ಇಂಟರ್ನೆಟ್ ಇಲ್ಲದ ‘ಆ’ ಎರಡು ದಿನ ಹೇಗೆ ಕಳೆದಿರಿ? ಯೂತ್ ಏನ್ ಹೇಳಿದ್ದಾರೆ ಓದಿ…

ಇಂತಹ ಸ್ಥಿತಿಯಲ್ಲಿ 48 ಗಂಟೆಗೂ ಹೆಚ್ಚು ಕಾಲ ಇಂಟರ್ನೆಟ್ ಇಲ್ಲದಿದ್ದಾಗ ಏನಾಗಬಹುದು, ಏನು ಮಾಡಬಹುದು

Team Udayavani, Dec 25, 2019, 6:33 PM IST

Mobile

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮೊಬೈಲ್, ಇಂಟರ್ನೆಟ್ ಪ್ರಸ್ತುತ ದಿನಗಳಲ್ಲಿ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸ್ಥಿತಿಯಲ್ಲಿ 48 ಗಂಟೆಗೂ ಹೆಚ್ಚು ಕಾಲ ಇಂಟರ್ನೆಟ್ ಇಲ್ಲದಿದ್ದಾಗ ಏನಾಗಬಹುದು, ಏನು ಮಾಡಬಹುದು ಎಂಬಿತ್ಯಾದಿ ಕುತುಹೂಲ ಸಹಜವೇ. ಈ ಹಿನ್ನೆಲೆಯಲ್ಲಿ ಉದಯವಾಣಿ ವಾಟ್ಸ್ ಗ್ರೂಪ್ ನಲ್ಲಿ ಇಂಟರ್ನೆಟ್ ಇಲ್ಲದೇ ಎರಡು ದಿನ ಹೇಗೆ ಕಳೆದಿರಿ ಎಂಬ ಪ್ರಶ್ನೆಗೆ ಯುವ ಜನತೆ ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ…

ನಮ್ಮ ಕಾಲೇಜಿನ ಸಂಸ್ಕೃತ ವಿಭಾಗದ ಕಡೆಯಿಂದ  ‘ಸಂಸ್ಕೃತ-ಸಂಸ್ಕೃತಿ ಶಿಬಿರ’ ಎಂಬ ಸಂಸ್ಕೃತ ಸಂಭಾಷಣ ಶಿಬಿರವು ಶುಕ್ರವಾರ, ಶನಿವಾರ ಹಾಗು ಭಾನುವಾರ ಸಂಜೆಯ ತನಕ ಇತ್ತು. ಈ ಶಿಬಿರದಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷಿದ್ಧವಾಗಿತ್ತು, ಅಲ್ಲದೆ ಎಲ್ಲವೂ ಸಂಸ್ಕೃತಮಯವಾಗಿತ್ತಾದ್ದರಿಂದ ಯಾವುದೇ ರೀತಿಯ ಬೇಸರವಿಲ್ಲದೆ ಈ ಎರಡು ದಿನಗಳನ್ನು ವಿಶೇಷ ರೀತಿಯಲ್ಲಿ ಹೊಸಕಲಿಕೆಯೊಂದಿಗೆ ಕಳೆದೆ.

ಇಂಚರಾ ಜಿ.ಜಿ ಉಜಿರೆ, ಎಸ್ ಡಿಎಂ ಕಾಲೇಜು

*

ಮನೆಪೂರ್ತಿ ಸ್ವಚ್ಛ ಮಾಡಿದೆ. ಅಜ್ಜ, ಅಮ್ಮ, ಅಪ್ಪನ ಜೊತೆ ಕೂತು ಮಾತನಾಡಿದೆ, ದೇವಸ್ಥಾನಕ್ಕೆ ಹೋದೆ ..ಸುಮಾರು 2ತಿಂಗಳಾಗಿರಬಹುದು ದೇವಸ್ಥಾನದತ್ತ ಮುಖಮಾಡದೆ. ಮನೆ ಪಕ್ಕದ ಗೆಳೆಯರ ಜೊತೆ ಹೊರಗೆ ಶೆಟಲ್ ಆಡಿದೆ.. 2ದಿನ ತುಂಬಾ ಖುಷಿಯಾಗಿ ಕಳೆದೆ …

