ರಾಶಿ ಫಲ: ಆರೋಗ್ಯ ಉತ್ತಮ, ವಿದೇಶ ಮೂಲದಿಂದ ಧನಾಗಮ
Team Udayavani, Feb 27, 2023, 7:13 AM IST
ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಇತರರಲ್ಲಿ ಅನಗತ್ಯ ಸ್ಪರ್ದೆ ಮಾಡದಿರಿ. ಅನಿರೀಕ್ಷಿತ ಧನಾಗಮ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಯಿಂದ ಮುನ್ನಡೆ ಸಂಭವಿಸೀತು. ಗುರುಹಿರಿಯರಿಂದ ಸುಖ. ಧಾರ್ಮಿಕ ಕಾರ್ಯಗಳ ನೇತೃತ್ವ.
ವೃಷಭ: ಉತ್ತಮ ಆರೋಗ್ಯ. ಸದಾ ಸಂಚಾರಶೀಲತೆ. ಬಹುಜನ ಸಂಪರ್ಕ. ಹಲವು ವಿಧದಲ್ಲಿ ಧನಲಾಭ. ದೂರದ ವ್ಯವಹಾರಗಳಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ಸಾಂಸಾರಿಕ ಸುಖದಲ್ಲಿ ಹೆಚ್ಚಿದ ತೃಪ್ತಿ. ಗುರುಹಿರಿಯರ ಮಾರ್ಗದರ್ಶನ.
ಮಿಥುನ: ಮಾತಾಪಿತೃಗಳಿಂದಲೂ ಹಿರಿಯರಿಂದಲೂ ಸುಖ ಸಿದ್ಧಿ. ಎಲ್ಲರಿಗೂ ಪ್ರೀತಿ ಪಾತ್ರ. ಆರೋಗ್ಯ ಉತ್ತಮ. ವಿದೇಶ ಮೂಲದಿಂದ ಧನಾಗಮ. ಸಹೋದ್ಯೋಗಿಗಳ ಸಹೋದರ ಸಮಾನರಿಂದ ವ್ಯವಹಾರಗಳಲ್ಲಿ ಸಹಕಾರ.
ಕರ್ಕ: ದೈಹಿಕವಾಗಿಯೂ ಮಾನಸಿಕವಾಗಿಯೂ ಸುದೃಢ ಆರೋಗ್ಯ. ಉತ್ಸಾಹಶೀಲತೆ, ಭೂಮಿ ಆಸ್ತಿ ವಿಚಾರದಿಂದ ಲಾಭ. ಧಾರ್ಮಿಕ ವಿಚಾರಗಳಿಂದಲೂ ಸರಕಾರೀ ವ್ಯವಹಾರಗಳಿಂದ ತೃಪ್ತಿ. ಸಂಸಾರದಲ್ಲಿ ಅನುರಾಗ ವೃದ್ಧಿ. ಹಿರಿಯರ ಆರೋಗ್ಯ ನಿಗಾವಹಿಸಿ.
ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ವಾಕ್ ಚತುರತೆ. ಸರ್ವಜನರ ಮಾನ್ಯತೆ. ಆರೋಗ್ಯ ಗಮನಿಸಿ. ಜವಾಬ್ದಾರಿಯುತ ಕೆಲಸ ಕಾರ್ಯದಿಂದ ಧನಾಗಮ. ನ್ಯಾಯಸಮ್ಮತದ ಜ್ಞಾನದಲ್ಲಿ ಆಸಕ್ತಿ. ಆಡಳಿತಾತ್ಮಕ ನಾಯಕತ್ವ ಗುಣ ವೃದ್ಧಿ.
ಕನ್ಯಾ: ಸುದೃಢ ಆರೋಗ್ಯ. ಬುದ್ಧಿವಂತಿಕೆ ವೃದ್ಧಿ. ಸುಪುಷ್ಟ ಕಾಂತಿಯುತ ಶರೀರ. ಪರರಿಗೆ ಆರ್ಥಿಕ ಸಹಾಯ ಮಾಡುವಾಗ ಎಚ್ಚರ ವಹಿಸುವುದರಿಂದ ಅನಾಹುತ ತಪ್ಪೀತು. ವ್ಯವಹಾರಗಳಲ್ಲಿ ಮಾನ್ಯತೆ. ದಂಪತಿಗಳಿಂದ ಹೆಚ್ಚಿದ ಜವಾಬ್ದಾರಿ ಪರಿಶ್ರಮ.
ತುಲಾ: ಮನೋರಂಜನೆಯಿಂದ ಕೂಡಿದ ದಿನ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ ಸಂಭವ. ಆಸ್ತಿ ವ್ಯವಹಾರದಲ್ಲಿ ಪ್ರಗತಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಪ್ರಗತಿ. ಸರಕಾರೀ ಕೆಲಸ ಕಾರ್ಯದಲ್ಲಿ ಪ್ರಗತಿ. ಧನಸಂಚಯನ.
ವೃಶ್ಚಿಕ: ತಾಳ್ಮೆ ಸಹನೆಯಿಂದ ವ್ಯವಹರಿಸಿದರೆ ಅಧಿಕ ಸ್ಥಾನ ಗೌರವಾದಿ ಲಭ್ಯ. ಹೆಚ್ಚಿದ ವರಮಾನ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಅನುಕೂಲಕರ ವಾತಾವರಣ ಲಭಿಸುವುದು. ಜನಮನ್ನಣೆ ಪ್ರೋತ್ಸಾಹ ಲಭ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ.
ಧನು: ದೂರ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಸಂದರ್ಭೋಚಿತವಾಗಿ ವ್ಯವಹರಿಸುವುದರಿಂದ ಜನ ಮನ್ನಣೆ ಪ್ರೀತಿ ಸಂಪಾದನೆ. ಗುರುಹಿರಿಯರ ಪ್ರೋತ್ಸಾಹ.
ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿದ್ದರಿಂದ ಮನಃ ತೃಪ್ತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಾಮಾನ್ಯ ಪ್ರಗತಿ. ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂಭ್ರಮದ ವಾತಾವರಣ.
ಕುಂಭ: ದೂರ ಪ್ರಯಾಣದಲ್ಲಿ ಸಫಲತೆ. ಆಸ್ತಿ ವಿಚಾರದಲ್ಲಿ ಹೂಡಿಕೆ ಪ್ರಗತಿ. ಉತ್ತಮ ಧನ ಸಂಪಾದನೆ. ಸಂದರ್ಭಕ್ಕೆ ಸರಿಯಾಗಿ ವಾಕ್ ಚತುರತೆ ಪ್ರದರ್ಶನ. ಕೈಗಾರಿಕೆ ಕೆಲಸ ಕಾರ್ಯಗಳಲ್ಲಿ ಸಹೋದರ ಸಮಾನರಿಂದ ಸಹಾಯ ಲಭ್ಯ. ಮಕ್ಕಳಿಂದ ಸಂತೋಷ.
ಮೀನ: ಆರೋಗ್ಯ ಸುದೃಢ. ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಜನಮನ್ನಣೆ. ವಾಹನಾದಿ ಸೌಕರ್ಯ ಪ್ರಾಪ್ತಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಕಾರ್ಯಗಳನ್ನು ನೆರವೇರಿಸಿದ ತೃಪ್ತಿ. ಗೃಹದಲ್ಲಿ ಸಂಭ್ರಮದ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.