ರಾಶಿ ಫಲ; ಸಂಚಾರದಿಂದ ನಿರೀಕ್ಷಿತ ಸಫಲತೆ, ಉತ್ತಮ ಧನಾರ್ಜನೆ
Team Udayavani, Jan 8, 2023, 7:48 AM IST
ಮೇಷ: ವಿದ್ಯಾ ಜ್ಞಾನ ವೃದ್ಧಿ. ನಾಯಕತ್ವ ಗುಣಗಳಿಂದ ಕಾರ್ಯ ಕ್ಷೇತ್ರದಲ್ಲಿ ಸರ್ವಜನರಿಂದ ಗೌರವ. ಭಾÅತೃಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಪ್ರಯಾಣ ಸುಖಕರ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವ ಯೋಗ.
ವೃಷಭ: ಉದ್ಯೋಗದಲ್ಲಿ ಉತ್ತಮ ಬದಲಾವಣೆಗೆ ಅವಕಾಶ. ಸ್ವಾವಲಂಬಿಗಳಾಗಿ ಕಾರ್ಯ ಸಾಧಿಸಿಕೊಳ್ಳುವ ಕಾಲ. ನೂತನ ಮಿತ್ರರ ಸಮಾಗಮ. ಗೃಹೋಪವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ, ದಂಪತಿಗಳಿಗೆ, ಆಹಾರೋದ್ಯಮ ಕೃಷಿ ಹೈನುಗಾರರಿಗೆ ಶುಭ.
ಮಿಥುನ: ಸಂಚಾರದಿಂದ ನಿರೀಕ್ಷಿತ ಸಫಲತೆ. ಉತ್ತಮ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ಪ್ರೋತ್ಸಾಹ. ಉದಾರತೆಯಿಂದಲೂ ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ.
ಕರ್ಕ: ಧಾರ್ಮಿಕ ಸಾಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೇ ತಾಳ್ಮೆ ಸಮಾದಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಮಹತ್ವ.
ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫಲತೆ. ನಿರೀಕ್ಷಿತ ಧನಾಗಮ, ಸಹೋದರಾದಿ ಸಮಾನರಿಂದಲೂ ಕಾರ್ಮಿಕರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.
ಕನ್ಯಾ: ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ.
ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.
ವೃಶ್ಚಿಕ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಗೌರವ.
ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ.
ಮಕರ: ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು. ಜನಮನ್ನಣೆ. ಉತ್ತಮ ವಾಕ್ ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ ಪ್ರಯಾಣ ಯೋಗ.
ಕುಂಭ: ಆರೋಗ್ಯ ವೃದ್ಧಿ. ಉತ್ತಮ ಕಾರ್ಯಚಟುವಟಿಕೆಯಿಂದ ಕೂಡಿದ ದಿನಚರಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳ ನೇತೃತ್ವ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ದಾಂಪತ್ಯ ಸುಖ ತೃಪ್ತಿ. ವಿದ್ಯಾರ್ಥಿಗಳಿಗೆ ಶ್ರಮಪಟ್ಟರೆ ಶ್ರೇಯ.
ಮೀನ: ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ. ಉತ್ತಮ ಧನಾರ್ಜನೆ ಹಾಗೂ ಅಧಿಕ ಉಳಿತಾಯ. ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗಿ. ಗುರುಹಿರಿಯರಲ್ಲಿ ಆರೋಗ್ಯ ಸುಧಾರಣೆ. ದಾಂಪತ್ಯ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಸ್ಥಾನ ಸುಖ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.