ಚೈತ್ರಾ ಧರ್ಮಸ್ಥಳ

*

ಅಜ್ಜಿ ಮನೆಗೆ ಹೋಗಿದ್ದೆ. ತಂಗಿಯರ ಜೊತೆ ಆಟವಾಡಿದೆ. ಮನೆ ಕೆಲಸ ಮಾಡಿ ಅಮ್ಮನಿಗೆ ಸಹಾಯ ಮಾಡಿದೆ. ಗೆಳೆಯರ ಮನೆಗೆ ಹೋಗಿ ಅವರೊಂದಿಗೆ ಗದ್ದೆ, ತೋಟ ಸುತ್ತಿ ‌ಸಮಯ ಕಳೆದೆ. 2 ದಿನ ತುಂಬಾ ಖುಷಿಯಿಂದ ಕಳೆದೆ.

ಶ್ವೇತಾ ಮುಂಡ್ರುಪ್ಪಾಡಿ

*

ಪಿಜಿಯಲ್ಲಿ ಇರುವುದರಿಂದ ಸಮಯ ಕಳೆಯುವುದು ತುಂಬಾ ಕಷ್ಟ ಎನಿಸಿತು. ಮೂರು ಸಿನಿಮಾ‌ನೋಡಿದೆ. ಹಾಗೇ ವಿಶ್ವೇಶ್ವರ ಭಟ್ ಅವರ‌‌ ಚಿಕನ್ 65 ಪುಸ್ತಕ ಓದಿ ಮುಗಿಸಿದೆ.

ಸ್ವಾತಿ ನಾಯಕ್

*

ಹಾಸ್ಟೆಲ್ ನಲ್ಲಿ ಯಾವತ್ತೂ ಎಲ್ರು ಅವ್ರವ್ರ ಪಾಡಿಗೆ ಮೊಬೈಲ್ ಹಿಡ್ಕೊಂಡು ಕುತ್ಕೊಂಡಿರ್ತಿದ್ವಿ ಆದ್ರೆ ಆ 2 ದಿನ ಎಲ್ರು ಹಾಲ್ ಅಲ್ಲಿ ಕುತ್ಕೊಂಡು ಗಂಟೆ ಗಂಟೆ ಮಾತಾಡಿದ್ವಿ. ಇಂಟರ್ನೆಟ್ ಇಲ್ದೆ ಇದ್ದಿದ್ರಿಂದ ನಾವೆಲ್ಲಾ ಒಟ್ಟಾಗಿ ಕುತ್ಕೊಂಡು ಮಾತಾಡೋ ಹಾಗಾಯ್ತು. ನಮ್ಮ ಮೊಬೈಲ್ ಗಳಿಗೆ ಸ್ವಲ್ಪ ರೆಸ್ಟ್  ಸಿಕ್ತು ನಮಗೆ ಖುಷಿ ಸಿಕ್ತು. 2ದಿನ ಶಾಂತಿಯುತವಾಗಿತ್ತು.

ಪಲ್ಲವಿ ಕೋಂಬ್ರಾಜೆ

*

ಖುಷಿಯ ವಿಚಾರ ಅಂದ್ರೆ ನನ್ನ ಇಂಟರ್ನೆಟ್ ಬ್ಯಾಲೆನ್ಸ್ ಮುಗಿದಿತ್ತು. ಹಾಗಾಗಿ ಯಾವುದೇ ಚಿಂತೆ ಇಲ್ಲದೆ ಮನೇಲಿ ಕಳೆದೆ

ದೀಪ್ತಿ ಮಡಿಕೇರಿ

*

ಎರಡು ದಿನಗಳ ಕಾಲ ಇಂಟರ್ನೆಟ್  ಸ್ಥಗಿತವಾದದ್ದು ನನಗಂತೂ ಒಂದು ವರವಾಗಿತ್ತು. ಸೆಮಿಸ್ಟರ್ ಪರೀಕ್ಷೆಯು ಸೋಮವಾರ ಇದ್ದುದರಿಂದ ನೆಮ್ಮದಿಯಿಂದ ಎರಡು ದಿನ‌ ಆ ವಿಷಯವನ್ನ ಓದಿ ಮುಗಿಸಿದೆ. ಇಂಟರ್ನೆಟ್ ಇಲ್ಲದೇ ಇದ್ದರೆ ಎಷ್ಟು ಬೇಗ ಅರ್ಥವಾಗಿ ಬಿಡತ್ತೆ ಅನ್ನುವುದು ಮನದಟ್ಟಾಯಿತು.

