Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

ಕಲ್ಯಾಣ್‌, ಕೊಲ್ಹಾಪುರ್‌ ಮತ್ತು ನಾಸಿಕ್‌ ನಲ್ಲಿ ಸಕ್ರಿಯರಾಗಿ ಮಕ್ಕಳ ಕಳ್ಳತನ ನಡೆಸುತ್ತಿದ್ದರು.

ನಾಗೇಂದ್ರ ತ್ರಾಸಿ, Sep 3, 2024, 4:31 PM IST

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

ಭಾರತದಲ್ಲಿ ಮರಣದಂಡನೆ ಕೆಲವು ಅಪರಾಧಗಳಿಗೆ ಕಾನೂನುಬದ್ದ ಶಿಕ್ಷೆಯಾಗಿದೆ. ಇದು ಕ್ರಿಮಿನಲ್‌ ಕೋಡ್‌ ಆಫ್‌ ಪ್ರೋಸಿಜರ್‌, 1973ರ ಸೆಕ್ಷನ್‌ 354(5)ರ ಪ್ರಕಾರ ಶಿಕ್ಷೆ ವಿಧಿಸಲಾಗುವುದು, ಭಾರತದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲುಶಿಕ್ಷೆಯನ್ನು ವಿಧಿಸಲಾಗುತ್ತದೆ.

ಪ್ರಸ್ತುತ ಭಾರತದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 539 ಕೈದಿಗಳಿದ್ದಾರೆ. ಭಾರತದಲ್ಲಿ ತೀರಾ ಇತ್ತೀಚೆಗೆ ಅಂದರೆ 2020ರ ಮಾರ್ಚ್‌ ನಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿತ್ತು. 2012ರ ದೆಹಲಿ ಸಾಮೂಹಿಕ ಅತ್ಯಾ*ಚಾರ ಮತ್ತು ಕೊಲೆ ಅಪರಾಧಿಗಳಲ್ಲಿ ನಾಲ್ವರನ್ನು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಸ್ವಾತಂತ್ರ್ಯ ನಂತರ 1947ರಿಂದ ಈವರೆಗೆ ಭಾರತದಲ್ಲಿ ಹಲವಾರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ. 1947ರಿಂದ ಈವರೆಗೆ ಕೇವಲ 57 ಅಪರಾಧಿಗಳಿಗೆ ಮಾತ್ರ ಮರಣದಂಡನೆಗೆ ಗುರಿಪಡಿಸಲಾಗಿದೆ.

ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳೆ ಈಕೆ!

1955ರ ಜನವರಿ 3ರಂದು ರತ್ತನ್‌ ಬಾಯಿ ಜೈನ್‌ ಎಂಬಾಕೆಯನ್ನು ಗಲ್ಲಿಗೇರಿಸಲಾಗಿದ್ದು, ದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಮೊದಲ ಮಹಿಳೆ ಈಕೆ. ರತ್ತನ್‌ ಬಾಯಿ ಸ್ಟೆರಿಲಿಟಿ(Sterlity-ಬಂಜೆತನ ನಿವಾರಣೆ) ಕ್ಲಿನಿಕ್‌ ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಕ್ಲಿನಿಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವತಿಯರಿಗೆ ತನ್ನ ಪತಿಯ ಜತೆ ಅನೈತಿಕ ಸಂಬಂಧ ಇದೆ ಎಂಬ ಸಂಶಯದ ಪರಿಣಾಮ ರತ್ತನ್‌ ಬಾಯಿ, ಮೂವರು ಯುವತಿಯರಿಗೆ ವಿಷ ನೀಡಿ ಕೊಲೆಗೈದಿದ್ದಳು. ಈ ಪ್ರಕರಣದಲ್ಲಿ ಜೈನ್‌ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದರ ಪರಿಣಾಮ 1955ರ ಜನವರಿ 3ರಂದು ತಿಹಾರ್‌ ಜೈಲಿನಲ್ಲಿ ರತ್ತನ್‌ ಬಾಯಿಯನ್ನು ಗಲ್ಲಿಗೇರಿಸಲಾಗಿತ್ತು. ಇದನ್ನು ಹೊರತುಪಡಿಸಿ ಜೈನ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕಳೆದ 75 ವರ್ಷಗಳಲ್ಲಿ ಭಾರತದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಮೊದಲ ಮಹಿಳೆ ಜೈನ್.‌

