Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Team Udayavani, Dec 26, 2024, 7:36 AM IST
ಮೇಷ: ತರಾತುರಿಯ ದಿನಚರಿಯಿಂದ ಹೊರಬರಲಾರದ ಸನ್ನಿವೇಶ. ಉದ್ಯೋಗಸ್ಥರಿಗೆ ಹೆಚ್ಚು ಜವಾಬ್ದಾರಿಯ ಕೆಲಸಗಳು ಬರಲಿವೆ. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಯಶಸ್ಸು. ವೃತ್ತಿಪರರಿಗೆ ಮಾಮೂಲಿನಂತೆ ಒತ್ತಡ.
ವೃಷಭ: ಅವಸರ ಪಡದೆ ಸಾವಧಾನದಿಂದ ಮುನ್ನಡೆಯಿರಿ. ಎಲೆಕ್ಟ್ರಾನಿಕ್ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಸಜ್ಜನರಿಗೆ ಕಳಂಕ ಬರಿಸುವ ಘಟನೆ ನಡೆಯುವ ಸಾಧ್ಯತೆ. ದೀರ್ಘಾವಧಿ ಹೂಡಿಕೆಗಳ ಬಗ್ಗೆ ಯೋಚನೆ.
ಮಿಥುನ: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ. ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ. ಸ್ವಂತ ಉದ್ಯಮಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆಗಳ ಸಮಸ್ಯೆ. ಪಶುಸಂಗೋಪನೆ, ಹೈನುಗಾರಿಕೆ, ಜೇನು ವ್ಯವಸಾಯಗಾರರಿಗೆ ಆದಾಯ ಮಧ್ಯಮ.
ಕರ್ಕಾಟಕ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಹೊಸದಾಗಿ ಪಾಲುದಾರಿಕೆ ವ್ಯವಹಾರಗಳು ಬೇಡ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ ಹಾಗೂ ಆದಾಯ ವೃದ್ಧಿ. ದೂರದಲ್ಲಿರುವ ಮಕ್ಕಳಿಂದ ಸಂತೋಷದ ಸುದ್ದಿ.
ಸಿಂಹ: ನಿಧಾನ ಹಾಗೂ ಸ್ಥಿರವಾದ ನಡೆಯಿಂದ ವಿಜಯ. ಜವಾಬ್ದಾರಿಯ ಸ್ಥಾನದಲ್ಲಿನಿಮ್ಮ ಕಾರ್ಯವೈಖರಿಗೆ ಮೇಲಿನವರ ಮೆಚ್ಚುಗೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಆದಾಯ ಉತ್ಪಾದನಾ ರಂಗದವರಿಗೆ ಅಧಿಕ ಬೇಡಿಕೆಯ ಸವಾಲು.
ಕನ್ಯಾ: ಉತ್ತಮ ಆರೋಗ್ಯದಿಂದ ಮನೋಲ್ಲಾಸ.ಹಿರಿಯರಿಂದ ವ್ಯವಹಾರಕ್ಕೆ ಸೂಕ್ತ ಸಲಹೆ ಲಭ್ಯ. ವ್ಯವಹಾರ ಸಂಬಂಧ ದೂರ ಪ್ರಯಾಣ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರದಲ್ಲಿ ಲಾಭ.
ತುಲಾ: ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಲು ಕಲಿಯಿರಿ. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸವಾಲುಗಳು. ಗುರು, ದೇವತಾನುಗ್ರಹದಿಂದ ನಿತ್ಯದ ವ್ಯವಹಾರಗಳಲ್ಲಿ ಜಯ. ಮನೆಯಲ್ಲಿ ದೇವತಾಕಾರ್ಯಗಳ ಸಿದ್ಧತೆ.
ವೃಶ್ಚಿಕ: ವರ್ತಮಾನದಲ್ಲಿ ಬದುಕುವುದನ್ನು ಕಲಿತರೆ ಯಶಸ್ಸು ಸುಲಭ. ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ಸ್ಥಿತಿ.ಸ್ವಂತ ಉದ್ಯಮ ನಡೆಸುವವರಿಗೆ ಮುನ್ನಡೆ.
ಧನು: ಎಲ್ಲರಂಗಗಳಲ್ಲೂ ತೃಪ್ತಿಕರ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಸ್ವಂತ ಉದ್ಯಮಿಗಳ ಉತ್ಪನ್ನಗಳಿಗೆ ಉತ್ತಮ ಬೇಡಿಕೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ವಾತಾವರಣ.
ಮಕರ: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ.ಉದ್ಯೋಗದಲ್ಲಿ ಜವಾಬ್ದಾರಿ ಕೊಂಚ ಬದಲಾವಣೆ.ಕಳೆದು ಹೋದ ವಸ್ತು ಮರಳಿ ಸಿಗುವ ಸಾಧ್ಯತೆ. ಹೊಸಬರ ಪರಿಚಯದಿಂದ ಲಾಭ. ಸ್ವಂತ ಆರೋಗ್ಯದತ್ತ ಗಮನವಿರಲಿ.
ಕುಂಭ: ಶನಿಯ ವಕ್ರಗತಿಯಿಂದ ಪರಿಸ್ಥಿತಿಯಲ್ಲಿ ಕೊಂಚ ವ್ಯತ್ಯಾಸ. ಉದ್ಯೋಗದಲ್ಲಿ ಗಳಿಕೆಗೆ ಸರಿಹೊಂದದ ದುಡಿಮೆ. ಕಿವಿಕಚ್ಚುವ ಪ್ರವೃತ್ತಿಯುಳ್ಳವರ ಕುರಿತು ಎಚ್ಚರ. ಸಮಾಜಸೇವೆಗೆ ಮತ್ತಷ್ಟು ಅವಕಾಶಗಳು ಗೋಚರ. ಕೊಟ್ಟು ಮರೆತಿದ್ದ ಸಾಲ ಕೈಗೆ ಬರುವ ಸಾಧ್ಯತೆ.
ಮೀನ: ದಿನಾರಂಭದಲ್ಲಿ ಕೊಂಚ ಕಿರಿಕಿರಿ ಅನಿಸಿಕೆ. ವೃತ್ತಿಕ್ಷೇತ್ರದಲ್ಲಿ ಸಮಯದ ಸವಾಲು. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಅಪರಿಚಿತರಿಂದ ಸಕಾಲದರಲ್ಲಿ ಅಯಾಚಿತ ಸಹಾಯ.ಹಿರಿಯರ ಆರೋಗ್ಯ ಚೇತರಿಸಿ ಚಿಂತೆ ದೂರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.