ವಿಶ್ವಾಸ್.ಎಸ್

*

ಜಂಗಮವಾಣಿ ನನಗೆ ಬಿಟ್ಟಿರುವುದು ಕಷ್ಟವಾಗಿರಲಿಲ್ಲ  ..ಆದರೂ ರಜೆ ಇದ್ದ ಕಾರಣವೇನು ನೆನಪಾಗುತ್ತಿತ್ತು ಕೆಲವೊಮ್ಮೆ.. ಆದರೆ ನಾನು ಅಮ್ಮನ ಜೊತೆ ಸೇರಿ ನಾನಾ ರೀತಿಯ ತಿಂಡಿ ತಿನಸು ಮಾಡುವುದ ಕಲಿತೆ ..ಪಕ್ಕದ ಮನೆಯವರನ್ನು ಸೇರಿಸಿಕೊಂಡು ಹೊಸಹೊಸ ಆಟವಾಡಿದೇವು.. ಒಟ್ಟಾರೆ ಹೇಳಬೇಕಾದರೆ ಖುಷಿ ವಾತಾವರಣ ನನ್ನದಾಗಿತ್ತು ..ಜಂಗಮವಾಣಿಯಲ್ಲಿ ಭಗ್ನವಾಗಿದ್ದ ಗೆಳೆಯರು ಹರಟೆಯಾಡಲು ಸಿಕ್ಕರು.

ಸುಶ್ಮಿತಾ ಎಂ ಸಾಮಾನಿ, ಮಾಲಾರಬೀಡು

*

ಇಂಟರ್ನೆಟ್ ಇಲ್ಲದ 2 ದಿನ ಕೂಡ ಚನ್ನಾಗಿ ಟಿವಿ ನೋಡಿದೆ…  ಟಿವಿ ಎದುರು ಕುತ್ಕೊಂಡ್ರೆ advisement ಆದಾಗ್ಲೂ chnl  change  ಮಾಡ್ತಾ erta ಇರ್ಲಿಲ್ಲ bczmbl ಕೈಯಲ್ಲಿ ಇದ್ರೆ  advisement  ಆಗ್ತಾ ಇರೋದನ್ನ ಗಮನಿಸ್ತಾ ಇರ್ತಿಲಾಯ್ತು… ಮತ್ತೆ ಮನೆಯಲ್ಲಿ ಸ್ವಲ್ಪ ಕೆಲ್ಸಮಾಡಿದೆ. ಅಕ್ಕ ಅಣ್ಣ ಎಲ್ರು ಇಂಟರ್ನೆಟ್ ಇಲ್ಲದರಿಂದ chldhood  memories ನು ಮೆಲುಕು ಹಾಕಲು ನಿಜಕ್ಕೂ ಖುಷಿಯಾಯಿತು.

