![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 9, 2021, 6:50 AM IST
ಇತಿಹಾಸದಿಂದ ನಾವು ಪಾಠ ಕಲಿಯಬೇಕು. 1918ರ “ಸ್ಪಾನಿಶ್ ಫ್ಲೂ’ ಎನ್ನುವ ಸಾಂಕ್ರಾಮಿಕ ಪ್ರಪಂಚದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಆಗ ಸಹ ಮೊದಲನೇ ಅಲೆ ಮುಗಿದ ಬಳಿಕ ಜನರು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಬಿಟ್ಟರು. ಹಾಗಾಗಿ ಎರಡನೇ ಅಲೆಯಲ್ಲಿ ಅತೀ ಹೆಚ್ಚಿನ ಸಾವು ನೋವು ಸಂಭವಿಸಿದವು. ಆ ಬಳಿಕ ಎಚ್ಚೆತ್ತು ಕೊಂಡ ಕಾರಣ ಮೂರನೇ ಅಲೆ ಸ್ವಲ್ಪ ಮಟ್ಟಿನ ಹಾನಿ ಮಾಡಿತು. ಆದರೂ ಹಲವು ತಿಂಗಳುಗಳ ಕಾಲ ಆತಂಕ ಇದ್ದೇ ಇತ್ತು.
ಭಾರತದಲ್ಲಿ ಸಹ ಕೊರೊನಾ ಮೊದಲನೇ ಅಲೆ ಮುಗಿದ ಬಳಿಕ ಕೊರೊನಾ ಹೋಯಿತೆಂದೇ ಜನರು ಭಾವಿಸಿದರು. ಎಲ್ಲ ಮುನ್ನೆಚ್ಚರಿಕೆಗಳನ್ನು ಮರೆತರು. ಒಬ್ಬರಿಂದ ಒಬ್ಬರಿಗೆ ಹರಡುವಂತಹ ಈ ವೈರಸ್ ನಮ್ಮ ಶತಪ್ರಯತ್ನದ ಹೊರತಾಗಿ ಬಿಟ್ಟು ಹೋಗದು. ಮೊದಲನೇ ಅಲೆಗಿಂತ ಹೆಚ್ಚು ಸಾವು-ನೋವು ಈಗ ಆಗುತ್ತಿರು ವುದನ್ನು ನಾವು ಕಾಣುತ್ತಿದ್ದೇವೆ. ಈಗ ಎರಡನೇ ಅಲೆ ಮುಗಿ ಯುತ್ತಿರುವ ಹಂತದಲ್ಲಿರುವಾಗ ಮುಂದೆ ಹೇಗಿರಬೇಕೆಂಬುದರ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುವುದು ಸೂಕ್ತ. ಈಗಿನ ಅಂದಾಜಿನ ಪ್ರಕಾರ ಮೂರನೇ ಅಲೆ ಬಹುಶಃ ಅಕ್ಟೋಬರ್‌ನಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಸಮಾಜ ಮತ್ತು ಸರಕಾರಗಳು ಅದರ ತೀವ್ರತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಾದ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
ಸಾಮಾಜಿಕ ಜವಾಬ್ದಾರಿ
ಪ್ರತಿಯೊಬ್ಬರೂ ಅವರವರ ಸಾಮಾಜಿಕ ಹೊಣೆ ಅರಿತು ತಮ್ಮ ಸುರಕ್ಷೆ, ತಮ್ಮ ಹತ್ತಿರದವರ ಹಾಗೂ ಕುಟುಂಬದವರ ಸುರಕ್ಷೆಯ ಬಗ್ಗೆ ಕಾಳಜಿ ವಹಿಸಬೇಕು. ಮಾಸ್ಕ್ಗಳ ಸರಿಯಾದ ಉಪಯೋಗ, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಗುಂಪು ಗಳಿಂದ ದೂರ ಉಳಿಯುವುದೂ ಅತೀ ಮುಖ್ಯ. ಅನಾವಶ್ಯಕ ಹಾಗೂ ಅದ್ದೂರಿ ಸಮಾರಂಭಗಳಿಂದ ದೂರವಿರ ಬೇಕು. ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು. ನಮ್ಮ ಜವಾಬ್ದಾರಿಯ ವರ್ತನೆಗಳಿಂದ ಸಾವು-ನೋವುಗಳನ್ನು ಕಡಿಮೆ ಮಾಡಬಹುದು. ಲಾಕ್-ಡೌನ್‌ನಂತಹ ಕ್ರಮಗಳಿಂದ ದೇಶದ ಆರ್ಥಿಕತೆ, ಜನಜೀವನದ ಮೇಲಾಗುವ ಪರಿಣಾಮ, ಶೈಕ್ಷಣಿಕ ಅವ್ಯವಸ್ಥೆಯನ್ನು ತಪ್ಪಿಸಬಹುದು.
