Hunasuru: ನಾಗರಹೊಳೆ ಉದ್ಯಾನದಂಚಿನಲ್ಲಿ ಜಿಂಕೆ ಬೇಟೆ; ಬಂಧನ
ಆರೋಪಿಯಿಂದ ಜಿಂಕೆ ಮಾಂಸ, ಚರ್ಮ, ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ವಶ
Team Udayavani, Aug 26, 2024, 10:25 PM IST
ಹುಣಸೂರು: ನಾಗರ ಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ಪ್ರಾದೇಶಿಕ ಅರಣ್ಯದಲ್ಲಿ ಜಿಂಕೆ ಭೇಟೆಯಾಡಿ ಮಾಂಸ ಸಾಗಿಸುತ್ತಿದ್ದ ವೇಳೆ ಆರೋಪಿಯ ಕಿರಂಗೂರು ಗೇಟ್ ಬಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರೆ, ಉಳಿದಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಉದ್ಯಾನದಂಚಿನ ಹನಗೋಡು ಹೋಬಳಿಯ ಭರತವಾಡಿ ಹಾಡಿಯ ರುದ್ರ ಬಂಧಿತ ಆರೋಪಿ, ಈತನಿಂದ ಎರಡು ಕೆ.ಜಿಯಷ್ಟು ಜಿಂಕೆ ಮಾಂಸ, ಜಿಂಕೆ ಚರ್ಮ, ಕೃತ್ಯಕ್ಕೆ ಬಳಸಿದ್ದ ಬೈಕ್, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಕಪ್ಪನಕಟ್ಟೆ ಹಾಡಿಯ ರಾಮು ಹಾಗೂ ಅವ್ವು ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಜಿಂಕೆಯ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಣಸೂರು ವನ್ಯಜೀವಿ ವಿಭಾಗದ ಆರ್ ಎಫ್ಒ ಸುಬ್ರಹ್ಮಣ್ಯ, ಕೆ.ಇ, ಆನೆಚೌಕೂರು ವಲಯದ ಡಿಆರ್‌ಎಫ್‌ಓ ಶಿವಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಹನಗೋಡಿಗೆ ಸಮೀಪದ ಕಿರಂಗೂರು ಗೇಟ್ ಬಳಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಉಳಿದಿಬ್ಬರ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ಉದಯವಾಣಿಗೆ ತಿಳಿಸಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.