ನೀತಾರವೀಂದ್ರ ಕರ್ಮಲ

*

ಇಂಟರ್ನೆಟ್ ಇಲ್ಲದೆ ಮೊಬೈಲ್ ಮೂಲೆ ಸೇರಿತ್ತು. ದಿನದ ಸಮಯ ಸ್ವಲ್ಪ ಜಾಸ್ತೀನೇ ಉಳಿದಿತ್ತು.  ಗೆಳೆಯರ ಜೊತೆ ಮಾತುಕತೆ ನಮ್ಮ ನೆನಪಿನ ಪುಟಗಳನ್ನು ಒಮ್ಮೆ ತಿರುವಿ ಹಾಕಿಬಿಟ್ಟಿತ್ತು ನಾವು ನಮಗೇ ಗೊತ್ತಿಲ್ಲದೇ ಮೊಬೈಲ್ ಗೆ ಇಷ್ಟೊಂದು ಅವಲಂಬಿತವಾಗಿದ್ದು ಮೊದಲ ಬಾರಿಗೆ ಅರಿವಿಗೆ ಬಂತು. ಕೈ ಬೆರಳಿಗೆ ಕೆಲಸ ನಿಂತು ಹೋಗಿತ್ತು ಜೊತೆಗಾರರ ಸಹವಾಸ ಇನ್ನೂ ಬೇಕೆನಿಸುತಿತ್ತು. ವಾಟ್ಸಪ್ ಗೆಳೆಯರೂ ಯಾರೂ ಇಲ್ಲಾ ಎಂದೆನಿಸುತಿತ್ತು 2 ದಿನ ಯಾವುದೇ ಸಂಪರ್ಕ ಇಲ್ಲದ ದ್ವೀಪದಲ್ಲಿ ಖುಶಿಯಿಂದ ಕಳೆದೆ ಎಂಬ ಭಾವನೆ ಮನೆ ಮಾಡಿತ್ತು. ಮಾತು ಎರಡು ದಿನ ಗಡಿರೇಖೆ ಇಲ್ಲದೇ ನಲಿದಾಡಿದವು ನಮ್ಮ ಜೊತೆಯೇ ಇರುವ ಸಂತೋಷ, ನಗು, ಮಾತು, ನೆನಪುಗಳು, ಭಾವನೆಗಳು, ಚಟುವಟಿಕೆಗಳು ಎಲ್ಲರೊಂದಿಗೆ ಬೆರೆತುಕೊಂಡು ಹೊಸತನವನ್ನು ಸೃಷ್ಟಿಸಿದವು.

ಅನಿಲ್ ಉಜಿರೆ

*

ಸೆಮಿಸ್ಟರ್ ಪರೀಕ್ಷೆ ಮುಗಿಸಿ ದೂರದ ಮೈಸೂರಿನಿಂದ ಮನೆಗೆ ಬಂದ ನನ್ನನ್ನು ಸ್ವಾಗತಿಸಿದ್ದು “No internet day”. ಮೊದಲಿಗೆ ಅತ್ಯಂತ ಕಸಿವಿಸಿಯಾದರೂ, ಸಮಯ ಕಳೆದಂತೆ ಅದುವೇ ಹಿತವೆಂದು ಅನ್ನಿಸಲಾರಂಭಿಸಿತು. ಶಾಲಾ ಶಿಕ್ಷಕಿಯಾದ ಅಮ್ಮನಿಗೂ ರಜಾ ಘೋಷಿತವಾಗಿತ್ತು. ಮೊಬೈಲ್ ನ ಯೋಚನೆ ಇಲ್ಲದುದರಿಂದಾಗಿ ಆಕೆಯೊಂದಿಗೆ ಮನೆ ಮಂದಿಯೊಂದಿಗೆ ಸಮಯ ಕಳೆಯಲು ಅವಕಾಶವಾಯಿತು. ಒಟ್ಟಿನಲ್ಲಿ ರಜೆಯ ಮಜವನ್ನು ಅನುಭವಿಸಲು ಈ 2 ದಿನ ಬಹಳ ಸಹಕಾರಿಯಾಯಿತು ಎನ್ನಲು ಸಂತಸವಿದೆ.

ಸಾಯಿಶ್ರೀಪದ್ಮ . ಡಿಎಸ್, ಸಂತಫಿಲೋಮಿನಾ’ ಕಾಲೇಜು

*

ಇಂಟರ್ನೆಟ್ ಸ್ಥಗಿತಗೊಂಡಿದ್ದರಿಂದ 2 ದಿನ ಸಮಯ ಕಳೆಯಲು ತುಂಬಾ ಪರದಾಡಿದೆ. ಆದರೆ, ಇದರಿಂದಾಗಿ ನನ್ನ ಉಳಿದ ಕೆಲಸ-ಕಾರ್ಯಗಳು ಸಕ್ರಿಯವಾಗಿ ನಡೆದವು. ಜೊತೆಗೆ ಪುಸ್ತಕದ ಜೊತೆ ಸ್ವಲ್ಪ ಒಲವು ಹೆಚ್ಚಿತು. ಮೊಬೈಲ್  ಜೊತೆ ಕಳೆಯುವ ಸಮಯವನ್ನು ಪುಸ್ತಕದ ಜೊತೆ ಕಳೆದೆ.

