ಐಸಿಸಿ ವಿಶ್ವ ಟೆಸ್ಟ್ ಫೈನಲ್ ಪಂದ್ಯ ಡ್ರಾ ಆದರೆ? ಶೀಘ್ರವೇ ಐಸಿಸಿಯಿಂದ ನಿಯಮಾವಳಿ ಬಿಡುಗಡೆ
Team Udayavani, May 20, 2021, 6:50 AM IST
ಹೊಸದಿಲ್ಲಿ: ಹೌದು, ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾ ಆದರೆ, ಅಥವಾ ಟೈ ಆಗಿ ಅಂತ್ಯ ಕಂಡರೆ, ಇದಕ್ಕೂ ಮಿಗಿಲಾಗಿ ವಾಶೌಟ್ ಆದರೆ ಆಗ ಚಾಂಪಿಯನ್ ಆಗುವವರು ಯಾರು? ಅಕಸ್ಮಾತ್ ಒಂದು ಇನ್ನಿಂಗ್ಸ್ ಕೂಡ ಪೂರ್ತಿಗೊಳ್ಳದೆ ಹೋದರೆ ವಿಜೇತ ತಂಡವನ್ನು ಹೇಗೆ ನಿರ್ಧರಿಸಲಾಗುತ್ತದೆ? ಇಂಥದೊಂದು ಕುತೂಹಲ ಕ್ರಿಕೆಟ್ ಅಭಿಮಾನಿಗಳನ್ನು ಕಾಡತೊಡಗಿದೆ.
ಇದಕ್ಕೆ ಶೀಘ್ರದಲ್ಲೇ ಐಸಿಸಿ ನಿಯಮಾವಳಿಯೊಂದನ್ನು ರೂಪಿಸಲಿದೆ. ಆಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭಿಸಲಿದೆ.
ಪ್ರತಿಷ್ಠೆಯ ಕಾಳಗ
ಸಾಮಾನ್ಯವಾಗಿ ಏಕದಿನ ಅಥವಾ ಟಿ20 ಪಂದ್ಯಗಳಲ್ಲಿ ಇಂಥ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲಿ ಸೂಪರ್ ಓವರ್ ಅಥವಾ ಡಕ್‌ವರ್ತ್-ಲೂಯಿಸ್ ನಿಯಮದ ಮೂಲಕ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಳ್ಳಲಾಗುತ್ತದೆ. ಸೂಪರ್ ಓವರ್ ಕೂಡ ಟೈ ಆದರೆ ಅತ್ಯಧಿಕ ಬೌಂಡರಿ ಬಾರಿಸಿದ ತಂಡವನ್ನು ಚಾಂಪಿಯನ್ ಎಂದು ತೀರ್ಮಾನಿಸಿದ ವಿಚಿತ್ರ ಘಟನೆಗೆ 2019ರ ಏಕದಿನ ವಿಶ್ವಕಪ್ ಫೈನಲ್ ಸಾಕ್ಷಿಯಾಗಿದ್ದನ್ನು ಮರೆಯಲಾದೀತೇ!
ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸಾಧ್ಯವಿಲ್ಲ. ಅದರಲ್ಲೂ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಎಂಬುದು ಅತ್ಯಂತ ಪ್ರತಿಷ್ಠೆಯ ಕಾಳಗ. ಇಲ್ಲಿ ತಂಡವೊಂದು ಜಯ ಸಾಧಿಸಿ ಟ್ರೋಫಿ ಎತ್ತಿದಾಗಲೇ ಅದಕ್ಕೊಂದು ಶೋಭೆ, ಪಂದ್ಯಾವಳಿ ಗೊಂದು ಸಾರ್ಥಕ್ಯ.
ಟೆಸ್ಟ್ ಪಂದ್ಯದಲ್ಲಿ ಡ್ರಾ ಫಲಿತಾಂಶಕ್ಕೂ ಮಾನ್ಯತೆ ಇದೆ. ಸೋಲನ್ನು ತಪ್ಪಿಸಿಕೊಳ್ಳಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ತಂಡ ಡ್ರಾಗೆ ಪ್ರಯತ್ನಿಸುವುದು ಮಾಮೂಲು ಪ್ರಕ್ರಿಯೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಇಂಥದೇ ಸಂದರ್ಭ ಎದುರಾಗಬಹುದು. ಆಗ ಚಾಂಪಿಯನ್ ತಂಡವೊಂದನ್ನು ನಿರ್ಧರಿ ಸಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕೇನು ಮಾನದಂಡ ಎಂಬುದು ಅತ್ಯಂತ ಕುತೂಹಲದ ಸಂಗತಿ.
ಸ್ಪಷ್ಟ ನಿಯಮಾವಳಿ ಅಗತ್ಯ
“ಇದು ದ್ವಿಪಕ್ಷೀಯ ಸರಣಿ ಅಲ್ಲ. ಹೀಗಾಗಿ ನಾವು ಪಂದ್ಯದ ನಿಯಮವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ. ಇಲ್ಲಿ ಮೂರು ಅಂಶಗಳಿವೆ. ಪಂದ್ಯ ಟೈ ಆದರೆ, ವಾಶೌಟ್ ಆದರೆ ಅಥವಾ ತಂಡಗಳ ಒಂದು ಇನ್ನಿಂಗ್ಸ್ ಕೂಡ ಮುಗಿಯದೇ ಹೋದರೆ ಆಗ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ತಿಳಿಯಬೇಕಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಲವು ಸಾಧ್ಯತೆಗಳು…
1. ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸುವುದು.
2. ಮೀಸಲು ದಿನವನ್ನು ನೀಡಿ ಸ್ಪಷ್ಟ ಫಲಿತಾಂಶ ಬರುವ ತನಕ ಕಾಯುವುದು.
3. ಐದು ದಿನಗಳ ಮಿತಿಯನ್ನು ತೆಗೆದು ಫಲಿತಾಂಶ ಬರುವ ತನಕವೂ ಪಂದ್ಯವನ್ನು ಮುಂದುವರಿಸುವುದು (ಟೈಮ್ ಲೆಸ್ ಟೆಸ್ಟ್).
4. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ತಂಡವನ್ನು ಚಾಂಪಿಯನ್ ಎಂದು ತೀರ್ಮಾನಿಸುವುದು.
5. “ಲೀಗ್’ ಹಂತದಲ್ಲಿ ಅತ್ಯಧಿಕ ಅಂಕ ಹೊಂದಿದ್ದ ತಂಡವೇ ಚಾಂಪಿಯನ್ ಎಂಬ ತೀರ್ಮಾನಕ್ಕೆ ಬರುವುದು.
6. ಪ್ರತೀ ಹಂತದದಲ್ಲಿ (ಪ್ರತೀ 100 ರನ್ನಿಗೆ, ಪ್ರತೀ 5 ವಿಕೆಟಿಗೆ) ಅಂಕಗಳನ್ನು ನೀಡಿ, ಅತ್ಯಧಿಕ ಅಂಕ ಗಳಿಸಿದ ತಂಡಕ್ಕೆ ಟ್ರೋಫಿ ನೀಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.