ಪಾಕ್ ಗ್ರಾಹಕರು, ಸೇನಾ ಘಟಕದ ಸಂಪರ್ಕ! ಇಬ್ರಾಹಿಂ ಪುಲ್ಲಟ್ಟಿಯಿಂದ ಸ್ಫೋಟಕ ಮಾಹಿತಿ ಬಹಿರಂಗ
Team Udayavani, Jun 12, 2021, 7:15 AM IST
ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳ ಮೂಲದ ಇಬ್ರಾಹಿಂ ಪುಲ್ಲಟ್ಟಿ ಪಾಕಿಸ್ಥಾನದಲ್ಲಿ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪೈಕಿ ಯಾರೋ ಒಬ್ಬರು ಪೂರ್ವ ಭಾರತದ ಸೇನಾ ಘಟಕ್ಕೆ ಕರೆ ಮಾಡಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತ ಪಡಿಸಿವೆ.
ಬೆಂಗಳೂರಿನಲ್ಲಿ ಈ ದಂಧೆಯಲ್ಲಿ ಸಕ್ರಿಯನಾಗಿರುವ ಈತ, ಪಾಕ್‌ನ ಲ್ಲಿಯೂ ಸಹಚರರನ್ನು ನೇಮಿಸಿಕೊಂಡಿದ್ದಾನೆ. ಅವರ ಮೂಲಕ ಅಲ್ಲಿಯೂ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದಾನೆ.
ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ ಸುಮಾರು 600 ಅಧಿಕ ಮಂದಿ ಪಾಕ್ ಗ್ರಾಹಕರಿದ್ದು, ನಿತ್ಯ ಅವರು ಭಾರತದಲ್ಲಿ ರುವ ತಮ್ಮ ಸಂಬಂಧಿ, ಸ್ನೇಹಿತರಿಗೆ ಈತನ ಮೂಲಕ ಕರೆ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಪ್ರತೀ ಅಂತಾರಾಷ್ಟ್ರೀಯ ಕರೆಗೆ ತಗಲುವ ವೆಚ್ಚ ಶೇಕಡಾವಾರು ಕಡಿಮೆಯಾಗುತ್ತಿತ್ತು. ಈ ಸಹಾಯಕ್ಕೆ ಗ್ರಾಹಕರು ಮಾಸಿಕ ಇಂತಿಷ್ಟು ಹಣವನ್ನು ಆರೋಪಿಗೆ ನೀಡಬೇಕಿತ್ತು. ಆದರೆ ಇಬ್ರಾಹಿಂ ಈ ಹಣವನ್ನು ಪಾಕ್‌ನಲ್ಲಿರುವ ತನ್ನ ಸಹಚರರಿಂದ ಹವಾಲಾ ಮೂಲಕ ತನಗೆ ವರ್ಗಾಯಿಸಿಕೊಳ್ಳುತ್ತಿದ್ದ.
ಡೇಟಾ ಇಲ್ಲ!
ಸುಮಾರು ಒಂದೂವರೆ ವರ್ಷದಿಂದ ಈ ದಂಧೆ ನಡೆಸುತ್ತಿರುವ ಇಬ್ರಾಹಿಂ ಪುಲ್ಲಟ್ಟಿ ಬಳಿ ಗ್ರಾಹಕರ ವಿವರ ಇಲ್ಲ. ಅದನ್ನು ಆತ ಸಂಗ್ರಹಿಸಿಯೂ ಇಲ್ಲ. ಆತನಿಂದ ವಶಕ್ಕೆ ಪಡೆದುಕೊಂಡಿರುವ ಸಿಮ್ ಬಾಕ್ಸ್ ಮತ್ತು 960 ಸಿಮ್ ಕಾರ್ಡ್‌ಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಕರೆಗಳ ಪರಿವರ್ತನೆಯಿಂದ ಬರುತ್ತಿದ್ದ ಹಣದಲ್ಲಿ ಆತ ಹವಾಲಾ ದಂಧೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಸಿಮ್ ಕಾರ್ಡ್ ದಂಧೆ
ಇಬ್ರಾಹಿಂ ಪುಲ್ಲಟ್ಟಿ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ಆಂಧ್ರ, ತ.ನಾಡಿನಿಂದಲೂ ಸಿಮ್ ಕಾರ್ಡ್‌ಗಳನ್ನು ತರಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ತನ್ನ ಸ್ವಂತ ಊರಾದ ಕೇರಳದ ಮಲಪ್ಪುರಂನಿಂದಲೇ ಹೆಚ್ಚು ಸಿಮ್ ಕಾರ್ಡ್‌ಗಳು ಬಂದಿವೆ ಎಂದು ಆತ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗ್ರಾಹಕರ ಸೋಗಿನಲ್ಲೇ ಕರೆ
ಇಬ್ರಾಹಿಂನ ನೂರಾರು ಗ್ರಾಹಕರ ಪೈಕಿ ಒಬ್ಬ ಅಥವಾ ಕೆಲವರು ಪಾಕ್ ಗುಪ್ತಚರ ಅಧಿಕಾರಿ ಎಂದು ಪೂರ್ವ ಭಾರತದ ಸೇನಾ ಕಚೇರಿಗೆ ಕರೆ ಮಾಡಿರುವ ಸಾಧ್ಯತೆಯಿದೆ. ಆದರೆ ಆತ ಯಾರು, ಯಾವ ಕಾರಣಕ್ಕೆ ಕರೆ ಮಾಡಿದ್ದಾನೆ, ಆತನ ಹಿನ್ನೆಲೆ ಏನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.