ರಾಶಿ ಫಲ; ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ, ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ
Team Udayavani, Jan 23, 2023, 7:21 AM IST
ಮೇಷ: ಸಂತಸದಿಂದ ಕೂಡಿದ ಸಮಯ. ದೀರ್ಘ ಪ್ರಯಾಣ, ಧಾರ್ಮಿಕ ಕಾರ್ಯ ಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಗಣ್ಯರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ.
ವೃಷಭ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ವೃದ್ಧಿ. ದೇವತಾ ಸ್ಥಳ ಸಂದರ್ಶನ.
ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಮನೆಯ ಕಡೆ ವಿಶೇಷ ಗಮನಹರಿಸುವಿಕೆ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ ವೃದ್ಧಿ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ. ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ.
ಕರ್ಕ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣ ದಲ್ಲಿ ವಿಳಂಬ ಅಡಚಣೆ ತೋರೀತು. ಧನಾಗಮನಕ್ಕೆ ಕೊರತೆಯಾಗದು. ಸಾಂಸಾರಿಕ ಸುಖ ತೃಪ್ತಿ ದಾಯಕ. ವಿದ್ಯಾರ್ಥಿಗಳಿಗೆ ಸ್ಥಾನ ಸುಖ ಲಭಿಸುವುದು.
ಸಿಂಹ: ಆರೋಗ್ಯದ ಬಗ್ಗೆ ಗಣನೀಯ ಎಚ್ಚರ ಅಗತ್ಯ. ಆಹಾರ ಸೇವನೆಯಲ್ಲಿ ಮುಂಜಾಗ್ರತೆ ವಹಿಸಿರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದಂಪತಿ ಗಳಲ್ಲಿ ಪರಸ್ಪರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
ಕನ್ಯಾ: ಆರೋಗ್ಯ ವೃದ್ಧಿ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಮಾಗಮ. ಆಸ್ತಿ ಸಂಚಯನಕ್ಕೆ ಆದ್ಯತೆ. ಹೂಡಿಕೆಗಳಲ್ಲಿ ಲಾಭ. ದಂಪತಿಗಳಲ್ಲಿ ಪರಸ್ಪರ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷದ ವಾರ್ತೆ. ವ್ಯವಹಾರಗಳಲ್ಲಿ ಗೌರವ ಪ್ರಾಪ್ತಿ.
ತುಲಾ: ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಗುರುಹಿರಿಯರ ಮೇಲಧಿ ಕಾರಿ ಗಳ ಪೂರ್ಣ ಸಹಾಯ. ನಿರೀಕ್ಷೆಗೂ ಮೀರಿದ ಧನಾಗಮ. ಸಹೋದ್ಯೋಗಿಗಳಿಂದ ಹೆಚ್ಚಿನ ಲಾಭ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆಯಿಂದ ಮುನ್ನಡೆ.
ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷೆಯಂತೆ ಸ್ಥಾನ ಲಾಭ. ಧನ ಸಂಪತ್ತು ಪ್ರಾಪ್ತಿ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಮಕ್ಕಳಿಂದಲೂ ಗೃಹದಲ್ಲಿ ಸಂತೋಷ ವೃದ್ಧಿ. ಸತ್ಕರ್ಮಕ್ಕೆ ಧನವ್ಯಯ.
ಧನು: ಸಣ್ಣ ಪ್ರಯಾಣ. ಸಹೋದ್ಯೋಗಿಗಳ ಮೇಲೆ ಅವಲಂಬನೆ. ನೂತನ ಮಿತ್ರರ ಭೇಟಿ. ಕೈತುಂಬ ವ್ಯವಹಾರ ಉದ್ಯೋಗಾವಕಾಶ. ದೂರದ ವ್ಯವಹಾರಗಳಿಂದ ಧನಲಾಭ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ, ಪುರಸ್ಕಾರ ಲಭ್ಯ.
ಮಕರ: ಭೂಮಿ ಆಸ್ತಿ ವಿಚಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಬದಲಾವಣೆ ಸಂಭವ. ಆದಾಯಕ್ಕೆ ಸಮನಾದ ವ್ಯಯ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ಕುಂಭ: ಆರೋಗ್ಯ ವೃದ್ಧಿ. ನಿರೀಕ್ಷೆಯಂತೆ ಸ್ಥಾನ ಸುಖಾದಿ ವೃದ್ಧಿ. ಹೆಚ್ಚಿದ ವರಮಾನ. ಕೆಲಸಕಾರ್ಯಗಳಲ್ಲಿ ತಲ್ಲೀನತೆ. ಅನಿರೀಕ್ಷಿತ ಬದಲಾವಣೆ. ಮಿತ್ರರಿಂದ ಸಹಕಾರ. ದಾಂಪತ್ಯ ಸುಖ ಮಧ್ಯಮ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಮೀನ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಭೂಮ್ಯಾದಿ ವ್ಯವಹಾರಗಳಲ್ಲಿ ಅಭಿವೃದ್ಧಿ. ಅಧ್ಯಯನನಿರತರಿಗೆ ಪರಿಕರ ಸೌಲಭ್ಯದ ಸುಖ. ದೀರ್ಘ ಪ್ರಯಾಣ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.