ಐಸಿಸಿ ಟೆಸ್ಟ್ ಫೈನಲ್‌ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್
Team Udayavani, Jun 15, 2021, 7:00 AM IST
ಸೌತಾಂಪ್ಟನ್ : ಭಾರತ- ನ್ಯೂಜಿಲ್ಯಾಂಡ್ ನಡುವೆ ಸೌತಾಂಪ್ಟನ್‌ನ “ಏಜಸ್ ಬೌಲ್’ ಕ್ರೀಡಾಂಗಣ ದಲ್ಲಿ ನಡೆಯುವ ಐಸಿಸಿ ಟೆಸ್ಟ್ ಫೈನಲ್‌ಗೆ ನಿರೀಕ್ಷೆಯಂತೆ ಪೇಸ್ ಮತ್ತು ಬೌನ್ಸಿ ಪಿಚ್ ರೂಪುಗೊಳ್ಳಲಿದೆ. ಪಂದ್ಯದ ಕೊನೆಯ ಹಂತದಲ್ಲಿ ಇದು ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂದು ಕ್ಯುರೇಟರ್ ಸೈಮನ್ ಲೀ ಹೇಳಿದ್ದಾರೆ.
“ಇದೊಂದು ತಟಸ್ಥ ತಾಣವಾದ್ದ ರಿಂದ ಪಿಚ್ ನಿರ್ಮಿಸುವುದು ಬಹಳ ಸರಳ. ಐಸಿಸಿ ಮಾರ್ಗದರ್ಶನದಂತೆ ಪಿಚ್ ರೂಪುಗೊಳ್ಳಲಿದೆ. ಎರಡೂ ತಂಡಗಳು ಉತ್ತಮ ಪೈಪೋಟಿ ನೀಡಲು ಅನುಕೂಲವಾಗುವ ರೀತಿಯಲ್ಲಿ ನಾವಿದನ್ನು ತಯಾರಿಸುತ್ತಿದ್ದೇವೆ. ಆರಂಭದಲ್ಲಿ ಇದು ಪೇಸ್ ಮತ್ತು ಬೌನ್ಸ್ ಎಸೆತಗಳಿಗೆ ನೆರವು ನೀಡಲಿದೆ. ಮೂರನೇ ದಿನದ ಬಳಿಕ ಸ್ಪಿನ್ನರ್‌ಗಳಿಗೆ ಸಹಾಯ ಒದಗಿಸಲಿದೆ’ ಎಂದು ಸೈಮನ್ ಲೀ ಹೇಳಿದರು.
ಪಂದ್ಯ ಹೆಚ್ಚು ರೋಚಕ
“ಪೇಸ್ ಇದ್ದಾಗಲೇ ಟೆಸ್ಟ್ ಕ್ರಿಕೆಟ್ ಹೆಚ್ಚು ರೋಚಕಗೊಳ್ಳುತ್ತದೆ. ನಾನು ಕೂಡ ಓರ್ವ ಕ್ರಿಕೆಟ್ ಅಭಿಮಾನಿ. ಎಲ್ಲ ಕ್ರಿಕೆಟ್ ಪ್ರೇಮಿಗಳು ಪ್ರತಿಯೊಂದು ಎಸೆತ ವನ್ನೂ ಗಮನಿಸುವ ರೀತಿಯಲ್ಲಿ ಪಿಚ್ ರಚನೆಗೊಳ್ಳಲಿದೆ. ಕ್ಲಾಸ್ ಬ್ಯಾಟಿಂಗ್ ಹಾಗೂ ಅಮೋಘ ಬೌಲಿಂಗ್ ಸ್ಪೆಲ್- ಎರಡಕ್ಕೂ ಇಲ್ಲಿ ನೆರವು ಲಭಿಸಬೇಕಿದೆ. ಎರಡೂ ತಂಡಗಳಲ್ಲಿ ಉತ್ತಮ ಕ್ವಾಲಿಟಿಯ ಪೇಸ್ ಬೌಲರ್ ಇದ್ದಾರೆ. ಪಂದ್ಯ ಹೆಚ್ಚು ರೋಚಕವಾಗಿ ಸಾಗಲಿದೆ’ ಎಂದು ಲೀ ಆಶಿಸಿದರು.
ವಿಜೇತರಿಗೆ 12 ಕೋ.ರೂ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದವರಿಗೆ 12 ಕೋಟಿ ರೂ.ಗಳ (1.6 ಮಿಲಿಯನ್ ಡಾಲರ್) ದೊಡ್ಡ ಮೊತ್ತದ ಬಹುಮಾನ ಲಭಿಸಲಿದೆ. ಜತೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ “ಗದೆ’ ಹಾಗೂ ಟ್ರೋಫಿಯನ್ನು ನೀಡಲಾಗುವುದು. ಪರಾ ಜಿತ ತಂಡಕ್ಕೆ ಇದರ ಅರ್ಧ ಮೊತ್ತ ಸಿಗಲಿದೆ. ಎಂದು ಐಸಿಸಿ ಸೋಮವಾರ ತಿಳಿಸಿದೆ.
ಕೂಟದ ತೃತೀಯ ಸ್ಥಾನಿ ತಂಡಕ್ಕೆ 450,000 ಡಾಲರ್, 4ನೇ ಸ್ಥಾನ ಪಡೆದ ತಂಡಕ್ಕೆ 350,000 ಡಾಲರ್ ಹಾಗೂ 5ನೇ ಸ್ಥಾನ ಪಡೆದ ತಂಡಕ್ಕೆ 200,000 ಡಾಲರ್ ಮೊತ್ತ ಲಭಿಸಲಿದೆ. ಅನಂತರದ 4 ತಂಡಗಳಿಗೆ ತಲಾ 100,000 ಡಾಲರ್ ನೀಡಲಾಗುವುದು.
ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಮೊದಲೆರಡು ಬಹುಮಾನಗಳ ಒಟ್ಟು ಮೊತ್ತವನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.