ರಾಶಿ ಫಲ; ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸರ್ವವಿಧದ ಯುಕ್ತಿಗಳನ್ನು ಒಳಗೊಂಡ ಕಾರ್ಯವೈಖರಿ
Team Udayavani, Jan 4, 2023, 7:15 AM IST
ಮೇಷ: ಕಾಡು ಬೆಟ್ಟ ಪ್ರದೇಶಗಳ ಮೂಲಕ ಸಂಚಾರ. ಶತ್ರುಗಳಿಗೆ ಸಿಂಹ ಸ್ವಪ್ನ. ತೇಜಸ್ವಿ ಗಾಂಭೀರ್ಯತೆ ಜವಾಬ್ದಾರಿಯುತ ಕಾರ್ಯಶೀಲತೆ. ಗಣ್ಯರೊಂದಿಗೆ ಸಂಪರ್ಕ. ಜನಮನ್ನಣೆ ಕೀರ್ತಿ ಸಂಪಾದನೆ ಬಹು ಧನಾರ್ಜನೆ. ಪರರ ಆಸ್ತಿ ವಿಚಾರದಲ್ಲಿ ಭಾಗಿ.
ವೃಷಭ: ಅಧ್ಯಯನದಲ್ಲಿ ಆಸಕ್ತಿ. ಪಾಂಡಿತ್ಯ ವೃದ್ಧಿ. ಬಹುಗುಣಗಳ ಪ್ರದರ್ಶನ. ರಾಜಕಾರಣಾಸಕ್ತ ಗಣ್ಯರ ಸಹಾಯ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ. ಬಂಧುಮಿತ್ರರ ಸಹಾಯ.
ಮಿಥುನ: ಉತ್ತಮ ಆರೋಗ್ಯ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗಣ್ಯರಿಂದ ಸಮ್ಮಾನ. ವಾಕ್ ಚತುರತೆ. ವಿಚಾರಕ್ಕೆ ಸರಿಯಾದ ಚರ್ಚೆ. ಪಾಂಡಿತ್ಯ ಪ್ರದರ್ಶನ. ಕ್ಷಮಾಗುಣ. ಸರ್ವವಿಧದ ಯುಕ್ತಿಗಳನ್ನು ಒಳಗೊಂಡ ಕಾರ್ಯವೈಖರಿ.
ಕರ್ಕ: ಸುದೃಢ ಆರೋಗ್ಯ. ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಏರಿಳಿತ. ಅಧಿಕಾರ ಚಲಾಯಿಸುವ ಹಂಬಲತೆ. ದೂರದ ವ್ಯವಹಾರಗಳಿಂದ ಧನವೃದ್ಧಿ. ಬಂಧುಮಿತ್ರರೊಂದಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಪರಿಶ್ರಮ.
ಸಿಂಹ: ಆರೋಗ್ಯ ವೃದ್ಧಿ. ಸುಖ ದುಃಖ ಸಹಿಷ್ಣುತೆ. ಪರರ ದ್ರವ್ಯಗಳಲ್ಲಿ ವ್ಯವಹರಿಸುವ ಅವಕಾಶ. ಅತೀ ಬುದ್ಧಿವಂತಿಕೆಯಿಂದ ಉದ್ಯೋಗ ವ್ಯವಹಾರಗಳಲ್ಲಿ ತತ್ಪರತೆ. ಹೆಚ್ಚಿದ ಧನ ಸಂಪಾದನೆ. ಎಲ್ಲರಿಂದಲೂ ಗೌರವ ಸಂಪಾದಿಸುವ ಪ್ರಯತ್ನ. ಧಾರ್ಮಿಕ ವಿಚಾರದಲ್ಲಿ ನೇತೃತ್ವ.
ಕನ್ಯಾ: ಉತ್ತಮ ಆರೋಗ್ಯ. ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಸದಾಸುಖೀಯಾಗಲು ಅಪೇಕ್ಷೆ. ಸಂದಭೋìಚಿತ ಉಪಾಯ ಪ್ರದರ್ಶನ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ.
