ಕೋವಿಡ್ 19 : ನೆಗೆಟಿವ್ ಆದವನು ಪಾಸಿಟಿವ್ ಆಗೋದು ಹೇಗೆ?
Team Udayavani, Apr 19, 2020, 1:00 PM IST
ಸಿಯೋಲ್: ಕೋವಿಡ್-19ರಿಂದ ಚೇತರಿಸಿ ಕೊಂಡ 163 ಜನರಲ್ಲಿ ಮತ್ತೆ ಸೋಂಕು ಮರುಕಳಿ ಸಿದ್ದು ಹೇಗೆ ಎಂದು ಕೊರಿಯಾ ಸೆಂಟರ್ì ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನÒನ್ (ಕೆಸಿಡಿಸಿ) ತಿಳಿಯಲು ಹೊರಟಿದೆ.
ಚೀನದಲ್ಲಿಯೂ ಇದೇ ದಾಖಲಾಗಿದೆ. ಅಲ್ಲಿ ಕೆಲವು ವೈರಸ್ ಸೋಂಕಿತರು ಚೇತರಿಸಿಕೊಂಡಿದ್ದರು. ಅನಂತರ ಅವರಲ್ಲಿ ಪಾಸಿಟಿವ್ ಪತ್ತೆಯಾಯಿತು. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹಾಗಾದರೆ ಸೋಂಕಿತರಾಗಿದ್ದುಕೊಂಡು ಗುಣಮುಖರಾದರೂ ಅಪಾಯದಿಂದ ಪಾರಾದಂತೆ ಅಲ್ಲವೇ ಎಂಬ ಪ್ರಶ್ನೆ ಹುಟ್ಟಿಸಿದೆ. ಕೆಸಿಡಿಸಿ ಒಂದೇ ಕುಟುಂಬದಿಂದ ಮೂರು ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಿದೆ. ಅಲ್ಲಿ ರೋಗಿಗಳು ಚೇತರಿಸಿಕೊಂಡ ಅನಂತರ ಪಾಸಿಟಿವ್ ಪರೀಕ್ಷೆ ನಡೆಸಿ¨ªಾರೆ.
ಈ ಮೂವರಲ್ಲಿ ಯಾವುದೇ ಸೋಂಕು ಆರಂಭದಲ್ಲಿ ಪತ್ತೆಯಾಗಿರಲಿಲ್ಲ. ಅನೇಕ ದೇಶಗಳಂತೆ, ದಕ್ಷಿಣ ಕೊರಿಯಾವು ವೈರಸ್ ಅನ್ನು ಪರೀಕ್ಷಿಸಲು ರಿವರ್ಸ್ ಟ್ರಾನ್ಸಿ$ðಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ಟಿ-ಪಿಸಿಆರ್) ಅನ್ನು ಬಳಸುತ್ತಿದೆ.
ಕ್ವಾನ್ ಪ್ರಕಾರ, ಸೋಂಕಿತ ವ್ಯಕ್ತಿಯು ಚೇತರಿ ಸಿಕೊಂಡ ಬಳಿಕವೂ ಆರ್‌ಎನ್‌ಎ ದ ಭಾಗಗಳನ್ನು ಬಳ ಸುತ್ತಿರಬಹುದು. ಇಂತಹ ಸಂದರ್ಭ ಸೋಂಕು ಈ ಭಾಗದಲ್ಲಿ ಇಲ್ಲದೇ ಇದ್ದಿರಬಹುದು. ದೇಹದ ಇತರ ಭಾಗದಲ್ಲಿದ್ದರೆ ಈ ಸಮಸ್ಯೆ ಆಗುತ್ತದೆ ಎಂದಿದೆ.
