ಐತಿಹಾಸಿಕ ಏರ್‌ಲಿಫ್ಟ್ ಸಿದ್ಧತೆ ಪೂರ್ಣ

ವಿಶ್ವದ ಅತೀ ದೊಡ್ಡ ಸ್ಥಳಾಂತರ ; ಮೂರ್ನಾಲ್ಕು ಲಕ್ಷ ಭಾರತೀಯರನ್ನು ಕರೆತರುವ ಸಾಹಸ,ಮೇ 7ರಿಂದ 13ರ ವರೆಗೆ ಕಾರ್ಯಾಚರಣೆ

Team Udayavani, May 6, 2020, 6:15 AM IST

ಐತಿಹಾಸಿಕ ಏರ್‌ಲಿಫ್ಟ್ ಸಿದ್ಧತೆ ಪೂರ್ಣ

ಹೊಸದಿಲ್ಲಿ: ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಇತಿಹಾಸ ಕಂಡುಕೇಳರಿಯದಂಥ ಬಹುದೊಡ್ಡ “ಏರ್‌ಲಿಫ್ಟ್’ ಸಾಹಸಕ್ಕೆ ಭಾರತ ಕೈಹಾಕಿದೆ. ಕೋವಿಡ್-19 ಸೃಷ್ಟಿಸಿದ ಲಾಕ್‌ಡೌನ್‌ ಚಕ್ರವ್ಯೂಹದಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ಮೂರ್ನಾಲ್ಕು ಲಕ್ಷ ಭಾರತೀಯರನ್ನು ಗುರುವಾರದಿಂದ ವಿಮಾನ ಮತ್ತು ಹಡಗುಗಳ ಮೂಲಕ ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇರಿಸುತ್ತಿದೆ.

1990ರಲ್ಲಿ ಯುದ್ಧ ಸಂದರ್ಭ ಕುವೈಟ್‌ನಿಂದ ನಡೆಸಿದ್ದ ಏರ್‌ಲಿಫ್ಟ್ ಇದುವರೆಗೆ ಭಾರತದ ಪಾಲಿಗೆ ಬಹುದೊಡ್ಡ ದಾಖಲೆ ಆಗಿತ್ತು. ಈಗ ಮೇ 7ರಿಂದ 13ರ ವರೆಗೆ ನಿರಂತರವಾಗಿ 64 ವಿಮಾನಗಳಲ್ಲಿ ಪ್ರಜೆ ಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದಿಳಿಯಲಿದ್ದಾರೆ. ಮೊದಲ ಹಂತದಲ್ಲಿ 13 ದೇಶಗಳಲ್ಲಿದ್ದ 14,800ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗುತ್ತದೆ.

ಯೋಜನೆಯ ರೂಪುರೇಷೆ
ದಿನ ಒಂದು: 10 ವಿಮಾನಗಳಲ್ಲಿ 2,300 ಭಾರ ತೀಯರು ತಾಯ್ನಾಡಿಗೆ ಮರಳಲಿದ್ದಾರೆ. ಫಿಲಿಪ್ಪೀನ್ಸ್‌, ಸಿಂಗಾಪುರ, ಬಾಂಗ್ಲಾದೇಶ, ಯುಎಇ, ಸೌದಿ ಅರೇಬಿಯಾ, ಅಮೆರಿಕ, ಬ್ರಿಟನ್‌, ಮಲೇಷ್ಯಾ, ಕತಾರ್‌ನ ಭಾರತೀಯರು ಮೊದಲ ದಿನದಿಂದಲೇ ಏರ್‌ಲಿಫ್ಟ್ ಪ್ರಯೋಜನ ಪಡೆಯಲಿದ್ದಾರೆ.

ದಿನ ಎರಡು: ಗಲ್ಫ್ ಸಹಿತ 9 ದೇಶಗಳಿಂದ ಮರಳುವ ಸುಮಾರು 2,050 ಭಾರತೀಯರು ಚೆನ್ನೈ, ಕೊಚ್ಚಿ, ಮುಂಬಯಿ, ಅಹ್ಮದಾಬಾದ್‌ ಮತ್ತು ಬೆಂಗಳೂರಿನಲ್ಲಿ ಇಳಿಯಲಿದ್ದಾರೆ.