ತುಲಾ: ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಉದ್ಯೋಗ ವ್ಯವಹಾರಗಳಲ್ಲಿ ಚುರುಕುತನ ಅತೀ ಬುದ್ಧಿವಂತಿಕೆ ಕಂಡೀತು. ಪಾರದರ್ಶಕತೆಗೆ ಆದ್ಯತೆ ನೀಡಿ. ರಾಜಕೀಯ ಕಾರ್ಯಗಳಲ್ಲಿ ಆಸಕ್ತಿ. ನೃತ್ಯ ಸಂಗೀತಾದಿಗಳಿಂದ ಸಂತೋಷ ಲಭಿಸುವುದು.
ವೃಶ್ಚಿಕ: ಸ್ಥಿರ ಸುದೃಢ ಆರೋಗ್ಯ. ಸಮಾಜದಲ್ಲಿ ಗಣ್ಯರಿಂದ ಪುರಸ್ಕೃತ. ಅಧಿಕಾರಯುತ ಜೀವನ ಶೈಲಿ. ಕ್ರೂರ ಸೌಮ್ಯತೆ ವ್ಯಕ್ತಿತ್ವ ಸಂದರ್ಭೋಚಿತವಾಗಿ ನೀಡಿದ ಕಾರ್ಯ ಮುಗಿಸುವ ಛಲ. ನಿರಂತರ ಉದ್ಯಮಶೀಲತೆ. ಅನೇಕ ರೀತಿಯಲ್ಲಿ ಬಹು ಧನ ಸಂಪಾದನೆ. ಹಿರಿಯರಿಗೆ ಹೆಚ್ಚಿನ ಜವಾಬ್ದಾರಿ.
ಧನು: ಉತ್ತಮ ಆರೋಗ್ಯ. ಸಹೋದರರಿಂದ ಸಂತೋಷ. ಉದಾರತೆಯ ಕಾರ್ಯ ಪ್ರವೃತ್ತಿಯಿಂದ ಜನಮನ್ನಣೆ. ಕೀರ್ತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನ ಸಂಪತ್ತಿನ ವಿಚಾರದಲ್ಲಿ ಗಣನೀಯ ವೃದ್ಧಿ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ.
ಮಕರ: ಆರೋಗ್ಯ ಗಮನಿಸಿ. ಆಸ್ತಿ ವಿಚಾರಗಳಲ್ಲಿ ತಾಳ್ಮೆಯ ನಡೆ ಅಗತ್ಯ. ಬಂಧುಗಳ ಜವಾಬ್ದಾರಿ ತೋರೀತು. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖಕ್ಕೆ ಪರಸ್ಪರ ಸಹಕಾರ ಅಗತ್ಯ. ಗುರುಹಿರಿಯರ ಆರೋಗ್ಯ ಸ್ಥಿರ. ಸಂದರ್ಭೋಚಿತ ಸಲಹೆ ಸಹಕಾರ ಲಭ್ಯ.
ಕುಂಭ: ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಉತ್ತಮ ಅಭಿವೃದ್ಧಿದಾಯಕ ಬದಲಾವಣೆ ಸಂಭವ. ನಿರೀಕ್ಷಿತ ಧನಾರ್ಜನೆ. ಸಹೋದರಾದಿ ಸುಖ ಪ್ರಾಪ್ತಿ. ಮಕ್ಕಳಿಂದ ಸ್ಥಿರ ಪ್ರದರ್ಶನ.
ಮೀನ: ಆರೋಗ್ಯ ವೃದ್ಧಿ ಆದರೂ ನಿರ್ಲಕ್ಷ್ಯ ತೋರದಿರಿ. ಜನಪದರೊಂದಿಗೆ ಸರಿಯಾದ ಸಂಬಂಧ ಬೆಳೆಸುವುದರೊಂದಿಗೆ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಿಗೆ ಧನವ್ಯಯ. ಅನ್ಯರ ಸಹಾಯ ನಿರೀಕ್ಷಿಸದಿರಿ. ಸಾಂಸಾರಿಕ ಸುಖ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.