ಲಸಿಕೆಗಳ ಲಭ್ಯತೆ
ಈ ಸೋಂಕಿನ ಅಲೆಗಳನ್ನು ತಡೆಯಲು ನಮ್ಮಲ್ಲಿರುವ ಅತ್ಯಂತ ಪ್ರಬಲ ಸಾಧನವೆಂದರೆ ಲಸಿಕೆ. ರೂಪಾಂತರಿತ ವೈರಸ್‌ಗಳ ವಿರುದ್ಧ ಸಹ ಈ ಲಸಿಕೆಗಳು ತಕ್ಕಮಟ್ಟಿಗೆ ರಕ್ಷಣೆ ನೀಡುತ್ತವೆ. ಆದರೆ ಜನಸಂಖ್ಯೆ ಹೆಚ್ಚಿರುವ ನಮ್ಮ ದೇಶದ ಎಲ್ಲರಿಗೂ ಕೆಲವೇ ತಿಂಗಳುಗಳಲ್ಲಿ ಲಸಿಕೆ ನೀಡಲು ಅಗತ್ಯ ಪ್ರಮಾಣದ ಲಸಿಕೆ ಉತ್ಪಾದಿಸುವಂಥ ಕಂಪೆನಿಗಳಿಲ್ಲ. ಆದ್ದರಿಂದ ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸುವ ಜತೆಯಲ್ಲೇ ಬೇರೆ ದೇಶಗಳಿಂದ ತಯಾರಾದ ಲಸಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು.
ಪರೀಕ್ಷಾ ಸಾಮರ್ಥ್ಯದ ಹೆಚ್ಚಳ
ಕಳೆದ ವರ್ಷಕ್ಕಿಂತ 2021ರಲ್ಲಿ ಕೋವಿಡ್ ಸೋಂಕು ಪತ್ತೆ ಹಚ್ಚುವ ಪರೀಕ್ಷೆ ನಡೆಸುವ ಸಾಮರ್ಥಯ ಹೆಚ್ಚಾಗಿದೆ. ಆದರೂ ಸಾಮರ್ಥ್ಯ ಇನ್ನಷ್ಟು ಹೆಚ್ಚಬೇಕಿದೆ. ಎಲ್ಲರಿಗೂ ಲಸಿಕೆ ಹಾಕುವವರೆಗೆ, ಈ ಸೋಂಕನ್ನು ಗುರುತಿಸುವುದು ಹಾಗೂ ಈ ಸೋಂಕಿತರನ್ನು ಕಟ್ಟುನಿಟ್ಟಾಗಿ ಐಸೊಲೇಶನ್ ಮಾಡುವುದೇ ಸೂಕ್ತ ಉಪಾಯ. ಅದಕ್ಕಾಗಿ ಪ್ರತೀ ತಾಲೂಕು ಮಟ್ಟದಲ್ಲಿ ಪರೀಕ್ಷಾ ವ್ಯವಸ್ಥೆ ಇರಬೇಕು. ಅದಕ್ಕೆ ಅಗತ್ಯ ಉಪಕರಣಗಳು, ತರಬೇತಿ ಮತ್ತು ಟೆಸ್ಟ್ ಕಿಟ್‌ಗಳ ಲಭ್ಯತೆ ಹಾಗೂ ವಿತರಣೆ ಶೀಘ್ರವೇ ಆಗಬೇಕು.
ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗಳ ವರೆಗೆ ಪ್ರತೀ ಆಸ್ಪತ್ರೆಯಲ್ಲೂ ಮೂಲಸೌಕರ್ಯಗಳ ವೃದ್ಧಿ, ಆರೋಗ್ಯ ಸೇವೆಗಳನ್ನು ಬಲಪಡಿಸಲು ಮಾನವ ಸಂಪನ್ಮೂಲಗಳ ತರಬೇತಿ, ಆವಶ್ಯಕ ಉಪಕರಣಗಳು ಹಾಗೂ ಔಷಧ ಸಾಮಗ್ರಿಗಳ ಲಭ್ಯತೆಯ ಬಗ್ಗೆ ಸರಕಾರಗಳು ಆದ್ಯತೆ ನೀಡಬೇಕು. ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಿದರೆ ದೊಡ್ಡ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾದೀತು. ತರುವಾಯ ಸಮಾಜದ ಎಲ್ಲ ಆರೋಗ್ಯ ಅಗತ್ಯಗಳ ಶೇ.90ಕ್ಕಿಂತಲೂ ಹೆಚ್ಚಿನ ಬೇಡಿಕೆಯನ್ನು ಪ್ರಾಥಮಿಕ ಹಂತದಲ್ಲೇ ನಿರ್ವಹಿಸಬಹುದು. ಉಪಕರಣಗಳಿಂದ ಮಾತ್ರ ಆಸ್ಪತ್ರೆಗಳ ಸಶಕ್ತೀಕರಣ ಆಗದು. ವೈದ್ಯರು, ದಾದಿಯರು ಹಾಗೂ ಇತರ ವೈದ್ಯಕೀಯ ಸಿಬಂದಿಯ ನೇಮಕಾತಿ, ಪೂರೈಕೆ, ತರಬೇತಿ ಎಲ್ಲವೂ ಅಗತ್ಯ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುಣಮಟ್ಟದ ಸೇವೆ ಸಿಗುವಂತೆ ಮಾಡಲು ಸರಕಾರ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ದೇಶದ ಹಾಗೂ ಪ್ರತೀ ರಾಜ್ಯದ ವಾರ್ಷಿಕ ಬಜೆಟ್‌ಗಳಲ್ಲಿ ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಈಗಿರುವ ಶೇ. ಒಂದರಷ್ಟು ಹಂಚಿಕೆಯನ್ನು ಕನಿಷ್ಠ ಪಕ್ಷ ಮುಂದಿನ ಹತ್ತು ವರ್ಷಗಳ ಕಾಲ ಶೇ. ಮೂರಕ್ಕೆ ಏರಿಸಬೇಕು.
ವೈದ್ಯಕೀಯ ರಕ್ಷಣ ಸಾಧನಗಳ ಗುಣಮಟ್ಟ
ಮೊದಲನೆಯ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ರಕ್ಷಣ ಸಾಧನಗಳ ಅಲಭ್ಯತೆಯಿಂದಾಗಿ ಬಹಳ ಸಂಕಷ್ಟ ಕಾಣಿಸಿಕೊಂಡಿದ್ದರೂ ಅವುಗಳನ್ನು ಬಹಳ ಬೇಗನೆ ತಯಾರು ಮಾಡುವಂತಹ ಸಾಮರ್ಥ್ಯವನ್ನು ನಮ್ಮ ದೇಶದಲ್ಲಿ ಕಂಡೆವು. ಶ್ರೇಷ್ಠ ಗುಣಮಟ್ಟದ ಮಾಸ್ಕ್ಗಳು, ಪಿಪಿಇ ಕಿಟ್‌ಗಳು ಇತ್ಯಾದಿ ವೈದ್ಯಕೀಯ ರಕ್ಷಣ ಸಾಧನಗಳ ಲಭ್ಯತೆಯನ್ನು ಕಾಪಾಡಿಕೊಳ್ಳಬೇಕು.