ದಿನ 3: ಮಧ್ಯಪ್ರಾಚ್ಯ, ಯುರೋಪ್‌, ಆಗ್ನೇಯ ಏಷ್ಯಾ ಮತ್ತು ಅಮೆರಿಕ ಸೇರಿದಂತೆ 13 ದೇಶಗಳಿಂದ 2 ಸಾವಿರಕ್ಕೂ ಅಧಿಕ ಭಾರತೀಯರು ಆಗಮಿಸಲಿದ್ದಾರೆ.

ನಾಲ್ಕನೇ ದಿನ: ಅಮೆರಿಕ, ಇಂಗ್ಲೆಂಡ್‌ ಮತ್ತು ಯುಎಇ ಸೇರಿದಂತೆ 8 ವಿವಿಧ ದೇಶಗಳಲ್ಲಿ ಸಿಲುಕಿ ರುವ 1,850 ಪ್ರಜೆಗಳು ಬರಲಿದ್ದಾರೆ.

ಪರೀಕ್ಷೆ ಕಡ್ಡಾಯ
ಪ್ರತೀ ವಿಮಾನದಲ್ಲೂ 200- 300 ಪ್ರಯಾಣಿಕರು ಇರಲಿದ್ದಾರೆ. ವಿಮಾನ ವೇರುವ ಮುನ್ನ ಜ್ವರ, ಕೆಮ್ಮು, ಮಧುಮೇಹ ಅಥವಾ ಉಸಿರಾಟದ ತೊಂದರೆ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಸೋಂಕುರಹಿತ ಪ್ರಯಾಣಿಕರಿಗೆ ಮಾತ್ರವೇ ಅವಕಾಶ. ತಾಯ್ನಾಡಿಗೆ ಮರಳಿದ ಮೇಲೆ ಎಲ್ಲರೂ 14 ದಿನಗಳ ಕ್ವಾರಂಟೈನ್‌ ಮತ್ತು ಆರೋಗ್ಯ ಸಚಿವಾಲಯದ ಅಗತ್ಯ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ ಸೂಚಿಸಿದ್ದಾರೆ.

ಹೀಗೆ ಮರಳಿದವರು ಆರೋಗ್ಯ ಸೇತು ಆ್ಯಪ್‌ ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಗೃಹ ಸಚಿವಾಲಯ ಸೂಚಿ ಸಿದೆ. ರಾಜ್ಯಗಳು ನಿಗಾ ವಹಿಸುವಂತೆಯೂ ಸೂಚನೆ ರವಾನೆಯಾಗಿದೆ.

ಕೋವಿಡ್-19ದಿಂದ ಅತಿಹೆಚ್ಚು ನಲುಗಿರುವ ಅಮೆರಿಕದಲ್ಲಿ ಭಾರತೀಯರ ಸ್ಥಳಾಂತರಕ್ಕೆ ಈಗಾಗಲೇ ಆನ್‌ಲೈನ್‌ ನೋಂದಣಿ ಆರಂಭಗೊಂಡಿದೆ.

ನೌಕಾಪಡೆ ತಯಾರಿ ಹೇಗಿದೆ?
11 ಹಡಗುಗಳು ಕಾರ್ಯೋನ್ಮುಖವಾ ಗಿವೆ. ಐಎನ್‌ಎಸ್‌ ಜಲಾಶ್ವ ಈಗಾಗಲೇ ಕೊಲ್ಲಿ ರಾಷ್ಟ್ರಗಳತ್ತ ಹೊರಟಿದೆ. 300- 350 ಪ್ರಯಾಣಿಕರ ಸಾಮರ್ಥ್ಯವಿರುವ ಐಎನ್‌ಎಸ್‌ ಶಾರ್ದೂಲ, ಐಎನ್‌ಎಸ್‌ ಮಾಗರ್‌ ಮಾಲ್ಡೀವ್ಸ್‌ ಕಡೆಗೆ ಮುನ್ನಡೆದಿವೆ. ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ತರಲು ಕನಿಷ್ಠ 2-3 ದಿನಗಳು ಬೇಕು.

