ಹಿಂದಿಯಲ್ಲಿ ಹಿಂದೆ ಬಿದ್ದ ಚೀನ! ಹಿಂದಿ ಭಾಷಾಂತರಕಾರರಿಗಾಗಿ ವಿವಿಗಳಲ್ಲಿ ಹುಡುಕಾಟ
Team Udayavani, May 5, 2022, 8:05 AM IST
ಬೀಜಿಂಗ್: ವಾಸ್ತವಿಕ ಗಡಿ ರೇಖೆ(ಎಲ್‌ಎಸಿ)ಯಲ್ಲಿ ತಾನು ನಡೆಸುತ್ತಿರುವ ಕುಕೃತ್ಯಗಳಿಗೆ ಮತ್ತಷ್ಟು ವೇಗ ನೀಡಲು ಮುಂದಾಗಿರುವ ಚೀನ ಈಗ “ಹಿಂದಿ’ಯ ಕದ ತಟ್ಟಿದೆ!
ಟಿಬೆಟ್‌ನ ಸ್ವಾಯತ್ತ ಪ್ರದೇಶದ ಎಲ್‌ಎಸಿಯಲ್ಲಿ ಕದ್ದಾಲಿಕೆ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶದ ಭಾಗವಾಗಿ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯು ಹಿಂದಿ ಭಾಷಾಂತರ ಬಲ್ಲಂಥ ಪದವೀಧರರನ್ನು ಚೀನದ ವಿವಿಧ ವಿಶ್ವವಿದ್ಯಾನಿಲಯಗಳಿಂದ ನೇರವಾಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
ಪಶ್ಚಿಮ ಥಿಯೇಟರ್ ಕಮಾಂಡ್‌ನ ಅಡಿ ಬರುವ ಟಿಬೆಟ್ ಮಿಲಿಟರಿ ಡಿಸ್ಟ್ರಿಕ್ಟ್ ಮುಂಬರುವ ಜೂನ್ ತಿಂಗಳೊಳಗಾಗಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದೆ. ಭಾರತದೊಂದಿಗೆ ಚೀನ ಗಡಿಯ ಮೇಲ್ವಿಚಾರಣೆಯ ಕೆಲಸವನ್ನೂ ಇದೇ ಕಮಾಂಡ್ ನಡೆಸುತ್ತದೆ.
ವಿವಿಗಳಿಗೆ ಭೇಟಿ: ಕಳೆದ 2 ತಿಂಗಳಲ್ಲಿ ಟಿಬೆಟ್ ಮಿಲಿಟರಿ ಡಿಸ್ಟ್ರಿಕ್ಟ್ ಚೀನದ ವಿವಿಧ ಕಾಲೇಜುಗಳು ಹಾಗೂ ವಿವಿಗಳಿಗೆ ಭೇಟಿ ಕೊಟ್ಟು, ಪಿಎಲ್‌ಎಯಲ್ಲಿ ಹಿಂದಿ ಭಾಷಾಂತರ ಬರುವವರಿಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿತ್ತು.
ಇದನ್ನೂ ಓದಿ : ಚೆನ್ನೈ ಕಿಂಗ್ಸ್‌ಗೆ ಸೋಲು, ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಡು ಪ್ಲೆಸಿಸ್ ಪಡೆ
ಇದಲ್ಲದೇ ಇತ್ತೀಚಿನ ವರ್ಷಗಳಲ್ಲಿ ಚೀನವು ಹಿಂದಿಯನ್ನು ಚೆನ್ನಾಗಿ ಮಾತನಾಡಲು ಬಲ್ಲ ಟಿಬೆಟಿಯನ್‌ಗಳನ್ನೇ ಸೇನೆಗೆ ನೇಮಕ ಮಾಡಿಕೊಳ್ಳುತ್ತಿದೆ. ಭಾರತದ ಉತ್ತರದ ಗಡಿಗಳಲ್ಲಿನ ಸೇನ ಕ್ಯಾಂಪ್‌ಗ್ಳಲ್ಲಿ ಇಂಥವರನ್ನು ನಿಯೋಜಿಸಲಾಗುತ್ತಿದೆ. ಹಿಂದಿ ಗೊತ್ತಿದ್ದರೆ ಗುಪ್ತಚರ ಮಾಹಿತಿಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಎನ್ನುವುದು ಪಿಎಲ್‌ಎ ಲೆಕ್ಕಾಚಾರ. ಇದಕ್ಕೆ ಪ್ರತಿಯಾಗಿ ಇತ್ತ ಭಾರತೀಯ ಸೇನೆಯೂ ಯೋಧರಿಗೆ ಟಿಬೆಟಿಯನ್ ಭಾಷೆಯನ್ನು ಕಲಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.