ಕಿಶನ್ಪಿ. ಎಂ ಸುಳ್ಯ, ಅಜ್ಜಾವರ

*

ಇಂಟರ್ನೆಟ್ ಇಲ್ಲದ್ದು ನನ್ಗೇನೂ ದೊಡ್ಡ್ ಪ್ರಾಬ್ಲಮ್ ಅಂತ ಅನ್ಸಿಲ್ಲ ..ನಾನು ಜಾಸ್ತಿ mobile use ಮಾಡಲ್ಲ.. ಇಂಟರ್ನೆಟ್ main ಬೇಕಾದ್ದು exam ಟೈಮ್ನಲ್ಲಿ .. Exams ಯಾವ್ದು ಇರ್ಲಿಲ್ಲ ..so ನೆಟ್ ಇಲ್ದೆ ದಿನ ಕಳಿಯೋದು ಕಷ್ಟ ಆಗಿಲ್ಲ.

ಹರ್ಷಿತಾ ಪುಣಚ

*

ಇಂಟರ್ನೆಟ್ ಇಲ್ಲದೆ ಎರಡು ದಿನ ಕಳೆಯಲು ಬಹು ಕಷ್ಟಕರ ಅನಿಸಿದೇನು ನಿಜ.  ಆದರೆ ನನಗೆ ಇಂಟರ್ನೆಟ್ ಕಳೆದುಕೊಂಡದರಿಂದ ಬಾಲ್ಯದ ನೆನಪನ್ನ ನೆನೆಯಲು ದಾರಿ ಮಾಡಿಕೊಟ್ಟಿತು. ಅದೆಷ್ಟೋ ದಿನ ಹಾಗು ತಿಂಗಳುಗಳಿಂದ ಮಾತಾನಾಡದೆ ಇದ್ದ ಗೆಳೆಯ/ಗೆಳತಿಯರು ನೆನಪಾದ್ರೆ ಒಂದು ಕಡೆಯಿಂದ ಮಾತಿನ ಚಕಮಕಿ ರೈಲು ಗಾಡಿಯಂತೆ ಹೊರಟವು,  ಸ್ನೇಹದ ಸಂಬಂಧಗಳು ಗೆದ್ದವು ಮಾತಿನ ಪಟಾಕಿಗಳಂತೆ. ಆದರೆ ಇಲ್ಲಿ ನಾ ಅರಿತದು ಇಂಟರ್ನೆಟ್ ಇಲ್ಲದೆ ಜೀವನ ಖುಷಿಯಿಂದ ಸಾಗುತದೆ ಎಂದು ಯಾಕಂದ್ರೆ ಎಷ್ಟೋ ದಿನದಿಂದ ಮಾಡದ ಚಿತ್ರಗಳು ನನ್ನ ಕೈಗುಂಚದಲ್ಲಿ ಅರಳಿದವು..  ಮಾತುಗಳು ಪಟಾಕಿಯಂತೆ ಹೊರಡುತ್ತಿದ್ದವು.

ಇಂಚರ ಗೌಡ, ಆಳ್ವಾಸ್ ಕಾಲೇಜ್

*

ಅಂತರ್ಜಾಲ ಇಲ್ಲದೆ, ತರಗತಿಗಳು ನಡೆಯುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ತುಸು ಕಷ್ಟವಾಯಿತು. ಇಂಟರ್ನೆಟ್ ಇಲ್ಲದ ಆ ಎರಡು ದಿನವನ್ನು ಪರಿಸರದೊಂದಿಗೆ ಖುಷಿಯಾಗಿಸವಿದೆ. ನದಿಗೆ ಹೋಗಿ ನಾನೂ ಮೀನಾಗಿ ಸಂತೋಷಪಟ್ಟೆ.  ಮಾವನ ಮಕ್ಕಳೊಂದಿಗೆ ಆಟ ಆಡಿ ಎರಡೂ ದಿನವನ್ನೂ ಅತ್ಯಂತ ಸೊಗಸಾಗಿ ಕಳೆದೆ.

