ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಯತ್ನಿಸುತ್ತಿರೋದು ಹೇಗೆ?
ಸೆ.21ರ ಒಳಗೆ ಸಂಪರ್ಕ ಸಾಧ್ಯವಾಗದಿದ್ದರೆ ಆಸೆ ಕಮರಿದಂತೆ!
Team Udayavani, Sep 11, 2019, 6:19 PM IST
ಬೆಂಗಳೂರು: ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿವಾಗ ಸಂಪರ್ಕ ತಪ್ಪಿದ್ದು ಗೊತ್ತೇ ಇದೆ. ವಿಕ್ರಂ ಲ್ಯಾಂಡರ್ ಇಳಿಯಲು 2.1 ಕಿ.ಮೀ. ದೂರವಿದ್ದಾಗ ಸಂಪರ್ಕ ಕಳೆದುಕೊಂಡು ಪತನವಾಗಿತ್ತು. ಆದರೆ ಅದು ಚೂರು, ಚೂರು ಆಗದಿದ್ದರಿಂದ ಇಸ್ರೋ ವಿಜ್ಞಾನಿಗಳಿಗೆ ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಛಲ ಹುಟ್ಟಿತ್ತು. ವಿಕ್ರಂ ಲ್ಯಾಂಡರ್‌ನ ಆಯುಷ್ಯ ಕೇವಲ 14 ದಿನ ಆಗಿರುವುದರಿಂದ ವಿಜ್ಞಾನಿಗಳು ಸಂಪರ್ಕಕ್ಕೆ ಅವಿರತ ಯತ್ನಿಸುತ್ತಿದ್ದಾರೆ. ಈ ಯತ್ನಗಳು ಹೇಗೆ ಸಾಗಿವೆ? ಮಾಹಿತಿ ಇಲ್ಲಿದೆ.
ಸಂಪರ್ಕ ಸಾಧ್ಯವಿದೆಯೇ?
ಸೆ.21ರ ಮೊದಲು ವಿಕ್ರಂ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಿದರೆ ಮಾತ್ರ ಫಲ. ಈಗ ವಿಕ್ರಂ ಲ್ಯಾಂಡರ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರಿಂದ ಸಂಪರ್ಕ ಸಾಧಿಸುವ ಕೆಲಸ ಸವಾಲಿನದ್ದು. ಅದರ ಸಂಪರ್ಕ ವ್ಯವಸ್ಥೆಗೆ ಏನಾಗಿದೆ ಎಂದು ತಿಳಿಯುವುದರೊಂದಿಗೆ ಇದು ನಿರ್ದಿಷ್ಟ ದಿನದೊಳಗೆ ಆಗಲೇಬೇಕು.
ಯಾಕೆ ಈ ಸಮಯದ ಮಿತಿ?
ಚಂದ್ರನ ಒಂದು ಹಗಲು ಅಥವಾ ರಾತ್ರಿ ಎಂದರೆ 14 ದಿನಗಳಿಗೆ ಸಮ. ವಿಕ್ರಂ ವಿಚಾರದಲ್ಲಿ ಸೆ.21ರ ಬಳಿಕ ಚಂದ್ರನಲ್ಲಿ ಕತ್ತಲಾವರಿಸುವುದರಿಂದ ವಿಕ್ರಂ ಇಳಿದಿರುವ ಸ್ಥಳದಲ್ಲಿ -200 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಲ್ಯಾಂಡರ್ ಅನ್ನು ನಿರ್ಮಾಣ ಮಾಡಿಲ್ಲ. ಅಲ್ಲದೆ ಅದರಲ್ಲಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗುತ್ತದೆ. ಒಂದು ವೇಳೆ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಸಂಪರ್ಕ ಸಾಧ್ಯವಾಗದಿದ್ದರೆ, ಇಸ್ರೋ ಲ್ಯಾಂಡರ್‌ನ ಆಸೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ.
ವಿಕ್ರಂನೊಂದಿಗೆ ಸಂಪರ್ಕ ಪ್ರಯತ್ನ ಹೇಗೆ?
