ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ನಂ.2 ಪಟ್ಟಕ್ಕೇರಿದ ಆರ್.ಅಶ್ವಿನ್, ಏರಿಕೆ ಕಂಡ ಜಡ್ಡು
Team Udayavani, Feb 15, 2023, 6:16 PM IST
ನವದೆಹಲಿ: ನಾಗಪುರದಲ್ಲಿ ನಡೆದಿದ್ದ ಭಾರತ- ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಭರ್ಜರಿ ಗೆಲುವಿನ ಬಳಿಕ ವಿಶ್ವ ಟೆಸ್ಟ್ ರ‍್ಯಾಂಕಿಂಗ್ ನಲ್ಲೂ ಭಾರತದ ನಾಗಾಲೋಟ ಮುಂದುವರಿದಿದೆ. ಟಿ-20, ಏಕದಿನ, ಟೆಸ್ಟ್ ಹೀಗೆ ಎಲ್ಲಾ ಮಾದರಿಯಲ್ಲಿ ಭಾರತ ನಂ.1 ಪಟ್ಟಕ್ಕೂ ಏರಿದೆ.
ಅದಷ್ಟೇ ಅಲ್ಲದೇ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿ ಪುರುಷರ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ಧಾರೆ.
ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಿತ್ತು ಆರ್.ಅಶ್ವಿನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಭಾರತದ ಮತ್ತೋರ್ವ ಲೆಫ್ಟ್ ಆಫ್- ಸ್ಪಿನ್ನರ್ ರವೀಂದ್ರ ಜಡೇಜಾ, ಕೀಲು ನೋವಿನಿಂದ ಚೇತರಿಸಿಕೊಂಡ ಬಳಿಕವೂ ಪಂದ್ಯದಲ್ಲಿ ಅದ್ಭುತ ಸಾಧನೆ ತೋರಿದ ಪರಿಣಾಮ 16ನೇ ಸ್ಥಾನಕ್ಕೆ ಜಿಗಿತ ಕಂಡಿದ್ಧಾರೆ.
ನಾಗಪುರ ಟೆಸ್ಟ್‌ನಲ್ಲಿ ಈ ಇಬ್ಬರೂ ಸ್ಪಿನ್ನರ್‌ಗಳು ಸೇರಿಕೊಂಡು ಕಾಂಗಾರೂ ಪಡೆಯನ್ನು ಕಾಡಿ 15 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು. ಮೊದಲ ಪಂದ್ಯದಲ್ಲಿ ಭಾರತ 132 ರನ್ನುಗಳ ಅಮೋಘ ಗೆಲುವು ದಾಖಲಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್ನು ನೀಡಿ 5 ವಿಕೆಟ್ ಕಿತ್ತಿದ್ದ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲಿ 42 ರನ್ನಿಗೆ 3 ವಿಕೆಟ್ ಕಬಳಿಸಿದ್ದರು.
36 ವರ್ಷ ವಯಸ್ಸಿನ ಈ ಆಫ್-ಸ್ಪಿನ್ನರ್ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕಪ್ತಾನ ಪ್ಯಾಟ್ ಕಮಿನ್ಸ್ ಅವರಿಗಿಂತ ಕೇವಲ 21 ಪಾಯಿಂಟ್ಸ್ ಹಿಂದಿದ್ದಾರೆ. ಆರ್. ಅಶ್ವಿನ್ ಈ ಹಿಂದೆ 2015 ರಲ್ಲಿ ಟೆಸ್ಟ್ ನಂ.1 ರ್ಯಾಂಕ್‌ಗೆ ಏರಿದ್ದರು.
ಅಲ್ಲದೆ ಬೆನ್ನು ನೋವಿನ ಕಾರಣದಿಂದ ಕಳೆದ ಸೆಪ್ಟೆಂಬರ್‌ನಿಂದಲೇ ತಂಡದಿಂದ ಹೊರಬಿದ್ದಿರುವ ಜಸ್ಪ್ರೀತ್ ಬುಮ್ರಾ 5ನೇ ಸ್ಥಾನದಲ್ಲಿದ್ದಾರೆ.
ಇನ್ನು ಬ್ಯಾಟ್ಸ್ ಮ್ಯಾನ್‌ಗಳ ಪೈಕಿ ಪ್ರಚಂಡ ಫಾರ್ಮ್‌ನಲ್ಲಿರುವ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಏರಿಕೆ ಕಂಡು 8 ನೇ ಸ್ಥಾನಕ್ಕೇರಿದ್ದಾರೆ. ನಾಗಪುರ ಟೆಸ್ಟ್ ಪಂದ್ಯದಲ್ಲಿ ಅವರು 120 ರನ್ನು ಬಾರಿಸಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಬೆಂಡೆತ್ತಿದ್ದರು.
ಅಪಘಾತದಿಂಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರತಾಗಿಯೂ ವಿಕೆಟ್ ಕೀಪರ್ ರಿಷಬ್ ಪಂತ್ ಟಾಪ್-10 ಪಟ್ಟಿಯಲ್ಲಿದ್ದು 7ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಅಲ್ಲದೇ ಎರಡೂ ಇನ್ನಿಂಗ್ಸ್‌ಗಳಲ್ಲಿನ ನೀರಸ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಓಪನರ್‌ಗಳಾದ ಖವಾಜಾ ಮತ್ತು ವಾರ್ನರ್ ಇಬ್ಬರೂ ಕುಸಿತ ಕಂಡಿದ್ದಾರೆ. ವಾರ್ನರ್ 6 ಸ್ಥಾನ ಕುಸಿತ ಕಂಡು 20 ಕ್ಕೆ ಇಳಿದಿದ್ದಾರೆ. ಖವಾಜಾ 2 ಸ್ಥಾನ ಕುಸಿದು 10 ಕ್ಕೆ ಇಳಿದಿದ್ದಾರೆ.
ಒಟ್ಟಾರೆಯಾಗಿ ಆಸ್ಟ್ರೇಲಿಯಾದ ಮಾರ್ನಸ್ ಲಬುಷೇನ್ ಮತ್ತು ಸ್ಟೀವ್ ಸ್ಮಿತ್ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದು, ಪಾಕಿಸ್ತಾನ ಕಪ್ತಾನ ಬಾಬರ್ ಅಜಂ ಮೂರನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ಪೈಕಿ ಅಕ್ಷರ್ ಪಟೇಲ್ 6 ಸ್ಥಾನ ನೆಗೆತ ಕಂಡು 7ನೇ ಸ್ಥಾನಕ್ಕೇರಿದ್ದಾರೆ. ನಾಗಪುರ ಟೆಸ್ಟ್‌ನಲ್ಲಿ ಅವರ ಬ್ಯಾಟ್‌ನಿಂದ 84 ರನ್ನುಗಳು ಸಿಡಿತದಿತ್ತು ಅನ್ನುವಂತದ್ದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.