ಸೌಜನ್ಯ‌. ಬಿ.ಎಂ. ಕೆಯ್ಯೂರು

ವಿವೇಕಾನಂದ ಪದವಿ ಕಾಲೇಜು ಪುತ್ತೂರು

*

ಇಷ್ಟು ದಿನ ನಾಲ್ಕು ಗೋಡೆಯ ಮಧ್ಯೆ ಮೊಬೈಲ್ ಅನ್ನು ಹಿಡಿದುಕೊಂಡು ನನ್ನ ಪ್ರಪಂಚದಲ್ಲಿ ಮುಳುಗಿದ್ದ ನನಗೆ ಆ ಎರಡು ದಿನ ಮಿಡಿದ ಎರಡು ಹಿರಿಯ ಜೀವದ ಹೃದಯಕ್ಕೆ ನನ್ನ ಹಾಜರಿಯನ್ನು ಕಂಡು ಸಂತೋಷ ಪಟ್ಟಿತು ಅಲ್ಲದೆ ಅವರ ಸೇವೆಯನ್ನು ಮಾಡುವ ಪುಣ್ಯದ ಕೆಲಸವನ್ನು ಮಾಡಿದೆ ಹಾಗೆಯೇ ಧೂಳು ಹಿಡಿದ ಪುಸ್ತಕಗಳಿಗೆ ಹೊಸ ಹೊಸ ಜೀವಕಲೆಯನ್ನು ತುಂಬಿಸಿವುದರ ಜೊತೆಗೆ ಎಲ್ಲವನ್ನು ಓದಿ ಮುಗಿಸಿದೆ. ಅಂತೂ ಇಂತೂ ಆ ಎರಡು ದಿನಗಳು ಲಾಭವಾಗಿದೆ ಹೊರತು ನಷ್ಟವಾಗಿಲ್ಲ.

ದೀಪ್ತಿ‌‌ ಎಚ್. ಕೋಡಪದವು

*

ಮೊಬೈಲ್ ನನ್ನ ಜೀವನದ ಜೊತೆಗಾತಿಯಂತೆ ನನಗೆ …ಇಂಟರ್ನೆಟ್ ಸ್ಥಗಿತಗೊಳಿಸಿದಾಗ… ಗೆಳತಿ ಮಾತನಾಡುತ್ತಿಲ್ಲ ತುಂಬಾ ಸಪ್ಪಗಾದೆ…. ಅಮ್ಮನ ಹಿಂದೆ ಮುಂದೆ ಸುತ್ತಾಡುತ್ತಾ ಅದೇಷ್ಟೋ ವಿಚಾರಗಳು ವಿನಿಮಯ ಮಾಡಿಕೊಂಡು… ಕೆಲಸದಲ್ಲಿ ಮಗ್ನನಾಗಿದ್ದೆ…ಜೊತೆಗೆ… ಏಕಾಂತದ ಅನುಭೂತಿ.. ಜೊತೆಗೆ ಮಧುರ ನೆನಪುಗಳ ತಾಕಲಾಟ… ಮೊಬೈಲ್ ಮರೆತು ಹೊಸ ಲೋಕಕ್ಕೆ ಕಾಲಿಟ್ಟ ಹಾಗೆ….ಪರಿಸರ.. ಸಾಕು ಪ್ರಾಣಿಗಳು..ಪಕ್ಕದ ಮನೆಯಲ್ಲೊಮ್ಮೆ…ಹರಟೆ… ಘಟನೆಯಬಗ್ಗೆ… ಆಗಾಗ ನ್ಯೂಸ್ ನೋಡುವುದು… ನಿಶ್ಯಬ್ದವಾದ ಪೇಟೆಗೆ ತೆರಳಿದ್ದು …..ಮನೆಯ ಮೂಲೆ ಮೂಲೆಗಳಲ್ಲಿ… ಇರುವ ವಸ್ತುಗಳನ್ನು ಹೊರಗೆಳೆಯುವುದು… ಒಟ್ಟಾಗಿ… 2ದಿನದ ಸುಂದರ ಅನುಭವ ಬಾಲ್ಯ ಮರಳಿಸಿತು… ಇಂಟರ್ನೆಟ್ ಗೆ ಮರಳಿದಾಗ.. ಮತ್ತೆ ಮಾತು ಮರೆತು ಮೊಬೈಲ್ ನಲ್ಲಿ ..ಬ್ಯುಸಿ ಆಗಿರುವಂತೆ ಅನ್ನಿಸುತ್ತದೆ.