2 ನೆಗೆಟಿವ್ ಪರೀಕ್ಷೆ ಕಡ್ಡಾಯ
ಸದ್ಯಕ್ಕೆ ದಕ್ಷಿಣ ಕೊರಿಯಾ ಕೆಸಿಡಿಸಿ ಉಳಿದ ಪ್ರಕರಣಗಳನ್ನು ನಿರ್ಣಾಯಕ ಹಂತಕ್ಕೆ ಕೊಂಡುಹೋಗುತ್ತಿದೆ. ಡೇಜಿಯಾನ್ ನಗರದಲ್ಲಿ ಆಸ್ಪತ್ರೆಗೆ ದಾಖಲಾದ ಜಿನ್ ಕಿಮ್ ಮಾರ್ಚ್ 25ರಂದು ಕೋವಿಡ್ 19ನ ಪಾಸಿಟಿವ್ ಎಂದು ಗುರುತಿಸಲ್ಪಟ್ಟರು. ಈ ವಾರದ ಪರೀಕ್ಷೆಯಲ್ಲಿ ಅವರು ನೆಗೆಟಿವ್ ಆಗಿದ್ದಾರೆ. ಆದರೆ ಒಂದು ದಿನದ ಬಳಿಕ ಅವರು ಮತ್ತೆ ಪಾಸಿಟಿವ್ ಪರೀಕ್ಷೆಗೆ ಒಳಪಟ್ಟರು. 25 ವರ್ಷ ವಯಸ್ಸಿನವರು ಕನಿಷ್ಟ ಎರಡು ಪರೀಕ್ಷೆ ಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅವರು ಚೇತರಿಸಿ ಕೊಳ್ಳಬೇಕಾದರೆ ಅಥವಾ ಕೊರೊನಾ ಮುಕ್ತ ರಾಗಬೇಕಾದರೆ 2 ಪರೀಕ್ಷೆಗಳಲ್ಲಿ ನೆಗೆಟಿವ್ ಬರ ಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಅನಂತರ ಎರಡು ವಾರಗಳವರೆಗೆ ಪ್ರತ್ಯೇಕ ವಾಸದ ಲ್ಲಿರಲು ಸರಕಾರ ಶಿಫಾರಸು ಮಾಡುತ್ತದೆ.
ಮತ್ತೆ ಪಾಸಿಟಿವ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದೆ. ಇಲ್ಲಿ ದ್ವಿತೀಯ ಅಥವಾ ತೃತೀಯ ಪ್ರಸರಣದ ಅಪಾಯವಿಲ್ಲ ಎಂದು ದಕ್ಷಿಣ ಕೊರಿಯಾದ ವೈದ್ಯರು ಹೇಳಿದ್ದಾರೆ. ಸೋಂಕಿತ ಮತ್ತು ಚೇತರಿಸಿಕೊಂಡ ಜನರಿಂದ 400 ಮಾದರಿಗಳನ್ನು ಪರೀಕ್ಷಿಸಲು ಕೆಸಿಡಿಸಿ ಮುಂದಾಗಿದೆ.
ಸಾಧ್ಯತೆಗಳೇನು?
ರೋಗಿಗಳು ಧನಾತ್ಮಕವಾಗಿ ಮರುಪರಿಶೀಲಿಸುವ ಪ್ರಕ್ರಿಯೆ ಗಳಲ್ಲಿ ದೋಷವಿರಬಹುದು. ವೈರಸ್ ಅನ್ನು ಗುರುತಿಸಲು ಅವರು ವಿಫಲವಾಗಿರುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ದೋಷ ವಿದ್ದರೆ, ರೋಗಿಗಳು ನೆಗೆಟಿವ್ ಮತ್ತು ದೃಢಿಕರಣವಲ್ಲದ ಪಾಸಿಟಿವ್ ಪಡೆಯ ಬಹುದು. ಪರೀಕ್ಷೆಯಲ್ಲಿ ಬಳಸಿದ ರಾಸಾಯನಿಕಗಳೊಂದಿಗಿನ ಸಮಸ್ಯೆಗಳು ಮತ್ತು ಪರೀಕ್ಷೆಯಿಂದ ಗುರುತಿಸಲಾಗದ ರೀತಿಯಲ್ಲಿ ವೈರಸ್ ರೂಪಾಂತರಗೊಳ್ಳುವ ಸಾಧ್ಯತೆ ಸೇರಿದಂತೆ ಇದು ಸಂಭವಿಸಲು ಹಲವಾರು ಕಾರಣಗಳಿವೆ ಎನ್ನುತ್ತವೆ ವೈದ್ಯಕೀಯ ಮೂಲಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.