ICC Champions Trophy: ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ-ಪಾಕಿಸ್ಥಾನ ಪಂದ್ಯ
Team Udayavani, Jul 3, 2024, 11:21 PM IST
ಹೊಸದಿಲ್ಲಿ: ತನ್ನ ಆತಿಥ್ಯದಲ್ಲಿ ನಡೆಯುವ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ತಾತ್ಕಾಲಿಕ ವೇಳಾ ಪಟ್ಟಿಯೊಂದನ್ನು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಅದರಂತೆ ಭಾರತ-ಪಾಕಿಸ್ಥಾನ ನಡುವಿನ ಪಂದ್ಯವನ್ನು ಮಾರ್ಚ್ ಒಂದರಂದು ಲಾಹೋರ್‌ನಲ್ಲಿ ನಿಗದಿಗೊಳಿಸಿದೆ. ಆದರೆ ಟೀಮ್ ಇಂಡಿಯಾ ಪಾಕಿಸ್ಥಾನಕ್ಕೆ ತೆರಳುವ ಯಾವುದೇ ಸಾಧ್ಯತೆ ಇಲ್ಲ.
ಪಂದ್ಯಾವಳಿ 2025ರ ಫೆ. 19ರಿಂದ ಮಾರ್ಚ್ 9ರ ತನಕ ನಡೆಯಲಿದೆ. ಮಾ. 9ರ ಫೈನಲ್‌ಗೆ ಮಾ. 10 ಮೀಸಲು ದಿನವಾಗಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬ್ರಿಜ್‌ಟೌನ್‌ಗೆ ಆಗಮಿಸಿದ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 15 ಪಂದ್ಯಗಳ ತಾತ್ಕಾಲಿಕ ವೇಳಾ ಪಟ್ಟಿಯೊಂದನ್ನು ತಂದಿದ್ದರು.
3 ತಾಣಗಳಲ್ಲಿ ಪಂದ್ಯಗಳು
ಪಾಕಿಸ್ಥಾನದ 3 ತಾಣಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಲಾಹೋರ್‌ನಲ್ಲಿ 7, ರಾವಲ್ಪಿಂಡಿಯಲ್ಲಿ 5 ಮತ್ತು ಕರಾಚಿಯಲ್ಲಿ 3 ಪಂದ್ಯಗಳನ್ನು ಆಡಲಾಗುವುದು. ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಹಾಗೂ ಒಂದು ಸೆಮಿಫೈನಲ್, ರಾವಲ್ಪಿಂಡಿಯಲ್ಲಿ ಇನ್ನೊಂದು ಸೆಮಿಫೈನಲ್, ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ. ಒಂದು ವೇಳೆ ಭಾರತ ಸೆಮಿಫೈನಲ್ ಪ್ರವೇಶಿಸಿದರೆ ಆ ಪಂದ್ಯವನ್ನು ಲಾಹೋರ್‌ನಲ್ಲಿ ಆಡಲಾಗುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.