ಶರಣ್ಯ ಕೋಲ್ಚಾರು

*

‘ನೆಟ್ವರ್ಕ್ ಇಲ್ಲದ ಪಾಠ ಜೀವನಕ್ಕೆ ಒಂದು ಮನ್ನೋಟ ‘ನನ್ನದು ಉಡುಪಿ ಜಿಲ್ಲೆ. ನನ್ನ ಹೆಚ್ಚಿನ ಸ್ನೇಹಿತರು ಇರೋದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಕಳೆದು ಬೆಳಗಾಗೋ ಹೊತ್ತಿಗೆ ಡಸ್ಟ್ ಬಿನ್ ತರ  ಮೇಸೆಜ್ ನಿಂದ  ತುಂಬುತ್ತಿದ್ದ ನನ್ನ ಮೊಬೈಲ್ ನಿರಾಳವಾಗಿ ನಿಶಬ್ದತೆಗೆ ಜಾರಿತು. ಕಾರಣ ತಿಳಿಯಿತು. ಮಂಗಳೂರಿಗೆ ಹೋಗುದಕ್ಕೂ ಆಗೋದಿಲ್ಲ ಎನ್ನುವ ಸಂದೇಶ ಆಗತಾನೆ ತಿಳಿಯುತು. ಇನ್ನೇನಿದ್ದರೂ  2 ದಿನ ಮನೆಯಲ್ಲೇ ಉಳಿಯಬೇಕಿತ್ತು. ಅಮ್ಮ ಹೇಳಿಯೇ ಬಿಟ್ಟರು. ಎರಡು ದಿನ ನೀನೇ ಕೆಲಸ ಮಾಡಬೇಕೆಂದು ಆಜ್ಞೆ ಕೊಟ್ಟೆಬಿಟ್ಟಳು. ಮೈಗಳ್ಳತನದಿಂದ ಕೆಲಸ ಮಾಡುತ್ತಿದ್ದ ನಿನ್ನ ಮನಸ್ಸು ಮೊಬೈಲ್ ನ ಮೇಸೆಜನ್ನೇ ಕಾಯುತ್ತಾ ಕೆಲಸ ಕಲಿಯುವುದನ್ನೇ ಮರೆತಿತ್ತು. ಎನ್ನುವುದು ನನಗೆ ಅವತ್ತೆ ಅನಿಸಿದ್ದು, ತಪ್ಪುವಾಗ ಅಮ್ಮ ಬೈದ ಬೈಗುಳ ಅವಳೊಂದಿಗೆ ಮಾಡಿದ ಕ್ಷಣಿಕ ಜಗಳ ಅಮ್ಮ ತಿದ್ದಿಹೇಳಿದ ಮೃದು ಏಟು ಮತ್ತೋಮ್ಮೆ ನನ್ನ ಬಾಲ್ಯದ ಆಮಧುರ ಕ್ಷಣಕ್ಕೆ ಮುನ್ನುಡಿಯಾಯಿತು. ನನಗೆ ಗೋಚರಿಸಿದ್ದು ಇಷ್ಟೇ suspend in the internet service provided me to recollect valuable moments of my life.

*

ಸುಮಲತಾ ಬಜಗೋಳಿ, ಆಳ್ವಾಸ್  ಕಾಲೇಜು

ನಿಜವಾಗಿ ನನಗೆ ಈಗಲೂ ಮೊಬೈಲ್ ಬಳಸಲು ಸಮಯಾವಕಾಶ ಸಿಗುವುದೇ ಕಷ್ಟ. ಹಾಗಾಗಿ ಇಂಟರ್ನೆಟ್ ಇಲ್ಲದ ಆ ಎರಡು ದಿನ‌ ನನಗೆ ಬೇಜಾರು ಆಗಿಲ್ಲ.

ಪವಿತ್ರ ಸಾಯಾ

*

ನಾನು ರಜೆಯಲ್ಲಿ ಇರುವ ಕಾರಣ ನನಗೆ ಇಂಟರ್ನೆಟ್ ಇಲ್ಲದೆ ಏನೂ ಸಮಸ್ಯೆ ಆಗಲಿಲ್ಲ. ಕೃಷಿ ಕುಟುಂಬ ಆದ ಕಾರಣ ಕೃಷಿ ಕೆಲಸಗಳಲ್ಲಿ ಅಪ್ಪ, ಅಮ್ಮನಿಗೆ ಸಹಾಯ ಮಾಡಿದೆ.