ಸೀರಿಯಲ್‌ ಕಿಲ್ಲರ್ಸ್ ರೇಣುಕಾ ಶಿಂಧೆ ಮತ್ತು ಸೀಮಾ ಗಾವಿಟ್:‌‌

ಸೀಮಾ ಮೋಹನ್‌ ಗಾವಿಟ್‌ ಮತ್ತು ರೇಣುಕಾ ಕಿರಣ್‌ ಶಿಂಧೆ ಸಹೋದರಿಯರು 1990ರಿಂದ 1996ರವರೆಗೆ 13 ಮಕ್ಕಳನ್ನು ಅಪಹರಿಸಿದ್ದು, ಅವರಲ್ಲಿ 9 ಮಕ್ಕಳನ್ನು ಹತ್ಯೆ*ಗೈದ ಸರಣಿ ಹಂತಕರು. ಅಷ್ಟೇ ಅಲ್ಲ ತಾಯಿ ಅಂಜನಾಬಾಯಿ ಕೂಡಾ ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಮಹಾರಾಷ್ಟ್ರ, ಪುಣೆ, ಥಾಣೆ, ಕಲ್ಯಾಣ್‌, ಕೊಲ್ಹಾಪುರ್‌ ಮತ್ತು ನಾಸಿಕ್‌ ನಲ್ಲಿ ಸಕ್ರಿಯರಾಗಿ ಮಕ್ಕಳ ಕಳ್ಳತನ ನಡೆಸುತ್ತಿದ್ದರು.

1996ರ ನವೆಂಬರ್‌ ನಲ್ಲಿ ಸೀಮಾ ಮೋಹನ್‌, ರೇಣುಕಾ ಶಿಂಧೆ, ತಾಯಿ ಅಂಜನಾಬಾಯಿ ಹಾಗೂ ರೇಣುಕಾ ಪತಿ ಕಿರಣ್‌ ಶಿಂಧೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಿರಣ್‌ ಶಿಂಧೆ ಸಾಕ್ಷಿಯಾಗಿ ಬದಲಾಗಿದ್ದರಿಂದ ಪ್ರಕರಣದಲ್ಲಿ ಕ್ಷಮೆ ನೀಡಲಾಗಿತ್ತು. ಆದರೆ ಬಂಧನಕ್ಕೊಳಗಾಗಿ ವಿಚಾರಣೆ ಆರಂಭವಾಗುವ ಮುನ್ನವೇ ಅಂಜನಾಬಾಯಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಳು.

ಪ್ರಕರಣದಲ್ಲಿ ಸೀಮಾ ಹಾಗೂ ರೇಣುಕಾಗೆ ಕೊಲ್ಹಾಪುರ್‌ ಸೆಷನ್ಸ್‌ ಕೋರ್ಟ್‌ ದೋಷಿ ಎಂದು ತಿಳಿಸಿ, ಮರಣದಂಡನೆ ವಿಧಿಸಿತ್ತು. 2004ರಲ್ಲಿ ಬಾಂಬೆ ಹೈಕೋರ್ಟ್‌ ಕೂಡಾ ಸೆಷನ್ಸ್‌ ಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿತ್ತು. 2006ರಲ್ಲಿ ಸುಪ್ರೀಂಕೋರ್ಟ್‌ ಕೂಡಾ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. 2014ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಏತನ್ಮಧ್ಯೆ 2008, 2009ರಲ್ಲೇ ನಾವು ಕ್ಷಮದಾನ ಅರ್ಜಿ ಸಲ್ಲಿಸಿದ್ದರು ಕೂಡಾ 2014ರಲ್ಲಿ ತಿರಸ್ಕರಿಸಿದ್ದು ಯಾಕೆ ಎಂದು ವಿಳಂಬವನ್ನು ಪ್ರಶ್ನಿಸಿ ಇಬ್ಬರೂ ಬಾಂಬೆ ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿ, ಗಲ್ಲುಶಿಕ್ಷೆ ಜಾರಿಗೆ ತಡೆ ಪಡೆಯುಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಯರವಾಡ ಜೈಲಿನಲ್ಲಿರುವ ಸಹೋದರಿಯರಿಗೆ ನೇಣು ಕುಣಿಕೆ ಶಿಕ್ಷೆಯಿಂದ ಪಾರಾಗಲು ಸಾಧ್ವವಿಲ್ಲ. ಒಂದು ವೇಳೆ ಮರಣದಂಡನೆ ಶಿಕ್ಷೆಗೆ ದಿನಾಂಕ ನಿಗದಿಯಾದರೆ ಜೈನ್‌ ನಂತರ ಗಲ್ಲಿಗೇರಿದ ಮಹಿಳಾ ಕೈದಿಯಾಗಲಿದ್ದಾರೆ.

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

ಕಾಶೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

Varanasi: ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!

Varanasi:ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.