ನಾನೇ ಟಾರ್ಗೆಟ್ ನಂಬರ್ ಒನ್; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹತಾಶೆಯ ಮಾತು
ರಷ್ಯಾ ಬೆಂಬಲಿತ ಚೆಚೆನ್ಯಾ ಹಂತಕರ ಗುಂಪು ಈಗಾಗಲೇ ಕೀವ್ ನಗರಕ್ಕೆ ಲಗ್ಗೆ
Team Udayavani, Feb 26, 2022, 7:15 AM IST
ಕೀವ್: “ರಷ್ಯಾ ಸರ್ಕಾರದಿಂದ ಪರವಾನಗಿ ಪಡೆದಿರುವ ಚೆಚೆನ್ಯಾ ಮೂಲದ ಹಂತಕರು ಕೀವ್‌ನಲ್ಲಿದ್ದಾರೆ. ನಾನು ಟಾರ್ಗೆಟ್ ನಂಬರ್ ಒನ್ ಎನಿಸಿದ್ದೇನೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಈಗ ಏಕಾಂಗಿಯಾಗಿದೆ” ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಮಿಡಿರ್ ಝೆಲೆನ್ಸ್ಕಿ ಹತಾಶೆ ತೋಡಿಕೊಂಡಿದ್ದಾರೆ.
ತಾವು ಅಡಗಿರುವ ಬಂಕರ್‌ನಿಂದಲೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿರುವ ಅವರು, “”ಚೆಚೆನ್ಯಾ ಮೂಲದ ಹಂತಕರ ಪಡೆಯೊಂದನ್ನು ರಷ್ಯಾ, ಕೀವ್ ನಗರದ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಇರಿಸಿದೆ. ಆ ಪಡೆಯ ಪ್ರತಿಯೊಬ್ಬ ಯೋಧನ ಕೈಯ್ಯಲ್ಲಿ ಉಕ್ರೇನ್‌ನ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳ ಫೋಟೋ ಸಹಿತ ವಿವರಗಳಿವೆ. ಅವರೆಲ್ಲರನ್ನು ಸೆರೆಹಿಡಿಯುವುದು ಅಥವಾ ಕೊಲ್ಲುವುದು ಅವರ ಉದ್ದೇಶ. ಆ ಮೂಲಕ, ಉಕ್ರೇನನ್ನು ರಾಜಕೀಯವಾಗಿ ಸೋಲಿಸಲು ರಷ್ಯಾ ಮನಸ್ಸು ಮಾಡಿದೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಜನತೆ ಮನೋಸ್ಥೈರ್ಯ ಕಾಪಾಡಿಕೊಳ್ಳಬೇಕು” ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಲಹೆ ಮಾಡಿದ್ದಾರೆ.
ಇದನ್ನೂ ಓದಿ :ವಿಶ್ವವನ್ನು ಮೂರನೇ ಮಹಾಯುದ್ಧದ ಮೆಟ್ಟಿಲ ಬಳಿ ನಿಲ್ಲಿಸಿದ ಮಾರ್ಷಲ್ ಹಾಗೂ ವಿದೂಷಕ
“ನಾವು ಏಕಾಂಗಿ, ನಮ್ಮ ಸಹಾಯಕ್ಕೆ ಯಾರೂ ಇಲ್ಲ’
“ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ನಾವು ಏಕಾಂಗಿಯಾಗಿದ್ದೇವೆ. ನಮ್ಮ ಜೊತೆಗೂಡಿ ಯುದ್ಧ ಮಾಡುವವರು ಯಾರಿದ್ದಾರೆ? ಅಂಥ ಯಾರೊಬ್ಬರೂ ನನಗೆ ಕಾಣುತ್ತಿಲ್ಲ. ನ್ಯಾಟೋ ಸದಸ್ಯತ್ವ ಪಡೆಯಲು ಯಾರು ನಮಗೆ ಖಾತ್ರಿ ಕೊಡುತ್ತಾರೆ? ಎಲ್ಲರಲ್ಲೂ ಭಯ ಕಾಡುತ್ತಿದೆ. ಹಾಗಾಗಿ, ಯಾರೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ” ಎಂದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ರಾತ್ರಿ ಹಂಚಿಕೊಳ್ಳಲಾಗಿದೆ.
“ರಷ್ಯಾ ಸರ್ಕಾರ, ಉಕ್ರೇನ್ ಮೇಲೆ ದಾಳಿ ಆರಂಭಿಸುತ್ತಲೇ ನಾನು ದೇಶ ಬಿಟ್ಟು ಓಡಿಹೋಗಿದ್ದೇನೆಂದು ವದಂತಿಗಳು ಎದ್ದಿವೆ. ಆದರೆ, ನಾನು ದೇಶ ಬಿಟ್ಟು ಹೋಗಿಲ್ಲ. ನಾನು ಕೀವ್‌ನಲ್ಲೇ ಇದ್ದೇನೆ. ಬಂಕರೊಂದರಲ್ಲಿ ತನ್ನ ಕುಟುಂಬಸ್ಥರು, ಆಪ್ತರೊಡನೆ ಇದ್ದೇನೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.