ಲೋಲಾಕ್ಷಿ ಅಲಂಕಾರು

*

ನೋ ಇಂಟರ್ನೆಟ್ ಡೇ ಎನ್ನುವುದು ಮುಖ್ಯ ಅನಿಸಿತ್ತು. ಹಾಸ್ಟೆಲ್ ಸ್ಟೂಡೆಂಟ್ ಆಗಿರುವ ಕಾರಣ ಮೊಬೈಲ್ ಇಲ್ಲದೆ ಎರಡು ದಿನ‌ ಕಾಲ ಕಳೆಯುವುದು ಕೂಡ ಸವಾಲು ಆಗಿದದ್ದು ಸತ್ಯ. ಮೊದಲ ದಿನ ಹಾಸ್ಟೆಲ್ ನಿಂದ ಹೊರಗೆ ಬಿಟ್ಟಿರಲಿಲ್ಲ. ಆದರೂ ಪರೀಕ್ಷಾ ದಿನ ಆಗಿದ್ದ ಕಾರಣ ಓದಲು ಸ್ವಲ್ಪ ಸಹಾಯನು ಆಯಿತು. ಕಾಲೇಜು ಆರಂಭ‌ ಆದ ಬಳಿಕ ಫಸ್ಟ್ ಟೈಮ್ ಇಂಟರ್ನೆಟ್ ಇಲ್ಲದೆ ಕಾಲ ಕಳೆದ ಅನುಭವ ಸಿಕ್ಕಿತು.

– ಸುವರ್ಣ ಹೆಗ್ಡೆ ಉಜಿರೆ

ನಿಜವಾಗಿ ನನಗೆ ಈಗಲೂ ಮೊಬೈಲ್ ಬಳಸಲು ಸಮಯಾವಕಾಶ ಸಿಗುವುದೇ ಕಷ್ಟ. ಹಾಗಾಗಿ ಇಂಟರ್ನೆಟ್ ಇಲ್ಲದ ಆ ಎರಡು ದಿನ‌ ನನಗೆ ಬೇಜಾರು ಆಗಿಲ್ಲ.

– ಪವಿತ್ರ ಸಾಯಾ

ನಾನು ರಜೆಯಲ್ಲಿ ಇರುವ ಕಾರಣ ನನಗೆ ಇಂಟರ್ನೆಟ್ ಇಲ್ಲದೆ ಏನೂ ಸಮಸ್ಯೆ ಆಗಲಿಲ್ಲ. ಕೃಷಿ ಕುಟುಂಬ ಆದ ಕಾರಣ ಕೃಷಿ ಕೆಲಸಗಳಲ್ಲಿ ಅಪ್ಪ, ಅಮ್ಮನಿಗೆ ಸಹಾಯ ಮಾಡಿದೆ.

– ಲೋಲಾಕ್ಷಿ ಅಲಂಕಾರು

ನೋ ಇಂಟರ್ನೆಟ್ ಡೇ ಎನ್ನುವುದು ಮುಖ್ಯ ಅನಿಸಿತ್ತು. ಹಾಸ್ಟೆಲ್ ಸ್ಟೂಡೆಂಟ್ ಆಗಿರುವ ಕಾರಣ ಮೊಬೈಲ್ ಇಲ್ಲದೆ ಎರಡು ದಿನ‌ ಕಾಲ ಕಳೆಯುವುದು ಕೂಡ ಸವಾಲು ಆಗಿದದ್ದು ಸತ್ಯ. ಮೊದಲ ದಿನ ಹಾಸ್ಟೆಲ್ ನಿಂದ ಹೊರಗೆ ಬಿಟ್ಟಿರಲಿಲ್ಲ. ಆದರೂ ಪರೀಕ್ಷಾ ದಿನ ಆಗಿದ್ದ ಕಾರಣ ಓದಲು ಸ್ವಲ್ಪ ಸಹಾಯನು ಆಯಿತು. ಕಾಲೇಜು ಆರಂಭ‌ ಆದ ಬಳಿಕ ಫಸ್ಟ್ ಟೈಮ್ ಇಂಟರ್ನೆಟ್ ಇಲ್ಲದೆ ಕಾಲ ಕಳೆದ ಅನುಭವ ಸಿಕ್ಕಿತು.

– ಸುವರ್ಣ ಹೆಗ್ಡೆ ಉಜಿರೆ

 

 

 

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.