![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 5, 2022, 7:14 AM IST
ಮೇಷ: ಗುರು ಹಿರಿಯರಲ್ಲಿ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ಉತ್ತಮ ಅವಕಾಶ ಪ್ರಯಾಣದಿಂದ ಸುಖ ಧನ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲಕರ. ಮಾತಿನಲ್ಲಿ ಎಚ್ಚರ ವಹಿಸಿ. ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ. ಧೈರ್ಯದಿಂದ ಕಾರ್ಯಸಿದ್ಧಿ. ಧನಾಗಮನಕ್ಕೆ ಕೊರತೆ ಇರದು. ಗುರುಹಿರಿಯರ ಆರೋಗ್ಯ ಗಮನಿಸಿ.
ಮಿಥುನ: ಚಟುವಟಿಕೆಯಿಂದ ಕೂಡಿದ ದಿನ. ಸಾಮಾಜಿಕ ಜನಪರ ಕಾರ್ಯದಲ್ಲಿ ತೊಡಗುವುದರಿಂದ ಗೌರವ ಸುಖ ಸಂತೋಷ ಸಿದ್ಧಿ. ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫಲಿತಾಂಶ ಸಿಗುವ ಸಮಯ.
ಕರ್ಕ: ಆರೋಗ್ಯ ವಿಚಾರದಲ್ಲಿ ಉದಾಸೀನ ಬೇಡ. ತಾಳ್ಮೆ ಕಳೆದುಕೊಳ್ಳದೇ ನೇರ ಸಾಮಾಜಿಕ ಜನಪರ ವ್ಯವಹಾರ ಕೆಲಸ ಕಾರ್ಯಗಳಿಂದ ಗೌರವ ಪ್ರಾಪ್ತಿ. ವಾಹನ ಗೃಹೋಪಕರಣ ವಸ್ತುಗಳಿಂದ ಲಾಭ. ನೂತನ ಮಿತ್ರರ ಭೇಟಿ. ದೀರ್ಘ ಪ್ರಯಾಣ ಸಂಭವ.
ಸಿಂಹ: ತೀಕ್ಷ್ಣ ನುಡಿ ನಡೆಯಿಂದ ದಿನಚರಿ ಆರಂಭಿಸಬೇಡಿ. ತಾಳ್ಮೆ ಇರಲಿ. ಕೋರ್ಟು ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ಚಿಕ್ಕ ಪ್ರಯಾಣದಿಂದ ಸಂತಸ. ಉದ್ಯೋಗ ಧನಾಗಮನದಲ್ಲಿ ವೃದ್ಧಿ. ಅನಿರೀಕ್ಷಿತ ಬದಲಾವಣೆ. ಮಿತ್ರರಿಂದ ಸಹಕಾರ.
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಅನಿರೀಕ್ಷಿತ ಸ್ಥಾನ ಗೌರವದ ಸುಖ. ಹಣಕಾಸಿದ ವಿಚಾರದಲ್ಲಿ ಹಿಡಿತವಿರಲಿ. ಹಿರಿಯರ ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಸಹೋದ್ಯೋಗಿಗಳಿಂದ ಹೆಚ್ಚಿನ ಲಾಭ.
ತುಲಾ: ಉದ್ಯೋಗ ಧನ ಸಂಪಾದನೆ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿ. ಬಂದ ಅವಕಾಶವನ್ನು ಉಪಯೋಗಸಿ. ನಿಮ್ಮ ವಿನಯ ನಮ್ರತೆಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಸಂಪಾದಿಸುವ ದಿನ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷೆಯಂತೆ ಸ್ಥಾನ ಲಾಭ.
ವೃಶ್ಚಿಕ: ಗುರು ಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ. ಪ್ರಯಾಣ ಉದ್ಯೋಗ ಧನ ಸಂಪಾದನೆ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ದೂರದ ವ್ಯವಹಾರಗಳಿಂದ ಧನಲಾಭ.
ಧನು: ವಿಚಾರ ವಿನಿಮಯದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ನಿರೀಕ್ಷಿತ ಕೆಲಸ ಕಾರ್ಯದಲ್ಲಿ ಪ್ರಗತಿ. ಆರ್ಥಿಕ ಹಿಡಿತವಿರಲಿ. ಸಣ್ಣ ಪ್ರಯಾಣದಿಂದ ಲಾಭ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ಮಕರ: ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಶ್ರಮವಿದ್ದರೂ ಅಂತಿಮವಾಗಿ ಗುರಿ ಸಾಧಿಸುವಿರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವಾದಿ ಪ್ರಾಪ್ತಿ.
ಕುಂಭ: ಅನಿರೀಕ್ಷಿತ ಪ್ರಯಾಣ. ದೂರದ ವ್ಯವಹಾರದಲ್ಲಿ ಪ್ರಗತಿ. ಧನಾಗಮನಕ್ಕೆ ಕೊರತೆ ಇರದು. ಮಿತ್ರರಲ್ಲಿ ನಿಷ್ಠುರಬೇಡ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡಿದಿರಿ. ಎಲ್ಲಾ ವೃತ್ತಿ ಪ್ರವೃತ್ತಿಗಳಲ್ಲಿ ಗಣನೀಯ ಪ್ರಗತಿ. ಗೌರವ ಜನಮನ್ನಣೆ ಲಭಿಸಿದ ಸಂತೋಷ.
ಮೀನ: ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದಿರಿ. ಆರೋಗ್ಯದ ಕಡೆಗೆ ಗಮನಹರಿಸಿ. ಮಾನಸಿಕ ಗೊಂದಲಕ್ಕೆ ಅವಕಾಶ ನೀಡಬೇಡಿ. ವಿಶ್ರಾಂತಿಯಿಂದ ದಿನ ಕಳೆಯಿರಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ. ಜನಮನ್ನಣೆ ಲಭ್ಯ. ಉತ್ತಮ ಪ್ರಗತಿದಾಯಕ ಧನಾರ್ಜನೆ. ಧನ ಸದ್ವಿನಿಯೋಗ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.