ಮೇ 7ರಂದು ಇವರೆಲ್ಲ ತಾಯ್ನಾಡು ತಲುಪುವ ಸಾಧ್ಯತೆ ಇದ್ದು, ಕೇರಳದ ಕೊಚ್ಚಿ ಯಲ್ಲಿ ಕ್ವಾರಂಟೈನ್‌ ಮತ್ತು ಮುಂದಿನ ಪ್ರಯಾಣಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.ಈಗಾಗಲೇ ಚೀನ, ಜಪಾನ್‌, ಇಟಲಿ ಮತ್ತು ಇರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 2,500 ಪ್ರಜೆಗಳನ್ನು ಭಾರತ ಯಶಸ್ವಿಯಾಗಿ ತಾಯ್ನಾಡಿಗೆ ಕರೆಸಿಕೊಂಡಿದೆ.

ಮಾರ್ಗಸೂಚಿ ಪ್ರಕಟ
ವಿದೇಶದಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆ ತರುವುದಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಕೇವಲ ವೈದ್ಯಕೀಯ ತುರ್ತು, ಗರ್ಭಿಣಿಯರು, ವೃದ್ಧರು,ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿ ದ್ದರೆ,ಅವರನ್ನು ಕಾಣಲು ಬರುವವರು, ವಿದ್ಯಾರ್ಥಿಗಳು, ಕೆಲಸ ಕಳೆದುಕೊಂಡಿರುವ ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಎಲ್ಲೆಲ್ಲಿಗೆ ಎಷ್ಟೆಷ್ಟು ವಿಮಾನ?
ಯುಎಇಗೆ 10, ಅಮೆರಿಕ, ಇಂಗ್ಲೆಂಡ್‌, ಮಲೇಷ್ಯಾ, ಬಾಂಗ್ಲಾದೇಶಗಳಿಗೆ ತಲಾ 7, ಸೌದಿ ಅರೇಬಿಯಾ, ಸಿಂಗಾಪುರಗಳಿಗೆ ತಲಾ 5 ಮತ್ತು ಬಹ್ರೈನ್‌, ಒಮಾನ್‌, ಕತಾರ್‌ಗಳಿಗೆ ತಲಾ 2 ವಿಮಾನಗಳು ಹಾರಲಿವೆ.

ಯಾವ್ಯಾವ ದೇಶಕ್ಕೆ ಯಾರು ಸಾರಥಿ?
ಅಮೆರಿಕ: ಏರ್‌ ಇಂಡಿಯಾ
ಬಾಂಗ್ಲಾದೇಶ: ವಾಯುಪಡೆ ವಿಮಾನ
ಯುಎಇ: ಏರ್‌ ಇಂಡಿಯಾ, ಏರ್‌ ಇಂಡಿಯಾ
ಎಕ್ಸ್‌ಪ್ರೆಸ್‌, ಐಎನ್‌ಎಸ್‌ ಜಲಾಶ್ವ
ಅಬುಧಾಬಿ, ದುಬಾೖ: ಏರ್‌ ಇಂಡಿಯಾ,
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌

ಟಿಕೆಟ್‌ ದರ ಎಷ್ಟು ?
ಭಾರತವು ಏರ್‌ಲಿಫ್ಟ್ ವಾಣಿಜ್ಯ ವಿಮಾನಗಳನ್ನು ಬಳಸಿಕೊಂಡಿದ್ದು, ಪ್ರತೀ ಟಿಕೆಟ್‌ಗೆ ರಿಯಾಯಿತಿ ದರ ಸೂಚಿಸಿದೆ.
ದುಬಾೖ, ಅಬುಧಾಬಿ- ಭಾರತ : 13,000 15,000
ಢಾಕಾ-ದಿಲ್ಲಿ- ಶ್ರೀನಗರ: 12,000
ಅಮೆರಿಕ-ದಿಲ್ಲಿ, ಬೆಂಗಳೂರು :1,00,000
ಕುವೈಟ್‌-ಹೈದರಾಬಾದ್‌: 20,000
ಸಿಂಗಾಪುರ-ಬೆಂಗಳೂರು : 18,000
ಲಂಡನ್‌- ದಿಲ್ಲಿ, ಬೆಂಗಳೂರು: 50,000

ನೋಂದಣಿ ಎಷ್ಟು? (ಇಲ್ಲಿಯವರೆಗೆ)
ಗಲ್ಫ್ ರಾಷ್ಟ್ರಗಳು: 2,00,000+
ಅಮೆರಿಕ: 23,000 ಮಾಸ್ಕೋ: 11,000
ನ್ಯೂಜಿಲೆಂಡ್‌: 1,200 ನೈರೋಬಿ: 390

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.