ಶನಿವಾರದ ರಾಶಿ ಫಲ; ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ, ನಿರೀಕ್ಷಿತ ಧನಾಗಮನ
Team Udayavani, Nov 26, 2022, 7:14 AM IST
ಮೇಷ: ಉದ್ಯೋಗ ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಆರೋಗ್ಯ ಗಮನಿಸಿ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಉತ್ತಮ ಆದಾಯ, ಧನವೃದ್ಧಿ. ಬಂಧು-ಮಿತ್ರರ ಪ್ರೋತ್ಸಾಹ. ಧಾರ್ಮಿಕ ವಿಚಾರದಲ್ಲಿ ನಿಷ್ಠೆ, ಶ್ರದ್ಧೆ.
ವೃಷಭ: ದೇವತಾ ಕಾರ್ಯದಲ್ಲಿ ತಲ್ಲೀನತೆ. ಜನಮನ್ನಣೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ಕೀರ್ತಿ ಸಂಪಾದನೆ. ಧನಾರ್ಜನೆ ವೃದ್ಧಿ. ಗುರುಹಿರಿಯರ ಮಾರ್ಗದರ್ಶನದಂತೆ ನಡೆದು ಸಂತೋಷ ವೃದ್ಧಿ.
ಮಿಥುನ: ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನಾಗಮನ. ಸಹೋದ್ಯೋಗಿಗಳಿಂದ ಸಹಕಾರ. ಭೂಮ್ಯಾದಿ ಆಸ್ತಿ ವಿಚಾರ ಪ್ರಗತಿ. ಸಂಶೋಧಕ ಪ್ರವೃತ್ತಿಯವರರಿಗೆ ಸೌಕರ್ಯಾದಿ ವೃದ್ದಿ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ.
ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ತಲ್ಲೀನತೆ. ನಿರೀಕ್ಷಿತ ಯಶಸ್ಸು ಲಭ್ಯ. ಆರ್ಥಿಕ ಸಧೃಡತೆ. ಮಕ್ಕಳಿಂದಲೂ ವಿದ್ಯಾರ್ಥಿಗಳಿಂದಲೂ ಹಿರಿಯರಿಗೆ ಸಂತೋಷ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ.
ಸಿಂಹ: ಸ್ಥಿರ ಬುದ್ಧಿ. ದೃಢತೆಯಿಂದ ಕೂಡಿದ ಕಾರ್ಯ ವೈಖರಿ. ಸ್ಥಾನಮಾನ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ. ಮಾತಿನಲ್ಲಿ ಸಹನೆ ತಾಳ್ಮೆ ವಹಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ. ಗೃಹೋಪಕರಣ ವಸ್ತುಗಳ ಸಂಗ್ರಹ.
ಕನ್ಯಾ: ಪಾಲುದಾರಿಕಾ ವ್ಯವಹಾರದಲ್ಲಿ ಸಂಶಯಕ್ಕೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ. ಉತ್ತಮ ಧನಸಂಚಯನ ಹಾಗೂ ಹೂಡಿಕೆಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅನುಕೂಲಕರ ವಾತಾವರಣ.
ತುಲಾ: ಹಠಮಾರಿತನ ಮಾಡದೇ ಕಾರ್ಯ ಪ್ರವೃತ್ತರಾಗಿ. ಅನಾವಶ್ಯಕ ವಾಗ್ವಾದಕ್ಕೆ ಅವಕಾಶ ನೀಡದಿರಿ. ಬಂಧು ಮಿತ್ರರಿಂದ ಸಹಕಾರ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ವೃಶ್ಚಿಕ: ಬಂಧು ಮಿತ್ರರ ಭೇಟಿ. ಭೂ ಸಂಬಂಧೀ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಉತ್ತಮ ಧನಾರ್ಜನೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನ್ಯೋನ್ಯತೆ. ಮಕ್ಕಳಿಂದ ಹೆಚ್ಚಿದ ಸುಖ, ಸಂತೋಷ.
ಧನು: ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ನಿರೀಕ್ಷಿತ ಧನಸಂಪತ್ತು ಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಗುರುಹಿರಿಯರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಹೆತ್ತವರಿಗೆ ಹೆಚ್ಚಿದ ಸುಖ.
ಮಕರ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ನಿರೀಕ್ಷೆಯಂತೆ ಪ್ರಗತಿ. ಯೋಜನೆಗಳ ಸಫಲತೆ. ದೂರದ ಧನಸಂಪತ್ತು ಪ್ರಾಪ್ತಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ದಾಂಪತ್ಯ ತೃಪ್ತಿಕರ. ಮಕ್ಕಳ ನಿಮಿತ್ತ ಹೆಚ್ಚಿದ ನೆಮ್ಮದಿ.
ಕುಂಭ: ಸ್ಥಿರ, ಉತ್ತಮ ಆರೋಗ್ಯ. ಅಧ್ಯಯನದಲ್ಲಿ ತತ್ಪರತೆ. ಮಕ್ಕಳಿಗೆ ಹೆಚ್ಚಿದ ಸೌಕರ್ಯ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಉತ್ತಮ ಪ್ರಗತಿ. ಹೆಚ್ಚಿದ ವರಮಾನ. ದಾಂಪತ್ಯ ತೃಪ್ತಿದಾಯಕ. ಗುರುಹಿರಿಯರ ರಕ್ಷೆ ಲಭ್ಯ.
ಮೀನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೀರ್ಘ ಪ್ರಯಾಣ. ದೂರದ ವ್ಯವಹಾರಗಳಿಂದ ಅನಿರೀಕ್ಷಿತ ಧನಾಗಮ. ಖರ್ಚುವೆಚ್ಚಗಳಲ್ಲಿ ಮುಂಜಾಗ್ರತೆ ವಹಿಸಿ. ದಾಂಪತ್ಯ ಸುಖ ವೃದ್ದಿ. ಮಕ್ಕಳಿಂದ ಉತ್ತಮ ಪ್ರಗತಿದಾಯಕ ಬದಲಾವಣೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.