಥಳಗಳಲ್ಲಿ ಮರು ಕಾಮಗಾರಿ ನಡೆಸಿದ್ದರೂ ಪ್ರಸಕ್ತ ಮಳೆಗೆ ಸಮಸ್ಯೆ ಎದುರಾಗಿರುವ ಪರಿಣಾಮ ಮತ್ತೆ ಹಾನಿಗೀಡಾಗಿತ್ತು. ಕಳೆದ ಬಾರಿ ನಡೆದಿದ್ದ ಕಾಮಗಾರಿಯಲ್ಲಿ ಲೋಪವಾಗಿರುವುದು ಹಾಗೂ ತಡೆಗೋಡೆ ಬಿರುಕು ಬಿಟ್ಟಿರುವ ಕುರಿತು ಜು.28ರಂದು ಉದಯವಾಣಿ ಸಚಿತ್ರ ವರದಿ ಮಾಡಿತ್ತು.
ಭೂಕುಸಿತಗೊಂಡ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗ ಹಾಗೂ ಚಿಕ್ಕಮಗಳೂರು (ಹಾಸನ) ವಿಭಾಗಕ್ಕೆ ಒಳಪಟ್ಟಂತೆ 6 ಕಡೆಗಳಲ್ಲಿ 100ರಿಂದ 150 ಮೀಟರ್ ಉದ್ದದ ತಡೆಗೋಡೆ ರಚನೆಯಾಗಿದೆ. ಸೋಮನಕಾಡು ಹಾಗೂ ಅಲೆಕಾನ್ ನಡುವಿನ ಎರಡು ಬೃಹದಾಕಾರಾದ ತಡೆಗೋಡೆ ಸಂಕುಚಿತಗೊಂಡಿವೆ. ಈ ಪ್ರದೇಶದಲ್ಲಿ ಸಾಕಷ್ಟು ಜಲ್ಲಿ ಅಳವಡಿಸಿ ತಡೆಗೋಡೆಯ ಮೇಲ್ಪದರ ತೆರವು ಮಾಡಿ ಮರುಕಾಮಗಾರಿ ನಡೆಸುತ್ತಿದೆ. ಆದರೆ ಇದರ ಸುರಕ್ಷೆ ಬಗ್ಗೆ ಪ್ರಶ್ನೆ ಮೂಡುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.