ಟೋಕಿಯೊ ಒಲಿಂಪಿಕ್ಸ್ ; ಹಾಕಿ ಪಂದ್ಯದಲ್ಲಿ ಭಾರತಕ್ಕೆ 7 ಗೋಲುಗಳ ಸೋಲು
Team Udayavani, Jul 25, 2021, 10:37 PM IST
ಟೋಕಿಯೊ: ಗ್ರೂಪ್ ಹಂತದ ದ್ವಿತೀಯ ಹಾಕಿ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ಕೈಯಲ್ಲಿ ಬಲವಾದ ಏಟು ತಿಂದಿದೆ. ಕಾಂಗರೂ ಪಡೆ 7-1 ಅಂತರದಿಂದ ಮನ್‌ಪ್ರೀತ್ ಬಳಗವನ್ನು ಕೆಡವಿ ಸತತ 2ನೇ ಜಯ ದಾಖಲಿಸಿದೆ. ಆಸ್ಟ್ರೇಲಿಯದವರೇ ಆದ ಗ್ರಹಾಂ ರೀಡ್ ತಂಡದ ಕೋಚ್ ಆದ ಬಳಿಕ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲು ಇದಾಗಿದ್ದು, ತಂಡದ ಆತ್ಮವಿಶ್ವಾಸ ಒಮ್ಮೆಲೇ ಕುಸಿದು ಹೋಗಿದೆ.
ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯ 10ನೇ ನಿಮಿಷದಿಂದಲೇ ಗೋಲಿನ ಸುರಿಮಳೆಗೈಯತೊಡಗಿತು. ಡ್ಯಾನಿಯಲ್ ಬೀಲೆ ಖಾತೆ ತೆರೆದರು. ಬಳಿಕ ಜೆರೆಮಿ ಹೋವರ್ಡ್ (21), ಆ್ಯಂಡ್ರೂé ಫ್ಲಿನ್ ಒಜಿಲ್ವಿ (23), ಜೋಶುವ ಬೆಲ್ಟ್ (26), ಬ್ಲೇಕ್ ಗೋವರ್ (40 ಮತ್ತು 42) ಮತ್ತು ಟಿಮ್ ಬ್ರ್ಯಾಂಡ್ (51ನೇ ನಿಮಿಷ) ಗೋಲು ಬಾರಿಸುತ್ತ ಹೋದರು. ಭಾರತದ ಆಟಗಾರರು ಅಸಹಾಯಕರಾಗಿ ಇದನ್ನೆಲ್ಲ ಕಾಣುತ್ತ ನಿಂತರು. ಪಿ.ಆರ್. ಶ್ರೀಜೇಶ್ 2-3 ಉತ್ತಮ ತಡೆಯೊಡ್ಡದೇ ಹೋಗಿದ್ದರೆ ಸೋಲಿನ ಅಂತರ ಇನ್ನೂ ಹೆಚ್ಚುತ್ತಿತ್ತು.
ಭಾರತದ ಏಕೈಕ ಗೋಲನ್ನು 34ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಬಾರಿಸಿದರು. ಭಾರತವಿನ್ನು ಮಂಗಳವಾರ ಸ್ಪೇನ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ :2022ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ : “ಅಯೋಧ್ಯೆ’ಯಲ್ಲಿ ಯೋಗಿ ಕಣಕ್ಕೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.