ವೈದ್ಯಕೀಯ ಉಪಕರಣಗಳ ಲಭ್ಯತೆ
ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬೇಕಾಗುವಂತಹ ಹಲವು ಉಪಕರಣಗಳನ್ನು ಸಮರ್ಪಕವಾಗಿ ಸಕಾಲದಲ್ಲಿ ವಿತರಿಸಬೇಕು. ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ಸೂಕ್ತವಾದ ಉತ್ತಮ ಗುಣಮಟ್ಟದ ಆಕ್ಸಿಜನ್ ಮಾಸ್ಕ್, ಎನ್‌ಐವಿ ಮಾಸ್ಕ್, ವೆಂಟಿಲೇಟರ್‌ಇತ್ಯಾದಿ ಪೂರೈಕೆ ಆವಶ್ಯಕ. ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಐಸಿಯು ಹಾಗೂ ಎಚ್‌ಡಿಯುಗಳ ಸಂಖ್ಯೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿ ಅಲ್ಲಿನ ವೈದ್ಯಕೀಯ ಸಿಬಂದಿಗೆ ಹೆಚ್ಚುವರಿ ವೈದ್ಯಕೀಯ ಹಾಗೂ ತಾಂತ್ರಿಕ ತರಬೇತಿಯನ್ನು ನೀಡಬೇಕು.
ಆಕ್ಸಿಜನ್‌ನ ಸಮರ್ಪಕ ಪೂರೈಕೆ
ಎರಡನೇ ಅಲೆಯಲ್ಲಿ ನಾವು ನೋಡಿದ ಅತೀ ದುರದೃಷ್ಟಕರ ಘಟನೆಗಳಲ್ಲಿ ಒಂದೆಂದರೆ ಆಕ್ಸಿಜನ್ ಪೂರೈಕೆ ನಿಂತು ರೋಗಿಗಳು ಸಾವನ್ನಪ್ಪಿದುದು. ಈ ಸಂಕಷ್ಟ ಮರುಕಳಿಸದಿರಲು ವೈದ್ಯಕೀಯ ಆಕ್ಸಿಜನ್‌ನ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣೆ ಸಮರ್ಪಕವಾಗಿರಬೇಕು. ಆಕ್ಸಿಜನ್ ವಿತರಣೆಗೆ ಬೇಕಾಗುವ ಆಕ್ಸಿಜನ್ ಟ್ಯಾಂಕರ್‌ಗಳು ಹಾಗೂ ಸಿಲಿಂಡರ್‌ಗಳ ಲಭ್ಯತೆ ಹೆಚ್ಚಾಗಬೇಕು. ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಬಳಸಿ ರೋಗಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಬೇಕು.
ಜೀವ ಉಳಿಸುವ ಔಷಧಗಳ ಪೂರೈಕೆ
ಎರಡನೇ ಅಲೆ ಸಂದರ್ಭದಲ್ಲಿ ರೆಮಿಡಿಸಿವಿರ್ ಔಷಧ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕೆಲವೇ ವಾರಗಳಲ್ಲಿ ಉತ್ಪಾದನೆ ಹೆಚ್ಚಿಸಲಾಯಿತು. ಜೀವರಕ್ಷಕಗಳಾದ ಡೆಕ್ಸಾಮೆಥಸೋನ್ ಹಾಗೂ ಮಿಥೈಲ್ ಪ್ರಡ್ನಿಸೊಲೋನ್, ರಕ್ತ ಹೆಪ್ಪುಗಟ್ಟುವುದನ್ನು ಕಡಿಮೆ ಮಾಡುವ ಹೆಪಾರಿನ್ ಹಾಗೂ ಎನಾಕ್ಸಪಾರಿನ್‌ಗಳ ಕೊರತೆಯ ಭಯ ಉಂಟಾಗಿದ್ದರೂ ಸಹ ಅವುಗಳ ಪೂರೈಕೆ ಹೆಚ್ಚಿಸಲಾಯಿತು. ಮೂರನೇ ಅಲೆಯಲ್ಲಿ ಇಂತಹ ಅತೀ ಆವಶ್ಯಕ ಔಷಧಗಳ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕವಾಗಿರಬೇಕು.
ಸಾಕ್ಷ್ಯಾಧಾರಿತ ಔಷಧ ಪದ್ಧತಿ ಮಾರ್ಗಸೂಚಿ
ಸಾಕ್ಷ್ಯಾಧಾರಿತ ಔಷಧ ಪದ್ಧತಿಯ ಮಾರ್ಗಸೂಚಿಗಳು (Evidence Based Medicine Guidelines) ) ರಾಷ್ಟ್ರೀಯ ಮಟ್ಟದಲ್ಲಿ ಅತ್ಯಾವಶ್ಯಕ. ಈ ಮಾರ್ಗಸೂಚಿ ಸಂಶೋಧನೆಗಳಿಂದ ಆಧಾರಿತವಾಗಿ ವಿಶ್ವಾಸಾರ್ಹ ಮೂಲಗಳಿಂದ ಹೊರ ಬಂದು ಎಲ್ಲರಿಂದಲೂ ಸ್ವೀಕಾರಾರ್ಹವಾಗಿರಬೇಕು. ಇದಿಲ್ಲದಿದ್ದಾಗ ಅನಾವಶ್ಯಕವಾದ ಹಾಗೂ ಪುರಾವೆ ಯಿಲ್ಲದ ಔಷಧಗಳ ಬಳಕೆ ಹೆಚ್ಚಾಗಿ ಅವುಗಳ ಅಡ್ಡ ಪರಿಣಾಮ ಉಂಟಾಗಬಹುದು.
ಕೊನೆಮಾತು – ಕಿವಿಮಾತು
ಇದುವರೆಗೆ ಮಾನವ ಕುಲಕ್ಕೆ ಕಂಟಕವಾಗಿದ್ದಂತಹ ಎಲ್ಲ ಸಾಂಕ್ರಾಮಿಕಗಳು ಸಹ ಕೊನೆಗೊಂಡಿವೆ. ಈ ಸಾಂಕ್ರಾಮಿಕದ ಅಂತ್ಯವನ್ನೂ ನಾವು ಕಾಣುತ್ತೇವೆ. ಆದರೆ ಅಲ್ಲಿಯವರೆಗೂ ನಾವು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದಿರಬೇಕು. ಮುಂದಿನ ಕೋವಿಡ್-19 ಅಲೆಗಳನ್ನು ತಪ್ಪಿಸಲಾಗದಿದ್ದರೂ ಅವನ್ನು ವಿಳಂಬ ಗೊಳಿಸಬಹುದು ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು. ಇಲ್ಲದಿದ್ದಲ್ಲಿ ಜನ ಜೀವನ, ಆರ್ಥಿಕತೆ ಎಲ್ಲವೂ ವಿನಾಶದ ಹಂತಕ್ಕೆ ತಲುಪಬಹುದು.
ಮುಂದಿನ ಅಲೆಗಳನ್ನು ಎದುರಿಸುವುದು ಅನಿವಾರ್ಯ. ಆದರೆ ಅವುಗಳು ಸೌಮ್ಯವೋ, ಉಗ್ರವೋ ಎಂಬುದನ್ನು ಈಗಲೇ ಹೇಳಲಾಗದು. ಮುಂದಿನ ಕೆಲವು ತಿಂಗಳುಗಳಲ್ಲಿ ಎಷ್ಟು ಜನರು ಲಸಿಕೆ ಹಾಕಿಸಿಕೊಳ್ಳುತ್ತಾರೆ, ಎಷ್ಟು ಜವಾಬ್ದಾರಿಯಿಂದ ಇರುತ್ತಾರೆ ಎಂಬುದರ ಮೇಲೆ ಅದು ಅವಲಂಬಿತ. ವೈದ್ಯಕೀಯ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಪೂರೈಕೆಯಲ್ಲಿ ನಾವು ಎಷ್ಟು ಸಮರ್ಥರು ಎಂಬುದನ್ನೂ ಈ ಅಲೆಗಳ ತೀವ್ರತೆ ಹೇಳಬಲ್ಲವು.
- ಡಾ| ಶಶಿಕಿರಣ್ ಉಮಾಕಾಂತ್, ವೈದ್ಯಕೀಯ ಅಧೀಕ್ಷಕರು, ಡಾ| ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.