ಎಲ್ಲೋ ಬಿದ್ದಿರುವ ವಸ್ತುಗೊಳೊಂದಿಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳ ಮೂಲಕ ಸಂಪರ್ಕ ಸಾಧ್ಯವಿದೆ. ಬಾಹ್ಯಾಕಾಶ ಸಂವಹನದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಾಂತರಗಳಲ್ಲಿ ಎಸ್ ಬ್ಯಾಂಡ್ (ಮೈಕ್ರೋವೇವ್) ಮತ್ತು ಎಲ್ ಬ್ಯಾಂಡ್ (ರೇಡಿಯೋ ತರಂಗಗಳನ್ನು) ಬಳಸಲಾಗುತ್ತದೆ. ಇವುಗಳ ಮೂಲಕ ಮರು ಸಂಪರ್ಕಕ್ಕೆ ಯತ್ನಿಸಲಾಗಿದೆ. ಸದ್ಯ ಸಂಪರ್ಕವೇ ಕಡಿದುಕೊಂಡಿದೆ. ಲ್ಯಾಂಡರ್‌ನ ಸಂವಹನ ವ್ಯವಸ್ಥೆಯಲ್ಲಿ ದೋಷವುಂಟಾಗಿ ಈ ಸಂಪರ್ಕ ಕಡಿದಿರುವ ಸಾಧ್ಯತೆಯಿದೆ. ಜತೆಗೆ ಸಂಪರ್ಕ ಕಡಿತದ ಪರಿಣಾಮ ನಿಗದಿಗಿಂತಲೂ ವೇಗದಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಇಳಿದಿರುವ ಸಾಧ್ಯತೆ ಇದೆ. ಆಗ ಸಾಧನಗಳಿಗೆ ಹಾನಿಯಾಗಿದ್ದಿರಬಹುದು ಎಂದು ಹೇಳಲಾಗಿದೆ.
ವಿಕ್ರಂ ಲ್ಯಾಂಡರ್ ಉಪಗ್ರಹ ಮತ್ತು ಭೂಮಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಈ ಎರಡೂ ಸಂಪರ್ಕಕ್ಕೆ ಈಗ ಯತ್ನಿಸಲಾಗುತ್ತಿದೆ. ಲ್ಯಾಂಡರ್ ಸ್ವೀಕರಿಸುವ ಸಾಮರ್ಥ್ಯವಿರುವ ನಿರ್ದಿಷ್ಟ ಫ್ರೀಕ್ವೆನ್ಸಿಯ ಸಂದೇಶಗಳನ್ನು ಕಳಿಸಲಾಗುತ್ತಿದೆ. ಇದರಿಂದ ಸಂಪರ್ಕ ಸಾಧ್ಯವಾಗಬಹುದು ಎಂಬ ಆಶಾವಾದವಿದೆ.
ಸಂಪರ್ಕಕ್ಕೆ ಯಾವುದು ಮುಖ್ಯ?
ಲ್ಯಾಂಡರ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸುವ ಒಂದು ಆ್ಯಂಟೆನಾ ಇದೆ. ಈ ಆ್ಯಂಟೆನಾ ಸರಿಯಾಗಿರಬೇಕಾಗುತ್ತದೆ. ಇದಕ್ಕೆ ಒಂದು ವೇಳೆ ಹಾನಿಯಾಗಿದ್ದರೆ, ಮಣ್ಣಿನಲ್ಲಿ ಹೂತಿದ್ದರೆ ಸಂಪರ್ಕ ಕಷ್ಟ. ಆ್ಯಂಟೆನಾ ನೇರವಾಗಿ ಇರಬೇಕಾಗಿದ್ದರೆ ಸಂಪರ್ಕ ಸಾಧ್ಯವಾಗಬಹುದು. ಲ್ಯಾಂಡರ್ ಮಗುಚಿ ಬಿದ್ದಿರುವುದರಿಂದ, ಚೂರಾಗಿ ಹೋಗದಿರುವುದರಿಂದ ಅದಕ್ಕೆ ಏನೂ ಆಗಿಲ್ಲ ಎಂದು ಊಹಿಸಲಾಗಿದೆ. ಆದ್ದರಿಂದ ಉಪಗ್ರಹದ ಮೂಲಕ ಸಂಪರ್ಕಕ್ಕೆ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.