ರಾಶಿ ಫಲ; ನಿರೀಕ್ಷಿತ ಸ್ಥಾನ ಸುಖ ವೃದ್ಧಿ, ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ
Team Udayavani, Jan 25, 2023, 7:21 AM IST
ಮೇಷ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನೇತೃತ್ವ ವಹಿಸಿದ ತೃಪ್ತಿ. ಹಿರಿಯರ ಗುರುಗಳ ಪ್ರೀತಿ ಸಂಪಾದನೆ. ಗಣ್ಯರ ಭೇಟಿ ಸ್ಥಾನಮಾನ ವೃದ್ಧಿ. ಧನಸಂಪತ್ತಿನ ವಿಚಾರದಲ್ಲಿ ಸಂತೋಷ. ಬಂಧು ಮಿತ್ರರಲ್ಲಿ ಬೇಸರ ಮಾಡದಿರಿ.
ವೃಷಭ: ಗೃಹ ವಾಹನಾದಿ ಆಸ್ತಿ ವಿಚಾರದಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಮಾತಿನಲ್ಲಿ ದಾಕ್ಷಿಣ್ಯ ತೋರದೆ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ.
ಮಿಥುನ: ಚತುರತೆಯಿಂದ ಕೂಡಿದ ಕಾರ್ಯವೈಖರಿ. ನಿರೀಕ್ಷಿತ ಸ್ಥಾನ ಸುಖ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ. ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಮಕ್ಕಳಿಂದ ಸಂತೋಷ.
ಕರ್ಕ: ಸಣ್ಣ ಹಾಗೂ ದೀರ್ಘ ಪ್ರಯಾಣದಿಂದ ಅನುಕೂಲ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರಗಳಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸಹೋದ್ಯೋಗಿಗಳಿಂದ ಸಹಾಯ ದೊರಕಿದರೂ ನಿಮ್ಮ ಕ್ರಮಕ್ಕೆ ಆಲೋಚನೆಗೆ ಆದ್ಯತೆ ನೀಡಿ.
ಸಿಂಹ: ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಬರಬೇಕಾದ ಸಂಪತ್ತು ಪ್ರಾಪ್ತಿ. ಸಾಲ ನೀಡದಿರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ.
ಕನ್ಯಾ: ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯ ಬಗ್ಗೆ ಅಸಡ್ಡೆ ಮಾಡದಿರಿ. ಸಾಂಸಾರಿಕ ಸುಖ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರುವ ಸಮಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ.
ತುಲಾ: ಆರೋಗ್ಯದಲ್ಲಿ ನಿರ್ಲಕ್ಷ್ಯ ಸಲ್ಲದು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ದಂಪತಿಗಳಲ್ಲಿ ಸಂಸಾರದಲ್ಲಿ ಅನ್ಯೊನ್ಯತೆ ಸಂತೋಷದ ವಾತಾವರಣ. ಗೃಹೋಪವಸ್ತುಗಳ ಸಂಗ್ರಹ. ವಾಹನಾದಿ ವಿಚಾರದಲ್ಲಿ ಪ್ರಗತಿ.
ವೃಶ್ಚಿಕ: ನೂತನ ಮಿತ್ರರ ಸಮಾಗಮ. ಗುರುಹಿರಿಯರ ಆಶೀರ್ವಾದ ಬಹಳ ಸಮಯ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೌರವದಿಂದ ಕೂಡಿದ ಧನಾರ್ಜನೆ. ಹಿರಿಯರ ಆರೋಗ್ಯ ವೃದ್ಧಿ.
ಧನು: ಉತ್ತಮ ವ್ಯಕ್ತಿಗಳ ಒಡನಾಟದಿಂದ ಆತ್ಮಸ್ಥೈರ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ನಿರೀಕ್ಷಿತ ಧನಪ್ರಾಪ್ತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ ಕಾರ್ಯ ಸಾಧಿಸಿಕೊಳ್ಳಬೇಕಾದ ಪರಿಸ್ಥಿತಿ. ದಾಂಪತ್ಯ ತೃಪ್ತಿಕರ.
ಮಕರ: ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ತಾಳ್ಮೆ ವಿವೇಕತೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ.
ಕುಂಭ: ಅನ್ಯರ ಸಹಾಯ ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ನಿರೀಕ್ಷಿತ ಕಾರ್ಯ ಸಾಧಿಸಿಕೊಳ್ಳಿ. ಉತ್ತಮ ಧನಾರ್ಜನೆ ಭೂಮಿ ಕಟ್ಟಡಾದಿ ವ್ಯವಹಾರದಲ್ಲಿ ಪ್ರಗತಿ. ಬಂಧುಗಳ ಬಿಲನ. ಸಾಂಸಾರಿಕ ಸುಖ ವೃದ್ಧಿ. ಗುರು ಹಿರಿಯರ ಆರೋಗ್ಯ ತೃಪ್ತಿಕರ.
ಮೀನ: ಪಾಲುದಾರಿಕ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಸಿ ನಿರ್ಣಯ ಮಾಡುವುದರಿಂದ ಯಶಸ್ಸು. ದಾಂಪತ್ಯದಲ್ಲಿ ಯಾ ಮನೆಯ ವಾತಾವರಣದಲ್ಲಿ ಹೆಚ್ಚಿನ ಚರ್ಚೆಗೆ ಆದ್ಯತೆ ನೀಡದಿರಿ.ಧನಾರ್ಜನೆಗೆ ಅತ್ಯುತ್ತಮ. ಹಿರಿಯರ ಪ್ರೋತ್ಸಾಹ ಆಶೀರ್ವಾದಿಂದ ಅಭಿವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.